Advertisement

Gulf of Aden: ಭಾರತ ಮಹಾಶಕ್ತಿಯಾಗುತ್ತಿದೆ,ಚೀನಾ ಪಕ್ಕಕ್ಕೆ ಸರಿಯುತ್ತಿದೆ:ವಿದೇಶಿಯರ ಬಣ್ಣನೆ

10:34 PM Jan 28, 2024 | Team Udayavani |

ನವದೆಹಲಿ: ಗಲ್ಫ್ ಆಫ್ ಏಡನ್‌ನಲ್ಲಿ ಹೌತಿ ಬಂಡುಕೋರರ ಕ್ಷಿಪಣಿ ದಾಳಿಗೆ ಗುರಿಯಾಗಿದ್ದ ಬ್ರಿಟಿಷ್‌ ತೈಲ ಟ್ಯಾಂಕರ್‌ ಅನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ಹಲವಾರು ರಾಷ್ಟ್ರಗಳು ಶ್ಲಾ ಸುತ್ತಿದ್ದು, ಭಾರತವು ಜಾಗತಿಕ ಮಹಾಶಕ್ತಿಯಾಗಿ ಬೆಳೆಯುತ್ತಿದೆ. ಚೀನಾ ಬದಿಗೆ ಸೆರೆಯುತ್ತಿದೆ ಎಂದು ಬಣ್ಣಿಸಿವೆ.

Advertisement

ಬ್ರಿಟಿಷ್‌ ಪತ್ರಕರ್ತ, ಮಾರ್ಕ್‌ ಅರ್ಬನ್‌ ಈ ಕುರಿತು ಟ್ವೀಟ್‌ ಮಾಡಿ, “ಉದಯೋನ್ಮುಖ ಮಹಾ ಶಕ್ತಿಗಳ ನಡುವೆ ಭಾರತ ಹೇಗೆ ಎತ್ತರಕ್ಕೇರುತ್ತಿದೆ ಎಂಬುದಕ್ಕೆ ಕೆಂಪುಸಮುದ್ರ ಮತ್ತು ಗಲ್ಫ್ ಆಫ್ ಏಡನ್‌ ಬಿಕ್ಕಟ್ಟು ಶಮನದಲ್ಲಿ ಭಾರತ ವಹಿಸಿದ ಪಾತ್ರವೇ ಸಾಕ್ಷಿ. ಚೀನಾದ ಶಕ್ತಿ ಅಷ್ಟೇನೂ ಇಲ್ಲದಂತಾಗಿದೆ’ ಎಂದಿದ್ದಾರೆ. ಇತಿಹಾಸಕಾರ ಮಾರ್ಟಿನ್‌ ಸೌಬ್ರೆ “ಭಾರತ ಎಲ್ಲವನ್ನೂ ಮೀರಿ ಸೂಪರ್‌ ಪವರ್‌ ಆಗುತ್ತಿದೆ. ಇನ್ನಾದರೂ ಚೀನಾದತ್ತ ವಾಲುವುದನ್ನು ಬಿಡಿ’ ಎಂದಿದ್ದಾರೆ. ಅಂಕಣಕಾರ ಅಬಿಜಿತ್‌ ಐಯರ್‌ ಮಿತ್ರಾ ಕೂಡ ಟ್ವೀಟ್‌ ಮಾಡಿ” ಅರಬ್ಬಿ ಸಮುದ್ರದಲ್ಲಿ ಹಡಗು ಸಂಚಾ ರಕ್ಕೆ ಭಾರತ ಭದ್ರತೆ ಒದಗಿಸುತ್ತದೆ. ಆದರೆ, ಚೀನಾ ಜಿಬೌಟಿಯಲ್ಲಿ ನೆಲೆ ಹೊಂದಿದ್ದರೂ ಭದ್ರತೆ ನೀಡಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next