ಮುಂಬೈ: ಭಾರತ ತಂಡವು ಟಿ20 ವಿಶ್ವಕಪ್ ಕೂಟದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸದೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಆಟಗಾರ ಗೌತಮ್ ಗಂಭೀರ್ ಮಾಡಿದರು.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್ ಗೂ ಸಿದ್ದತೆಯಂತೆ ಮೂರು ಪಂದ್ಯಗಳ ಸರಣಿ ಆಡಲಿದೆ. ಸೆ.20ರಿಂದ ಆರಂಭವಾಗುವ ಈ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ.
ಸ್ಟಾರ್ ಸ್ಪೋರ್ಟ್ಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಕೂಟದಲ್ಲಿ ಭಾರತವು ಆಸೀಸ್ ವಿರುದ್ಧ ಗೆದ್ದರೆ ಮಾತ್ರ ವಿಶ್ವಕಪ್ ಗೆಲ್ಲಬಹುದು. ಈ ಮೊದಲೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಕಾಂಗರೂಗಳನ್ನು ಗೆಲ್ಲದೆ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ” ಎಂದಿದ್ದಾರೆ.
“2007ರ ಟಿ20 ವಿಶ್ವಕಪ್ ನೋಡಿ, ನಾವು ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದೆವು. 2011ರ ವಿಶ್ವಕಪ್ ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರ ವಿರುದ್ಧ ಜಯಿಸಿದ್ದೆವು. ಆಸ್ಟ್ರೇಲಿಯಾ ತಂಡವು ಅತ್ಯಂತ ಕಠಿಣ ತಂಡಗಳಲ್ಲಿ ಒಂದಾಗಿದ್ದು, ಅವರ ವಿರುದ್ಧ ಗೆಲ್ಲಲೇಬೇಕು” ಎಂದು ಗಂಭೀರ್ ಹೇಳಿದರು.
ರಾಹುಲ್ ಬದಲಿಗೆ ವಿರಾಟ್ ಇನ್ನಿಂಗ್ ಆರಂಭಿಸಬೇಕು ಎಂಬ ಹಲವರ ವಾದಕ್ಕೆ ಪ್ರತಿಕ್ರಿಯೆ ನೀಡಿದ ಗೌತಮ್, “ಇಂತಹ ಹೇಳಿಕೆಗಳಿಂದ ಒಬ್ಬ ಆಟಗಾರನಿಗೆ ಅಭದ್ರತೆ ಭಾವನೆ ಉಂಟು ಮಾಡುತ್ತದೆ. ಭಾರತದಲ್ಲಿ ಇದೇ ಸಮಸ್ಯೆ. ಇದೀಗ ವಿರಾಟ್ ಕೊಹ್ಲಿ ಮೊನ್ನೆ ಶತಕ ಬಾರಿಸಿದರೆಂದು, ಜನರು ರೋಹಿತ್ ಮತ್ತು ರಾಹುಲ್ ರ ಸಾಧನೆಯನ್ನು ಮರೆಯಲಾಗಿದೆ. ಇದೀಗ ರಾಹುಲ್ ಮೊದಲ ಪಂದ್ಯದಲ್ಲಿ ವಿಫಲರಾದರೆ ಮತ್ತೆ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು ಎಂಬ ಚರ್ಚೆ ಆರಂಭವಾಗುತ್ತದೆ” ಎಂದಿದ್ದಾರೆ.