Advertisement

ಇಂಟರ್‌ನೆಟ್‌ ಸ್ಥಗಿತ: ಭಾರತವೇ ಫ‌ಸ್ಟ್‌

08:07 AM Apr 29, 2022 | Team Udayavani |

ನವದೆಹಲಿ: ವಿಶ್ವದಲ್ಲಿ 2021ರಲ್ಲಿ ಅತಿ ಹೆಚ್ಚು ಬಾರಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನ ಪಡೆದುಕೊಂಡಿದೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಭಾರತ ಅಗ್ರ ಸ್ಥಾನದಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಟೆಕ್‌ ಸಂಸ್ಥೆ “ಅಕ್ಸೆಸ್‌ ನೌ’ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿಶ್ವದ ಪ್ರಮುಖ 34 ರಾಷ್ಟ್ರಗಳಲ್ಲಿ 2021ರಲ್ಲಿ ಒಟ್ಟು 182 ಬಾರಿ ಅಧಿಕಾರಿಗಳು ಇಂಟರ್‌ನೆಟ್‌ ಸ್ಥಗಿತಗೊಳಿಸಲು ಆದೇಶ ನೀಡಿದ್ದಾರೆ. ಅದರಲ್ಲಿ 106 ಬಾರಿ ಭಾರತದಲ್ಲಿಯೇ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

ಹೋರಾಟ ನಿಯಂತ್ರಣ, ಆನ್‌ಲೈನ್‌ ವಂಚನೆ ತಡೆಯುವುದಕ್ಕೆ ಹೆಚ್ಚಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ ದೇಶಗಳ ಪಟ್ಟಿಯಲ್ಲಿ 15 ಬಾರಿ ಇಂಟರ್‌ನೆಟ್‌ ಸ್ಥಗಿತಗೊಳಿಸಿದ ಮಯನ್ಮಾರ್‌ 2ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next