Advertisement

ಶ್ರೀಲಂಕಾದಲ್ಲಿ 13ಎ ಸಂಪೂರ್ಣ ಅನುಷ್ಠಾನ ‘ನಿರ್ಣಾಯಕ’: ವಿದೇಶಾಂಗ ಸಚಿವ ಜೈಶಂಕರ್

03:02 PM Jan 20, 2023 | Team Udayavani |

ಕೊಲಂಬೊ: ಅಲ್ಪಸಂಖ್ಯಾತ ತಮಿಳು ಸಮುದಾಯದೊಂದಿಗೆ ಸಮನ್ವಯ ಸಾಧಿಸಲು ಶ್ರೀಲಂಕಾದಲ್ಲಿ 13 ನೇ ತಿದ್ದುಪಡಿಯ ಸಂಪೂರ್ಣ ಅನುಷ್ಠಾನವನ್ನು ಭಾರತವು “ನಿರ್ಣಾಯಕ” ಎಂದು ಪರಿಗಣಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಹೇಳಿದ್ದಾರೆ. ಯಾವಾಗಲೂ ದ್ವೀಪ ರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಭಾರತ ಬೆಂಬಲಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.

Advertisement

1987 ರ ಭಾರತ-ಶ್ರೀಲಂಕಾ ಒಪ್ಪಂದದ ನಂತರ ತರಲಾದ 13 ನೇ ತಿದ್ದುಪಡಿಯನ್ನು ಜಾರಿಗೆ ತರಲು ಭಾರತವು ಶ್ರೀಲಂಕಾದ ಮೇಲೆ ಒತ್ತಡ ಹೇರುತ್ತಿದೆ. 13ಎ ತಮಿಳು ಸಮುದಾಯಕ್ಕೆ ಅಧಿಕಾರ ವಿಕೇಂದ್ರೀಕರಣವನ್ನು ಒದಗಿಸುತ್ತದೆ.

ಇಂದು ಕೊಲಂಬೊದಲ್ಲಿ ಪ್ರಧಾನಿ ದಿನೇಶ್ ಗುಣವರ್ಧನ ಅವರನ್ನು ಭೇಟಿಯಾಗಲು ಸಂತಸವಾಯಿತು. ಸಾರಿಗೆ ಮತ್ತು ಶಿಕ್ಷಣ ಸೇರಿದಂತೆ ನಮ್ಮ ದ್ವಿಪಕ್ಷೀಯ ಸಹಕಾರವನ್ನು ಚರ್ಚಿಸಲಾಗಿದೆ. ಜನರೊಂದಿಗೆ ಜನರ ಸಂಬಂಧವನ್ನು ತೀವ್ರಗೊಳಿಸುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದ ಸಂವಿಧಾನದ 13 ನೇ ತಿದ್ದುಪಡಿಯ ಸಂಪೂರ್ಣ ಅನುಷ್ಠಾನವು ಎಲ್ಲಾ ಸಮುದಾಯಗಳ ನಡುವೆ ಏಕತೆಯನ್ನು ಸುಗಮಗೊಳಿಸುತ್ತದೆ ಇದರಿಂದ ಅವರು ಒಂದಾಗಿ ಬದುಕಬಹುದಾಗಿದೆ. .

ಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ವಿದೇಶಾಂಗ ಸಚಿವ ಅಲಿ ಸಬ್ರಿ ಅವರೊಂದಿಗಿನ ಮಾತುಕತೆಯ ನಂತರ ಪತ್ರಿಕಾ ಹೇಳಿಕೆಯಲ್ಲಿ ಜೈಶಂಕರ್, “ಶ್ರೀಲಂಕಾದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ” ಎಂದು ಹೇಳಿದರು.

Advertisement

ಶ್ರೀಲಂಕಾ ಸರ್ಕಾರವು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಯೊಂದಿಗಿನ ಯುದ್ಧದ ನಂತರ ತಮಿಳು ಗುಂಪುಗಳ ವಿರುದ್ಧ ಆಕ್ರಮಣಕಾರಿಯಾಗಿದೆ. 2009 ರಲ್ಲಿ ಶ್ರೀಲಂಕಾ ಸೇನೆಯು ಎಲ್‌ಟಿಟಿಇ ಸರ್ವೋಚ್ಚ ನಾಯಕ ವೇಲುಪಿಳ್ಳೈ ಪ್ರಭಾಕರನ್‌ನನ್ನು ಕೊನೆಗೊಳಿಸುವ ಮೊದಲು ಸುಮಾರು 30 ವರ್ಷಗಳ ಕಾಲ ಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಪ್ರತ್ಯೇಕ ತಮಿಳು ತಾಯ್ನಾಡಿನ ಮಿಲಿಟರಿ ಕಾರ್ಯಾಚರಣೆಯನ್ನು ಸಂಘಟನೆ ನಡೆಸಿತ್ತು.

ಶ್ರೀಲಂಕಾ ಸರ್ಕಾರದ ಅಂಕಿಅಂಶಗಳ ಪ್ರಕಾರ, ಉತ್ತರ ಮತ್ತು ಪೂರ್ವದಲ್ಲಿ ಲಂಕಾ ತಮಿಳರೊಂದಿಗಿನ ಮೂರು ದಶಕಗಳ ಕ್ರೂರ ಯುದ್ಧ ಸೇರಿದಂತೆ ವಿವಿಧ ಸಂಘರ್ಷಗಳಿಂದ 20,000 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದು, ಕನಿಷ್ಠ 100,000 ಮಂದಿ ಜೀವಗಳನ್ನು ಕಳೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next