Advertisement

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

12:09 AM Nov 16, 2024 | Team Udayavani |

ಹೊಸದಿಲ್ಲಿ: ಪೂರ್ವ ಲಡಾಖ್‌ನಲ್ಲಿ ಭಾರತ-ಚೀನ ಸೇನೆಗಳ ವಾಪಸಾತಿ ಬಳಿ ಮೊದಲ ಬಾರಿಗೆ ಎರಡೂ ದೇಶಗಳ ರಕ್ಷಣ ಸಚಿವರ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.

Advertisement

ನ.20 ರಿಂದ ಲಾವೋಸ್‌ನಲ್ಲಿ ಆರಂಭವಾಗಲಿರುವ 2 ದಿನಗಳ ಏಷ್ಯನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ರಕ್ಷಣ ಸಚಿವ ರಾಜನಾಥ ಸಿಂಗ್‌ ಮತ್ತು ಚೀನದ ಡೊಂಗ್‌ ಜುನ್‌ ಮಧ್ಯೆ ಮಾತುಕತೆ ನಿಗದಿಯಾಗಿದ್ದು, ವಿಶ್ವಾಸಾರ್ಹತೆ ಪುನಃಸ್ಥಾಪಿಸುವ ಬಗ್ಗೆ ಪ್ರಯತ್ನಗಳು ನಡೆಯಲಿವೆ.

ಕಳೆದ ವರ್ಷದ ಎಪ್ರಿಲ್‌ನಲ್ಲಿ 2 ದೇಶಗಳ ರಕ್ಷಣ ಸಚಿವರ ಭೇಟಿಯಾಗಿದ್ದರು. ನರೇಂದ್ರ ಮತ್ತು ಕ್ಸಿ ಜಿನ್‌ಪಿಂಗ್‌ ಭೇಟಿ ಬಳಿಕ ಲಡಾಖ್‌ನಲ್ಲಿ ಸೇನೆಗಳ ವಾಪಸಾತಿ ನಡೆದು ಗಸ್ತು ಆರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next