Advertisement

ಅಂಡರ್ 19: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ

09:57 AM Dec 28, 2019 | keerthan |

ಪೂರ್ವ ಲಂಡನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ ಒಂಬತ್ತು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

Advertisement

ಇಲ್ಲಿನ ಬಫೆಲ್ಲೋ ಪಾರ್ಕ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. 48.3 ಓವರ್ ನಲ್ಲಿ ಕೇವಲ 187 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಹುಡುಗರು ಈ ಮೊತ್ತವನ್ನು ಕೇವಲ ಒಂದು ವಿಕೆಟ್ ನಷ್ಟದಲ್ಲಿ ಕಲೆಹಾಕಿ ಜಯದ ನಗು ಬೀರಿದರು.

ಟಾಸ್ ಗೆದ್ದು ಬ್ಯಾಟ್ ಮಾಡಿದ ಹರಿಣಗಳ ಹುಡುಗರು ವಿಫಲರಾದರು. ಲ್ಯೂಕ್ ಬ್ಯೂಫರ್ಟ್ 64 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರನೂ ತಂಡಕ್ಕೆ ನೆರವಾಗಲಿಲ್ಲ. ಭಾರತದ ಪರ ರವಿ ಬಿಷ್ನೋಯ್ ಮೂರು ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ, ಶುಭಾಂಗ್ ಹೆಗ್ಡೆ ಮತ್ತು ಅಥರ್ವ ಅಂಕೋಲೇಕರ್ ತಲಾ ಎರಡು ವಿಕೆಟ್ ಕಬಳಿಸಿದರು.

ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕರಿಬ್ಬರು ಭದ್ರ ಬುನಾದಿ ಹಾಕಿದರು. ದಿವ್ಯಾಂಶ್ ಸಕ್ಸೇನಾ ಮತ್ತು ತಿಲಕ್ ವರ್ಮಾ 127 ರನ್ ಜೊತೆಯಾಟವಾಡಿದರು. ತಿಲಕ್ ವರ್ಮಾ 59 ರನ್ ಗಳಿಸಿ ಔಟಾದರೆ, ದಿವ್ಯಾಂಶ್ 86 ರನ್ ಗಳಿಸಿ ಅಜೇಯರಾಗುಳಿದರು.

ಅಂತಿಮವಾಗಿ 7.3 ಓವರ್ ಬಾಕಿ ಉಳಿದಂತೆ 190 ರನ್ ಗಳಸಿ ವಿಜಯಿಯಾಯಿತು. ಶನಿವಾರ ಸರಣಿಯ ದ್ವಿತೀಯ ಪಂದ್ಯ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next