Advertisement

Li Shangfu: ನಾಳೆ ಭಾರತಕ್ಕೆ ಚೀನಾ ರಕ್ಷಣಾ ಸಚಿವ

11:38 PM Apr 25, 2023 | Team Udayavani |

ಬೀಜಿಂಗ್‌: ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ರಕ್ಷಣಾ ಸಚಿವರ ಸಭೆಗೆ ಚೀನಾದ ರಕ್ಷಣಾ ಸಚಿವ ಜ. ಲಿ ಶಾಂಗ್‌ಫು ಆಗಮಿಸಲಿದ್ದಾರೆ.

Advertisement

ನವದೆಹಲಿಯಲ್ಲಿ ಏ.27, 28ರಂದು ನಡೆಯುವ ಈ ಸಭೆ ಹಲವು ಕಾರಣಕ್ಕೆ ಮಹತ್ವದ ಪಡೆದಿದೆ. ಭಾರತ-ಚೀನಾ ನಡುವೆ ಪೂರ್ವ ಲಡಾಖ್‌ ವಿಚಾರದಲ್ಲಿ 2020ರಿಂದ ಬಿಕ್ಕಟ್ಟು ಜಾಸ್ತಿಯಾಗಿದೆ. ಹೀಗಾಗಿ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಶಾಂಗ್‌ಫು ನಡುವೆ ಮಹತ್ವದ ಮಾತುಕತೆಯನ್ನು ನಿರೀಕ್ಷಿಸಲಾಗಿದೆ.

ಇದೇ ವೇಳೆ ಶಾಂಗ್‌ಫು ಬೇರೆ ಬೇರೆ ದೇಶಗಳೊಂದಿಗೂ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಆದರೆ ಮುಂಚಿನಿಂದಲೂ ಚೀನಾ ನರಿಬುದ್ದಿಯನ್ನೇ ಅನುಸರಿಸಿಕೊಂಡು ಬಂದಿರುವುದರಿಂದ, ಈ ಸಭೆಯಿಂದಲೂ ಹೇಳಿಕೊಳ್ಳುವ ಪರಿಣಾಮವನ್ನು ನಿರೀಕ್ಷಿಸುವುದು ಅಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next