Advertisement

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ ಶೇ. 43ರಷ್ಟು ಭಾರತೀಯರು..!

05:39 PM Jun 16, 2021 | |

ನವ ದೆಹಲಿ : ಚೀನಾ ಗಡಿ ವಿವಾದ ಆದಾಗಿನಿಂದ ಭಾರತದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರ ನಿರಂತರವಾಗಿ ನಡೆಯುತ್ತಾ ಬಂದಿದೆ. ಕೇಂದ್ರ ಸರ್ಕಾರವೇ ಚೀನಾ ಮೂಲದ ಮೊಬೈ ಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ್ದು ನಮ್ಮ ಕಣ್ಮುಂದೆ ಇದೆ.

Advertisement

ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಚೀನಾ ಉತ್ಪನ್ನವನ್ನು ಕಡೆಗಣಿಸಿದವರ ಸಂಖ್ಯೆ ದೊಡ್ಡದಿದೆ ಎಂದು ತಿಳಿದು ಬಂದಿದೆ. ಕಳೆದ ಒಂದು ವರ್ಷದ ಅಂತರದಲ್ಲಿ ಸುಮಾರು ಶೇಕಡಾ 43 ರಷ್ಟು ಮಂದಿ ಚೀನಾ ಉತ್ಪನ್ನವನ್ನು ಖರೀದಿಸಿಲ್ಲ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಇದನ್ನೂ ಓದಿ : ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಅವರಿಂದ ಪಡಿತರ ಕಿಟ್ ವಿತರಣೆ

ಹೌದು, ಭಾರತ ಹಾಗೂ ಚೀನಾ ನಡುವಿನ ಲಡಾಕ್ ಗಡಿ ವಿವಾದ ಹೆಚ್ಚಳವಾದಾಗಿನಿಂದ ಉಭಯ ದೇಶಗಳ ನಡುವೆ ಅನೇಕ ವ್ಯಾಪಾರ ವಹಿವಾಟಿನಲ್ಲೂ ಕೂಡ ವ್ಯತ್ಯಾಸವಾಗಿದೆ. ಈ ಉದ್ವಗ್ನತೆ ಹೆಚ್ಚಾದ ಕಾರಣದಿಂದಾಗಿ ವ್ಯವಹಾರದ ಮೇಲೆ ಬಹಳ ದೊಡ್ಡ ಪರಿಣಾಮ ಬಿದ್ದಿದ್ದು, ಮೇಡ್ ಇನ್ ಚೀನಾ ಉತ್ಪನ್ನಗಳನ್ನು ಖರೀದಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ತಿಳಿಸಿದೆ.

ಭಾರತದ 281 ಜಿಲ್ಲೆಗಳಿಂದ 18,000 ಮಂದಿಯ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ಶೇ 43ರಷ್ಟು ಭಾರತೀಯ ಗ್ರಾಹಕರು ಚೀನಾ ಉತ್ಪನ್ನವನ್ನು ಖರೀದಿ ಮಾಡಿಲ್ಲ. ಶೇಕಡಾ 34ರಷ್ಟು ಮಂದಿ ತಾವು ಒಂದೆರಡು ಚೀನಾ ಉತ್ಪನ್ನಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ.

Advertisement

ಶೇ .14ರಷ್ಟು ಮಂದಿ 3ರಿಂದ 5 ವಸ್ತುಗಳು, ಶೇ 7ರಷ್ಟು ಮಂದಿ 5ರಿಂದ 10 ವಸ್ತುಗಳು, ಶೇ 3ರಷ್ಟು ಮಂದಿ 10- 15 ಉತ್ಪನ್ನ, ಶೇ 1ರಷ್ಟು ಮಂದಿ 20ಕ್ಕೂ ಹೆಚ್ಚು, ಮತ್ತು ಇತರ ಶೇ 1ರಷ್ಟು ಮಂದಿ 15ರಿಂದ 20 ಪ್ರಾಡಕ್ಟ್​ಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡೊರುವುದನ್ನು ಲೋಕಲ್ ಸರ್ಕಲ್ಸ್ ಸಮೀಕ್ಷೆಯಲ್ಲಿ ಹೇಳಿಕೊಂಡಿದೆ.

ಭಾರತದ ಮಧ್ಯಂತರ ಸರಕುಗಳ ಆಮದಿನಲ್ಲಿ ಚೀನಾದ ಪಾಲು ಶೇಕಡಾ 12 ರಷ್ಟಿದ್ದರೆ, ಬಂಡವಾಳ ಸರಕುಗಳಿಗೆ ಇದು ಶೇಕಡಾ 30 ಮತ್ತು ಅಂತಿಮ ಗ್ರಾಹಕ ಸರಕುಗಳಿಗೆ ಶೇ 26 ರಷ್ಟು ಅವಲಂಬಿಸಿದೆ. ಮಕ್ಕಳ ಆಟಿಕಗಳು, ವಿದ್ಯುತ್ ಯಂತ್ರೋಪಕರಣಗಳು, ಔಷಧಗಳು ಸೇರಿದಂತೆ ಹಲವಾರು ಉತ್ಪನ್ನಗಳಿಗೆ ಭಾರತ ದೇಶವು ಚೀನಾದೇಶವನ್ನು ಅವಲಿಂಭಿಸಿದೆ. ಆದರೇ, ಈ ಸಮೀಕ್ಷೆಯ ವರದಿ ಪ್ರಕಾರ, ಚೀನಾ ಉತ್ಪನ್ನಗಳ ಬೇಡಿಕೆ ಕಡಿಮೆಯಾಗಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ :  ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next