Advertisement
ಕಿವೀಸ್ ಸರಣಿಯಲ್ಲಿ ಒಟ್ಟು 263 ರನ್ ಗಳಿಸಿದ ಕೊಹ್ಲಿ 889 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ನೆಗೆದರು. ಇದು ಭಾರತೀಯ ಬ್ಯಾಟ್ಸ್‌ಮನ್ ಒಬ್ಬನ ಸರ್ವಾಧಿಕ ರೇಟಿಂಗ್ ಅಂಕ. 1998ರಲ್ಲಿ ಸಚಿನ್ ತೆಂಡುಲ್ಕರ್ 887 ಅಂಕ ಗಳಿಸಿದ್ದು ಈವರೆಗಿನ ಭಾರತೀಯ ದಾಖಲೆಯಾಗಿತ್ತು.
ಏಕದಿನ ಬೌಲಿಂಗ್ ಸರದಿಯಲ್ಲಿ ಭಾರತದ ಸ್ವಿಂಗ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಅವರ ಅತ್ಯುತ್ತಮ ರ್‍ಯಾಂಕಿಂಗ್. ನ್ಯೂಜಿಲ್ಯಾಂಡ್ ಸರಣಿಯಲ್ಲಿ ಬುಮ್ರಾ 6 ವಿಕೆಟ್ ಹಾರಿಸಿದ್ದರು. ಈ ವರ್ಷ ಆಡಿದ 20 ಏಕದಿನ ಪಂದ್ಯಗಳಲ್ಲಿ ಬುಮ್ರಾ ಭಾರತದ ಪರ ಸರ್ವಾಧಿಕ 35 ವಿಕೆಟ್ ಉರುಳಿಸಿದ್ದಾರೆ. ಪಾಕಿಸ್ಥಾನದ ಹಸನ್ ಅಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
Related Articles
ನ್ಯೂಜಿಲ್ಯಾಂಡನ್ನು 2-1 ಅಂತರದಿಂದ ಸೋಲಿಸಿದ ಭಾರತ ಹಾಗೂ ಬಾಂಗ್ಲಾದೇಶವನ್ನು 3-0 ಅಂತರದಿಂದ ಮಣಿಸಿದ ದಕ್ಷಿಣ ಆಫ್ರಿಕಾ ನಡುವೆ ಈಗ ಆಗ್ರಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಎರಡೂ ತಂಡಗಳು ತಲಾ 120 ಅಂಕಗಳನ್ನು ಹೊಂದಿವೆ. ಆದರೆ ದಶಮಾಂಶ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾವೇ ಮುಂದಿದೆ. ಅದು ಒಟ್ಟು 6,386 ರೇಟಿಂಗ್ ಅಂಕ ಹೊಂದಿದ್ದರೆ, ಭಾರತ 6,379 ಅಂಕ ಹೊಂದಿದೆ. ಎರಡೂ ತಂಡಗಳು ನಿಗದಿತ ಅವಧಿಯಲ್ಲಿ 53 ಪಂದ್ಯಗಳನ್ನಾಡಿವೆ. ನ್ಯೂಜಿಲ್ಯಾಂಡನ್ನು 3-0 ಅಂತರದಿಂದ ಕೆಡವಿದ್ದರೆ ಭಾರತ ನಂ.1 ಏಕದಿನ ತಂಡವಾಗಿ ಮೂಡಿಬರುತ್ತಿತ್ತು.
Advertisement
ಟಾಪ್-10 ಏಕದಿನ ತಂಡಗಳು: 1. ದಕ್ಷಿಣ ಆಫ್ರಿಕಾ (120), 2. ಭಾರತ (120), 3. ಆಸ್ಟ್ರೇಲಿಯ (114), 4. ಇಂಗ್ಲೆಂಡ್ (114), 5. ನ್ಯೂಜಿಲ್ಯಾಂಡ್ (111), 6. ಪಾಕಿಸ್ಥಾನ (99), 7. ಬಾಂಗ್ಲಾದೇಶ (92), 8. ಶ್ರೀಲಂಕಾ (83), 9. ವೆಸ್ಟ್ ಇಂಡೀಸ್ (77), 10. ಅಫ್ಘಾನಿಸ್ಥಾನ (54).
ಟಾಪ್-10 ಏಕದಿನ ಬ್ಯಾಟ್ಸ್‌ಮನ್: 1. ವಿರಾಟ್ ಕೊಹ್ಲಿ (889), 2. ಎಬಿ ಡಿ ವಿಲಿಯರ್ (872), 3. ಡೇವಿಡ್ ವಾರ್ನರ್ (865), 4. ಬಾಬರ್ ಆಜಂ (846), 5. ಕ್ವಿಂಟನ್ ಡಿ ಕಾಕ್ (808), 6. ಜೋ ರೂಟ್ (802), 7. ರೋಹಿತ್ ಶರ್ಮ (799), 8. ಫಾ ಡು ಪ್ಲೆಸಿಸ್ (773), 9. ಹಾಶಿಮ್ ಆಮ್ಲ (766), 10. ಕೇನ್ ವಿಲಿಯಮ್ಸನ್ (760).
ಟಾಪ್-10 ಏಕದಿನ ಬೌಲರ್: 1. ಹಸನ್ ಅಲಿ (759), 2. ಇಮ್ರಾನ್ ತಾಹಿರ್ (743), 3. ಜಸ್‌ಪ್ರೀತ್ ಬುಮ್ರಾ (719), 4. ಜೋಶ್ ಹ್ಯಾಝಲ್‌ವುಡ್ (714), 5. ಕಾಗಿಸೊ ರಬಾಡ (708), 6. ಮಿಚೆಲ್ ಸ್ಟಾರ್ಕ್ (684), 7. ಟ್ರೆಂಟ್ ಬೌಲ್ಟ್ (671), 8. ಅಕ್ಷರ್ ಪಟೇಲ್ (653), 9. ರಶೀದ್ ಖಾನ್ (647). 10. ಲಿಯಮ್ ಪ್ಲಂಕೆಟ್ (646).