Advertisement

2ನೇ ಟಿ20: ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

10:36 PM Jul 09, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಸಾಂಘಿಕ ಪ್ರದರ್ಶನದ ಮೂಲಕ ಇಂಗ್ಲೆಂಡನ್ನು ದ್ವಿತೀಯ ಪಂದ್ಯದಲ್ಲೂ ಬಗ್ಗುಬಡಿದ ಭಾರತ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

Advertisement

ಶನಿವಾರದ ಮುಖಾಮುಖಿಯನ್ನು ರೋಹಿತ್‌ ಪಡೆ 49 ರನ್ನುಗಳ ಅಂತರದಿಂದ ಗೆದ್ದಿತು. 3ನೇ ಪಂದ್ಯ ರವಿವಾರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 8 ವಿಕೆಟಿಗೆ 170 ರನ್‌ ಪೇರಿಸಿದರೆ, ಇಂಗ್ಲೆಂಡ್‌ ಮೊದಲ ಎಸೆತದಲ್ಲೇ ಕುಸಿತಕ್ಕೆ ಸಿಲುಕಿ 17 ಓವರ್‌ಗಳಲ್ಲಿ 121ಕ್ಕೆ ಉರುಳಿತು. ಬಿಗ್‌ ಹಿಟ್ಟರ್‌ಗಳಾದ ರಾಯ್‌, ಬಟ್ಲರ್‌, ಮಲಾನ್‌, ಲಿವಿಂಗ್‌ಸ್ಟೋನ್‌ ವೈಫ‌ಲ್ಯ ಇಂಗ್ಲೆಂಡಿಗೆ ಮುಳುವಾಯಿತು. ಭುವಿ, ಬುಮ್ರಾ, ಚಹಲ್‌ ಘಾತಕ ಬೌಲಿಂಗ್‌ ಸಂಘಟಿಸಿದರು.

ರಿಷಭ್‌ ಪಂತ್‌ ಓಪನರ್‌
ರೋಹಿತ್‌ ಶರ್ಮ ಅವರೊಂದಿಗೆ ರಿಷಭ್‌ ಪಂತ್‌ ಆರಂಭಿಕನಾಗಿ ಇಳಿದರು. ಇದೊಂದು ಅಚ್ಚರಿ ಎನಿಸಿತು. ರೋಹಿತ್‌ಗೆ 4ನೇ ಎಸೆತದಲ್ಲೇ ರಾಯ್‌ ಅವರಿಂದ ಜೀವದಾನ ಸಿಕ್ಕಿತು. ಅಂತಿಮ ಎಸೆತವನ್ನು ಸಿಕ್ಸರ್‌ಗೆ ರವಾನಿಸುವ ಮೂಲಕ ಅಬ್ಬರಿಸುವ ಸೂಚನೆ ನೀಡಿದರು. ಪಂತ್‌ ಕೂಡ ಸಿಡಿಯತೊಡಗಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದುಬರತೊಡಗಿತು. ಈ ಜೋಡಿ 4.5 ಓವರ್‌ಗಳಲ್ಲಿ 49 ರನ್‌ ಪೇರಿಸಿತು. ಆಗ ರೋಹಿತ್‌ ಅವರನ್ನು ಔಟ್‌ ಮಾಡುವ ಮೂಲಕ ಗ್ಲೀಸನ್‌ ಚೊಚ್ಚಲ ಟಿ20 ವಿಕೆಟ್‌ ಕಿತ್ತರು. ರೋಹಿತ್‌ ಗಳಿಕೆ 20 ಎಸೆತಗಳಿಂದ 31 ರನ್‌ (4 ಬೌಂಡರಿ, 2 ಸಿಕ್ಸರ್‌). ಪವರ್‌ ಪ್ಲೇ ಸ್ಕೋರ್‌ ಒಂದಕ್ಕೆ 61.

ತಮ್ಮ ಮುಂದಿನ ಓವರ್‌ನಲ್ಲಿ ಗ್ಲೀಸನ್‌ ಭಾರತಕ್ಕೆ ಅವಳಿ ಆಘಾತವಿಕ್ಕಿದರು. ವಿರಾಟ್‌ ಕೊಹ್ಲಿ ಮತ್ತು ಪಂತ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿದರು. ಕೊಹ್ಲಿ ಆಟ ಒಂದೇ ರನ್ನಿಗೆ ಮುಗಿಯಿತು. ಪಂತ್‌ 15 ಎಸೆತಗಳಿಂದ 26 ರನ್‌ ಬಾರಿಸಿದರು (4 ಫೋರ್‌, 1 ಸಿಕ್ಸರ್‌). ಗ್ಲೀಸನ್‌ “ಡಬಲ್‌ ವಿಕೆಟ್‌ ಮೇಡನ್‌’ ಸಾಧಿಸಿ ಮೆರೆದರು. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 3ಕ್ಕೆ 86 ರನ್‌ ಆಗಿತ್ತು.

Advertisement

11ನೇ ಓವರ್‌ನಲ್ಲಿ ಜೋರ್ಡನ್‌ ಅವಳಿ ಆಘಾತವಿಕ್ಕಿದರು. ಸತತ ಎಸೆತಗಳಲ್ಲಿ ಸೂರ್ಯ ಕುಮಾರ್‌ ಮತ್ತು ಪಾಂಡ್ಯ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ರೋಹಿತ್‌ ಪಡೆ ತೀವ್ರ ಒತ್ತಡಕ್ಕೆ ಸಿಲುಕಿತು. ಜಡೇಜ-ಕಾರ್ತಿಕ್‌ ವಿಕೆಟ್‌ ಕಾಯ್ದುಕೊಳ್ಳುವುದು ಅನಿವಾರ್ಯವಾಯಿತು. ಡೆತ್‌ ಓವರ್‌ ಆರಂಭವಾಗುವ ವೇಳೆ ಭಾರತ 5ಕ್ಕೆ 120ರಲ್ಲಿತ್ತು. ರವೀಂದ್ರ ಜಡೇಜ ಅವರ ಅಜೇಯ 46 ರನ್‌ (29 ಎಸೆತ, 5 ಬೌಂಡರಿ) ನೆರವಿನಿಂದ ಸವಾಲಿನ ಮೊತ್ತ ಸಾಧ್ಯವಾಯಿತು. ಕೊನೆಯ 5 ಓವರ್‌ಗಳಲ್ಲಿ ಭರ್ತಿ 50 ರನ್‌ ಒಟ್ಟುಗೂಡಿತು. ಜಡೇಜ ಭಾರತದ ಸರದಿಯ ಟಾಪ್‌ ಸ್ಕೋರರ್‌ ಎನಿಸಿದರು.

ಹೂಡಾಗೆ ಇಲ್ಲ ಜಾಗ!
ಪ್ರತಿಯೊಂದು ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುತ್ತ ಬಂದ ದೀಪಕ್‌ ಹೂಡಾ ಅವರನ್ನು ಈ ಮುಖಾಮುಖೀಯಿಂದ ಕೈಬಿಟ್ಟಿದ್ದು ಅಚ್ಚರಿಯಾಗಿ ಕಂಡಿತು. ಜತೆಗೆ ಸೀನಿಯರ್‌ ಆಟಗಾರರಿಗಾಗಿ ಇಶಾನ್‌ ಕಿಶನ್‌, ಅಕ್ಷರ್‌ ಪಟೇಲ್‌ ಕೂಡ ಸ್ಥಾನ ಕಳೆದುಕೊಂಡರು. ಆರ್ಷದೀಪ್‌ ಸಿಂಗ್‌ ಮೊದಲ ಪಂದ್ಯಕ್ಕಷ್ಟೇ ತಂಡದಲ್ಲಿದ್ದರು. ಇವರ ಬದಲು ಕೊಹ್ಲಿ, ಪಂತ್‌, ಜಡೇಜ ಮತ್ತು ಬುಮ್ರಾ ಕಾಣಿಸಿಕೊಂಡರು.

ಇಂಗ್ಲೆಂಡ್‌ ತಂಡದಲ್ಲಿ 2 ಬದಲಾವಣೆ ಕಂಡುಬಂತು. ರೀಸ್‌ ಟಾಪ್ಲಿ ಮತ್ತು ಟೈಮಲ್‌ ಮಿಲ್ಸ್‌ ಬದಲು ಡೇವಿಡ್‌ ವಿಲ್ಲಿ ಹಾಗೂ ರಿಚರ್ಡ್‌ ಗ್ಲೀಸನ್‌ ಆಡಲಿಳಿದರು. ಮಧ್ಯಮ ವೇಗಿ ಗ್ಲೀಸನ್‌ ಅವರಿಗೆ ಇದು ಪದಾರ್ಪಣ ಪಂದ್ಯವಾಗಿತ್ತು.

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಸಿ ಬಟ್ಲರ್‌ ಬಿ ಗ್ಲೀಸನ್‌ 31
ರಿಷಭ್‌ ಪಂತ್‌ ಸಿ ಬಟ್ಲರ್‌ ಬಿ ಗ್ಲೀಸನ್‌ 26
ವಿರಾಟ್‌ ಕೊಹ್ಲಿ ಸಿ ಮಲಾನ್‌ ಬಿ ಗ್ಲೀಸನ್‌ 1
ಸೂರ್ಯಕುಮಾರ್‌ ಸಿ ಕರನ್‌ ಬಿ ಜೋರ್ಡನ್‌ 15
ಹಾರ್ದಿಕ್‌ ಪಾಂಡ್ಯ ಸಿ ಮಲಾನ್‌ ಬಿ ಜೋರ್ಡನ್‌ 12
ರವೀಂದ್ರ ಜಡೇಜ ಔಟಾಗದೆ 46
ದಿನೇಶ್‌ ಕಾರ್ತಿಕ್‌ ರನೌಟ್‌ 12
ಹರ್ಷಲ್‌ ಪಟೇಲ್‌ ಸಿ ಗ್ಲೀಸನ್‌ ಬಿ ಜೋರ್ಡನ್‌ 13
ಭುವನೇಶ್ವರ್‌ ಕುಮಾರ್‌ ಸಿ ವಿಲ್ಲಿ ಬಿ ಜೋರ್ಡನ್‌ 2
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 0
ಇತರ 12
ಒಟ್ಟು (8 ವಿಕೆಟಿಗೆ) 170
ವಿಕೆಟ್‌ ಪತನ: 1-49, 2-61, 3-61, 4-89, 5-89, 6-122, 7-145, 8-159.
ಬೌಲಿಂಗ್‌: ಡೇವಿಡ್‌ ವಿಲ್ಲಿ 3-0-35-0
ಸ್ಯಾಮ್‌ ಕರನ್‌ 3-0-26-0
ಮೊಯಿನ್‌ ಅಲಿ 2-0-23-0
ರಿಚರ್ಡ್‌ ಗ್ಲೀಸನ್‌ 4-1-15-3
ಮ್ಯಾಥ್ಯೂ ಪಾರ್ಕಿನ್ಸನ್‌ 2-0-21-0
ಕ್ರಿಸ್‌ ಜೋರ್ಡನ್‌ 4-0-27-4
ಲಿಯಮ್‌ ಲಿವಿಂಗ್‌ಸ್ಟೋನ್‌ 2-0-23-0

ಇಂಗ್ಲೆಂಡ್‌
ಜೇಸನ್‌ ರಾಯ್‌ ಸಿ ರೋಹಿತ್‌ ಬಿ ಭುವನೇಶ್ವರ್‌ 0
ಜಾಸ್‌ ಬಟ್ಲರ್‌ ಸಿ ಪಂತ್‌ ಬಿ ಭುವನೇಶ್ವರ್‌ 4
ಡೇವಿಡ್‌ ಮಲಾನ್‌ ಸಿ ಹರ್ಷಲ್‌ ಬಿ ಚಹಲ್‌ 19
ಲಿವಿಂಗ್‌ಸ್ಟೋನ್‌ ಬಿ ಬುಮ್ರಾ 15
ಹ್ಯಾರಿ ಬ್ರೂಕ್‌ ಸಿ ಸೂರ್ಯಕುಮಾರ್‌ ಬಿ ಚಹಲ್‌ 8
ಮೊಯಿನ್‌ ಅಲಿ ಸಿ ರೋಹಿತ್‌ ಬಿ ಪಾಂಡ್ಯ 35
ಸ್ಯಾಮ್‌ ಕರನ್‌ ಸಿ ಕರನ್‌ ಬಿ ಬುಮ್ರಾ 2
ಡೇವಿಡ್‌ ವಿಲ್ಲಿ ಔಟಾಗದೆ 33
ಕ್ರಿಸ್‌ ಜೋರ್ಡನ್‌ ರನೌಟ್‌ 1
ರಿಚರ್ಡ್‌ ಗ್ಲೀಸನ್‌ ಸಿ ಕೊಹ್ಲಿ ಬಿ ಭುವನೇಶ್ವರ್‌ 2
ಮ್ಯಾಥ್ಯೂ ಪಾರ್ಕಿನ್ಸನ್‌ ಬಿ ಹರ್ಷಲ್‌ 0
ಇತರ 2
ಒಟ್ಟು (17 ಓವರ್‌ಗಳಲ್ಲಿ ಆಲೌಟ್‌) 121
ವಿಕೆಟ್‌ ಪತನ: 1-0, 2-11, 3-27, 4-41, 5-55, 6-60, 7-94, 8-95, 9-109.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 3-1-15-3
ಜಸ್‌ಪ್ರೀತ್‌ ಬುಮ್ರಾ 3-1-10-2
ಹಾರ್ದಿಕ್‌ ಪಾಂಡ್ಯ 3-0-29-1
ಹರ್ಷಲ್‌ ಪಟೇಲ್‌ 4-0-34-1
ಯಜುವೇಂದ್ರ ಚಹಲ್‌ 2-0-10-2
ರವೀಂದ್ರ ಜಡೇಜ 2-0-22-0

Advertisement

Udayavani is now on Telegram. Click here to join our channel and stay updated with the latest news.

Next