Advertisement

71 ನೇ ಸೇನಾ ದಿನಾಚರಣೆ ; ದಿಟ್ಟ ಯೋಧರಿಗೆ ಶುಭಾಶಯಗಳು 

06:32 AM Jan 15, 2019 | |

ಹೊಸದಿಲ್ಲಿ: ದೇಶಾದ್ಯಂತ 71 ನೇ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಫೀಲ್ಡ್‌ ಮಾರ್ಷಲ್‌ ಕೊಡಂದೆರ ಮಾದಪ್ಪ ಕಾರಿಯಪ್ಪ ಅವರು 1949 ಜನವರಿ 15 ರಂದು ಸೇನಾ ದಂಡನಾಯಕನಾಗಿ ಅಧಿಕಾರ ವಹಿಸಿಕೊಂಡ ನೆನಪಿಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

Advertisement

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಟ್ವೀಟ್‌ ಮಾಡುವ ಮೂಲಕ ಭಾರತೀಯ ಸೇನೆಯ ಎಲ್ಲಾ ಪುರುಷ ಮತ್ತು ಮಹಿಳಾ ಯೋಧರು, ನಿವೃತ್ತ ಸೇನಾನಿಗಳು ಮತ್ತು ಕುಟುಂಬ ಸದಸ್ಯರಿಗೆ  ಶುಭಾಶಯ ಕೋರಿದ್ದಾರೆ. ನಮ್ಮ ಸ್ವಾತಂತ್ರ್ಯದ ರಕ್ಷರು ನೀವು. ಸೈನಿಕರು ಸದಾ ಜಾಗೃತರಾಗಿ ಇರುತ್ತಾರೆ ಎನ್ನುವ ಕಾರಣಕ್ಕೆ ನಾಗರಿಕರು ನೆಮ್ಮದಿಯ ನಿದ್ದೆಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

ಸೇನಾ ದಿವಸದ ಸಂದರ್ಭದಲ್ಲಿ ನಮ್ಮ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ನನ್ನ  ತುಂಬಿದ ಶುಭ ಕಾಮನೆಗಳು. ನಮ್ಮ ದೇಶವಾಸಿಗಳಿಗೆಲ್ಲಾ ನಮ್ಮ ಸೈನಿಕರ ಹಠ ಸಂಕಲ್ಪ ಮತ್ತು ಸಮರ್ಪಣೆಯಲ್ಲಿ ಗರ್ವವಿದೆ. ನಾನು ಅವರ ಅದಮ್ಯ ಸಾಹಸ ಮತ್ತು ವೀರತೆಗೆ ನಾನು ಪ್ರಣಾಮ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next