Advertisement

ಭಾರತ-ಚೀನಾ ಮಾತುಕತೆ ಮುಕ್ತಾಯ

09:34 PM Oct 10, 2021 | Team Udayavani |

ಲಡಾಖ್‌/ನವದೆಹಲಿ: ಭಾರತ ಮತ್ತು ಚೀನಾ ನಡುವಿನ 13ನೇ ಸುತ್ತಿನ ಸೇನಾಧಿಕಾರಿಗಳ ಮಟ್ಟ ಮಾತುಕತೆ ಭಾನುವಾರ ಲಡಾಖ್‌ನ ಚೀನಾ ಭಾಗವಾಗಿರುವ ಮೋಲ್ಡೋ ಎಂಬಲ್ಲಿ ನಡೆದಿದೆ.

Advertisement

ಎಂಟು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಬಿಕ್ಕಟ್ಟಿನ ಬಗ್ಗೆ ಚರ್ಚೆಗಳು ನಡೆದಿವೆ ಮತ್ತು ಕ್ಷಿಪ್ರವಾಗಿ ಸೇನೆ ವಾಪಸ್‌ ಪಡೆಯಬೇಕು ಎಂಬ ಬಗ್ಗೆ ಚೀನಾಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

ವಿಶೇಷವಾಗಿ ಪಟ್ರೋಲಿಂಗ್‌ ಪಾಯಿಂಟ್‌ 15ರಿಂದ ಸೇನೆ ಹಿಂಪಡೆಯುವ ಬಗ್ಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಾಗಿಲ್ಲ.

ಬೆಳಗ್ಗೆ 10.30ಕ್ಕೆ ಶುರುವಾದ ಮಾತುಕತೆ ರಾತ್ರಿ 7 ಗಂಟೆಗೆ ಮುಕ್ತಾಯವಾಗಿದೆ. ಮುಂಚೂಣಿ ನೆಲೆಗಳಿಂದ ಎರಡೂ ದೇಶಗಳ ಸೇನೆಗಳನ್ನು ವಾಪಸ್‌ ಕರೆಯಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ.

ಇದನ್ನೂ ಓದಿ:ಬ್ಯೂಟಿಫುಲ್ ತಾಜ್‌ಮಹಲ್‌ ಎಂದ ಡೆನ್ಮಾರ್ಕ್‌ ಪ್ರಧಾನಮಂತ್ರಿ ಮೆಟೆ ಫ್ರೆಡ್ರಿಕ್ಸನ್‌

Advertisement

ಈ ಮಾತುಕತೆಗೂ ಮುನ್ನ ಕಳೆದ ವಾರ ಚೀನಾದ 200 ಮಂದಿ ಯೋಧರು ಅರುಣಾಚಲ ಪ್ರದೇಶದ ತವಾಂಗ್‌ಗೆ ಅಕ್ರಮವಾಗಿ ಪ್ರವೇಶಿಸಿ, ದೇಶದ ಯೋಧರು ನಿರ್ಮಿಸಿದ್ದ ಬಂಕರ್‌ ಮತ್ತು ಇತರ ಕಾಮಗಾರಿಗಳನ್ನು ಪರೀಕ್ಷಿಸಿದ್ದರು. ಕೆಲ ಹೊತ್ತಿನ ಕಾಲ ಚೀನಾ ಯೋಧರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next