Advertisement

ಮಕ್ಕಳ ಮೇಲಿನ ದೌರ್ಜನ್ಯ ತಡೆ: ಇಂಟರ್‌ಪೋಲ್‌ ನೆರವು

12:56 AM Jul 13, 2022 | Team Udayavani |

ಹೊಸದಿಲ್ಲಿ: ಭಾರತದ ಕೇಂದ್ರ ಗುಪ್ತಚರ ಸಂಸ್ಥೆ ಸಿಬಿಐಗೆ ಪ್ರಬಲ ಅಸ್ತ್ರವೊಂದು ದೊರೆತಿದೆ. ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಅದರ ಹೋರಾಟಕ್ಕೆ ಮಹತ್ವದ ಬೆಂಬಲ ಇಂಟರ್‌ಪೋಲ್‌ (ಅಂತರ ರಾಷ್ಟ್ರೀಯ ಗುಪ್ತಚರ ಸಂಸ್ಥೆ) ಕಡೆಯಿಂದ ಲಭಿಸಿದೆ.

Advertisement

ಇಂಟರ್‌ಪೋಲ್‌ನ ಐಸಿಎಸ್‌ಇ ಮಾಹಿತಿಗಳಿಗೆ ಸಿಬಿಐಗೆ ನೇರಪ್ರವೇಶ ಸಿಕ್ಕಿದೆ.

ಇಂಟರ್‌ಪೋಲ್‌ಗಿರುವ 295 ಸದಸ್ಯ ರಾಷ್ಟ್ರಗಳ ಪೈಕಿ ಇಂತಹದ್ದೊಂದು ಅಪರೂಪದ ಅವಕಾಶ ಪಡೆದ ವಿಶ್ವದ 68ನೇ ದೇಶ ಭಾರತ.

ಐಸಿಎಸ್‌ಇ ತನ್ನದೇ ಆದ ವಿಶೇಷ ಸಾಫ್ಟ್ ವೇ ರನ್ನು ಹೊಂದಿದೆ. ಇದರ ಮೂಲಕ ಧ್ವನಿ, ದೃಶ್ಯಗಳ ಕ್ಲಿಪ್‌ ಗಳನ್ನು ಪಡೆದುಕೊಳ್ಳಬಹುದು. ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಹಲವಾರು ಮೂಲಗಳಿಂದ ಇಂತಹ ಕ್ಲಿಪ್‌ ಗಳು ಐಸಿಎಸ್‌ಇನಲ್ಲಿ ಸಂಗ್ರಹವಾಗಿರುತ್ತವೆ. ಇಲ್ಲಿಯವರೆಗೆ ಐಸಿಎಸ್‌ಇ ಮೂಲಕ 30,000 ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳನ್ನು, 13,000 ಅಪರಾಧಿಗಳನ್ನು ಪತ್ತೆ ಹಚ್ಚಲಾಗಿದೆ.

ಇಲ್ಲಿ ದೊರೆಯುವ ಚಿತ್ರಗಳು, ವಿಡಿಯೊಗಳ ಮೂಲಕ ತನಿಖಾಧಿಕಾರಿಗಳು ಅಪರಾಧಿಗಳನ್ನು ಪತ್ತೆ ಮಾಡಲು ಸಾಧ್ಯವಿದೆ. ಭಾರತೀಯ ಪೊಲೀಸರಿಗೂ ಇದರಿಂದ ಲಾಭ ವಾಗಲಿದೆ. ತೀರಾ ವಿಕೃತ, ಸವಾಲಿನ ಪ್ರಕರಣಗಳಲ್ಲಿ ಸಿಬಿಐ ಮೂಲಕ ಪೊಲೀಸರು ಸುಳಿವುಗಳನ್ನು ಪಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next