Advertisement

ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಆದೇಶ: 47 ಚೀನಾ ಆ್ಯಪ್ ಬ್ಯಾನ್, ಪಬ್ ಜೀ ಕಥೆಯೇನು ?

03:12 PM Jul 27, 2020 | Mithun PG |

ನವದೆಹಲಿ: ಕಳೆದ ತಿಂಗಳಷ್ಟೆ ಕೇಂದ್ರ ಸರ್ಕಾರ ಟಿಕ್ ಸೇರಿದಂತೆ ಚೀನಾದ 59 ಆ್ಯಪ್ ಗಳನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಇದೀಗ ಭಾರತ ಸರ್ಕಾರ ಮತ್ತೆ 47 ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

Advertisement

ಮೂಲಗಳ ಪ್ರಕಾರ ಈ 47 ಆ್ಯಪ್ ಗಳು ಕೂಡ ಹಿಂದೆ ನಿಷೇಧಿಸಲ್ಪಟ್ಟ ಅಪ್ಲಿಕೇಶನ್ ಗಳ ಲೈಟ್ ವರ್ಷನ್ ಗಳಾಗಿದ್ದು, ಸಂಪೂರ್ಣ ಪಟ್ಟಿ ಇನ್ನಷ್ಟೆ ಹೊರಬೀಳಬೇಕಾಗಿದೆ.

ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಗೆ ಮತ್ತು ಬಳಕೆದಾರರ ಗೌಪ್ಯತೆಗೆ ಧಕ್ಕೆ ಉಂಟು ಮಾಡುವ 250 ಆ್ಯಪ್ ಗಳ ಪಟ್ಟಿಯನ್ನು ಸಿದ್ದಪಡಿಸಿದ್ದು ಪರಿಶೀಲನಾ ಹಂತದಲ್ಲಿದೆ ಎಂದು ವರದಿಯಾಗಿದೆ. ಇದರಲ್ಲಿ ಹೆಚ್ಚಾಗಿ ಚೈನಾ ಮೂಲದ ಅಪ್ಲಿಕೇಶನ್ ಗಳಿದ್ದು ಆ ಮೂಲಕ ಹೆಚ್ಚಿನ ಚೀನಾ ಕಂಪೆನಿಗಳನ್ನು ದೇಶದಿಂದ ನಿಷೇಧ ಮಾಡುವ ಯೋಜನೆ ಸಿದ್ದಪಡಿಸಲಾಗುತ್ತಿದೆ ಎನ್ನಲಾಗಿದೆ.

ಪರೀಶೀಲನಾ ಪಟ್ಟಿಯಲ್ಲಿ ಜನಪ್ರಿಯ ಪಬ್ ಜೀ ಗೇಮಿಂಗ್ ಆ್ಯಪ್ ಗಳು ಕೂಡ ಇದ್ದು ಇವು ಚೀನಾದ ಏಜೆನ್ಸಿಗಳೊಂದಿಗೆ ಡೇಟಾ ಹಂಚಿಕೊಳ್ಳುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next