Advertisement
ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಸಿದ್ಧತೆ ನಡೆಸಿದೆ. ಈ ಅಣೆಕಟ್ಟು ನಿರ್ಮಾಣವಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಆಕ್ಷೇಪಗಳನ್ನು ಬದಿಗೊತ್ತಿ ಅಣೆಕಟ್ಟು ನಿರ್ಮಿಸಲು ಚೀನ ಮುಂದಾಗಿದೆ. ಭಾರತ ಅದಕ್ಕೆ ತಕ್ಕ ಪಾಠ ಕಲಿಸಲು ತಯಾರಿ ನಡೆಸಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತ ಟಿ.ಎಸ್. ಮಿಶ್ರಾ ಹೇಳಿದ್ದಾರೆ.
Related Articles
ಡ್ಯಾಂ ನಿರ್ಮಾಣ ಕುರಿತ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರ ಅತೀ ಆದ್ಯತೆ ಮೇರೆಗೆ ಪ್ರಸ್ತಾವವನ್ನು ಪರಿಶೀಲಿಸಿದೆ ಎಂದು ಟಿ.ಎಸ್. ಮಿಶ್ರಾ ಹೇಳಿದ್ದಾರೆ. ಡ್ಯಾಂ ನಿರ್ಮಿಸುವ ಚೀನ ಮತ್ತು ಭಾರತದ ಪ್ರಸ್ತಾವನೆಯಿಂದಾಗಿ ಹೊಸ ವಿವಾದ ಆರಂಭವಾಗಬಹುದು ಎಂಬುದು ತಜ್ಞರ ಆತಂಕ. ಸದ್ಯ ಎರಡೂ ದೇಶಗಳ ವೈಮನಸ್ಸಿಗೆ ಲಡಾಖ್ ಕೇಂದ್ರ ಬಿಂದುವಾಗಿದೆ. ಮುಂದೆ ಈ ಡ್ಯಾಂ ನಿರ್ಮಾಣ ವಿಚಾರವೇ ಕೇಂದ್ರಬಿಂದು ಆಗ
ಬಹುದು ಎಂದಿದ್ದಾರೆ.
Advertisement
ಚೀನಕ್ಕೆ ಚಳಿ ಕಾಟಲಡಾಖ್ ಘರ್ಷಣೆಯ ಅನಂತರ ಭಾರತ ಮತ್ತು ಚೀನದ ಸೇನೆಗಳು ಅಲ್ಲೇ ನೆಲೆಯೂರಿವೆ. ಆದರೆ ಸದ್ಯ ಚಳಿಗಾಲ ಚೀನದ ಸೈನಿಕರನ್ನು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಅಲ್ಲಿರುವ ಚೀನದ ಸೈನಿಕರನ್ನು ಪ್ರತಿದಿನವೂ ಬದಲಾವಣೆ ಮಾಡಲಾಗುತ್ತಿದೆ ಎಂದು ಭಾರತ ಸೇನೆಯ ಮೂಲಗಳು ತಿಳಿಸಿವೆ. ಆದರೆ ಭಾರತೀಯ ಸೈನಿಕರು ವಿಶೇಷ ತರಬೇತಿ ಹೊಂದಿದ್ದಾರೆ, ಅಲ್ಲದೆ ಬೆಚ್ಚಗಿನ ಟೆಂಟ್‌ಗಳೂ ಇವೆ. ಹೀಗಾಗಿ ಭಾರತದ ಯೋಧರು ದೀರ್ಘಾವಧಿ ವರೆಗೆ ಮುಂಚೂಣಿ ನೆಲೆಯಲ್ಲೇ ಗಸ್ತು ಕಾಯುತ್ತಿದ್ದಾರೆ.