Advertisement

ಭಾರತ-ಇಸ್ರೇಲ್‌ ನಡುವಿನ ಕ್ಷಿಪಣಿ ಒಪ್ಪಂದ ರದ್ದು 

06:50 AM Jan 04, 2018 | Harsha Rao |

ಹೊಸದಿಲ್ಲಿ: ಇಸ್ರೇಲ್‌ನಿಂದ 1600 ಕ್ಷಿಪಣಿಗಳನ್ನು ಖರೀದಿ ಸುವ 3,250 ಕೋಟಿ ರೂ. ಮೊತ್ತದ ಒಪ್ಪಂದವನ್ನು ಭಾರತ ರದ್ದುಗೊಳಿಸಿದೆ. ಇಸ್ರೇಲ್‌ ರಫೇಲ್‌ ಅಡ್ವಾನ್ಸ್‌ಡ್‌ ಡಿಫೆನ್ಸ್‌ ಸಿಸ್ಟಮ್ಸ್‌ನಿಂದ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

Advertisement

ಕೆಲವು ತಿಂಗಳ ಹಿಂದೆಯೇ ರಕ್ಷಣಾ ಇಲಾಖೆ ಈ ರದ್ದತಿಯ ಬಗ್ಗೆ ನಿರ್ಧರಿಸಿತ್ತಾದರೂ, ಕಳೆದ ವಾರವಷ್ಟೇ ಇದನ್ನು ಘೋಷಿಸಲಾಗಿದೆ. ಸ್ಪೈಕ್‌ ಕ್ಷಿಪಣಿಗಳನ್ನು ತ್ವರಿತವಾಗಿ ಫಿರಂಗಿಯನ್ನು ಗುರಿಯಿಟ್ಟು ಉಡಾಯಿಸಬಹುದಾಗಿದೆ. 2014ರಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ಅಮೆರಿಕ ಜಾವೆಲಿನ್‌ ಕ್ಷಿಪಣಿಗಳನ್ನು ಒದಗಿಸುವುದಾಗಿ ಹೇಳಿತ್ತಾದರೂ, ಹೆಚ್ಚು ಶಕ್ತಿಶಾಲಿಯಾದ ಸ್ಪೈಕ್‌ಗೆ ಆರ್ಡರ್‌ ಮಾಡಲಾಗಿತ್ತು. ಅಷ್ಟೇ ಅಲ್ಲ, ಹೈದರಾಬಾದ್‌ನಲ್ಲಿ ಈ ಸಂಬಂಧ ಕಲ್ಯಾಣಿ ಗ್ರೂಪ್‌ ಸಹಭಾಗಿತ್ವದಲ್ಲಿ ಉತ್ಪಾದನಾ ಘಟಕವೂ ನಿರ್ಮಾಣ ವಾಗಿತ್ತು. ಆದರೆ ಈ ಮಧ್ಯೆ ಡಿಆರ್‌ಡಿಒ ಅತ್ಯಾಧುನಿಕ ಕ್ಷಿಪಣಿಯನ್ನು ನಾಲ್ಕು ವರ್ಷಗಳಲ್ಲಿ ಉತ್ಪಾದಿಸುವುದಾಗಿ ಭರವಸೆ ನೀಡಿದ್ದರಿಂದ ಈ ಒಪ್ಪಂದ ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next