Advertisement
ಎರಡನೇ ಪೂಲ್ ಡಿ ಪಂದ್ಯದಲ್ಲಿ ಭಾರತದ ಪರ ಉಪನಾಯಕ ಅಮಿತ್ ರೋಹಿದಾಸ್ 12ನೇ ನಿಮಿಷ ಮತ್ತು ಹಾರ್ದಿಕ್ ಸಿಂಗ್ 26ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇಂಗ್ಲೆಂಡ್-ವೇಲ್ಸ್ ನಡುವಿನ ದಿನದ 3ನೇ ಪಂದ್ಯ ಕೂಡ ಏಕಪಕ್ಷೀಯವಾಗಿ ಸಾಗಿತು. ಇದನ್ನು ಇಂಗ್ಲೆಂಡ್ 5-0 ಅಂತರದಿಂದ ತನ್ನದಾಗಿಸಿಕೊಂಡಿತು.
Related Articles
Advertisement
ಆರ್ಜೆಂಟೀನಾ ಜಯ2023ರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಮೊದಲ ಗೆಲುವು ದಾಖಲಿಸಿದ ತಂಡವೆಂಬ ಹೆಗ್ಗಳಿಕೆ ಮಾಜಿ ಒಲಿಂಪಿಕ್ ಚಾಂಪಿಯನ್ ಆರ್ಜೆಂಟೀನಾದ್ದಾಯಿತು. “ಎ’ ವಿಭಾಗದ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕಾವನ್ನು ಏಕೈಕ ಗೋಲಿನಿಂದ ಸೋಲಿಸಿತು. ಮೊದಲೆರಡು ಕ್ವಾರ್ಟರ್‌ಗಳಲ್ಲಿ ಎರಡೂ ತಂಡಗಳು ಸಮಬಲದ ಪೈಪೋಟಿ ನೀಡಿದ್ದರಿಂದ ಯಾರಿಂದಲೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 3ನೇ ಕ್ವಾರ್ಟರ್‌ನ 42ನೇ ನಿಮಿಷ ದಲ್ಲಿ ಕ್ಯಾಸೆಲ್ಲ ಮೈಕೊ ಆಕರ್ಷಕ ಫೀಲ್ಡ್ ಗೋಲ್ ಮೂಲಕ ಆರ್ಜೆಂಟೀನಾಕ್ಕೆ ಮುನ್ನಡೆ ಒದಗಿಸಿದರು. ಈ ಗೋಲೇ ಪಂದ್ಯದ ಫಲಿ ತಾಂಶವನ್ನು ನಿರ್ಧರಿಸಿತು. ಮೊದಲ ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗೋಲು ಬಾರಿಸುವ ಉತ್ತಮ ಅವಕಾಶವಿತ್ತು. ಆದರೆ ಲಾಸ್ ಲಿಯೋನೆಸ್ ಈ ಅವಕಾಶವನ್ನು ಕೈಚೆಲ್ಲಿದರು. ಆಸ್ಟ್ರೇಲಿಯ ಜಯಭೇರಿ
“ಎ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ವಿಶ್ವದ ನಂ.1 ಖ್ಯಾತಿಯ ಆಸ್ಟ್ರೇಲಿಯ ಇದಕ್ಕೆ ತಕ್ಕ ಪ್ರದರ್ಶನ ನೀಡಿತು. 8-0 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಹೊಡೆದುರುಳಿಸಿತು. ಈ ಪಂದ್ಯದಲ್ಲಿ ಕಾಂಗರೂ ನಾಡಿನ ಇಬ್ಬರಿಂದ ಹ್ಯಾಟ್ರಿಕ್ ಸಾಧನೆ ದಾಖಲಾಯಿತು. ಇವರೆಂದರೆ ಜೆರೆಮಿ ಹೇವಾರ್ಡ್ ಮತ್ತು ಕ್ರೆಗ್ ಟಾಮ್. ಜೆರೆಮಿ ಹೇವಾರ್ಡ್ ಈ ಕೂಟದ ಮೊದಲ ಹ್ಯಾಟ್ರಿಕ್ ಹೀರೋ ಎನಿಸಿದರು. ಅವರು ಪಂದ್ಯದ 26ನೇ, 28ನೇ ಹಾಗೂ 38ನೇ ನಿಮಿಷ ದಲ್ಲಿ ಗೋಲು ಸಿಡಿಸಿದರು. ಈ ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕ ಬಂದವು. ಹೇವಾರ್ಡ್ 2014ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಸದಸ್ಯರಾಗಿದ್ದರು. 2018ರಲ್ಲಿ ಕಂಚು ಗೆದ್ದಾಗಲೂ ತಂಡದಲ್ಲಿದ್ದರು. ಕ್ರೆಗ್ ಟಾಮ್ 8ನೇ, 31ನೇ ಹಾಗೂ 44ನೇ ನಿಮಿಷದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್ ಪೂರ್ತಿಗೊಳಿಸಿದರು.