Advertisement

India-Australia Test: ನನ್ನ ಕ್ರಮಾಂಕ ನನಗೆ ಸೂಚಿಸಲಾಗಿದೆ: ಕೆ.ಎಲ್‌.ರಾಹುಲ್‌

03:10 AM Dec 05, 2024 | Team Udayavani |

ಅಡಿಲೇಡ್‌: ಪರ್ತ್‌ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಿ ಯಶಸ್ಸು ಕಂಡಿದ್ದ ಕೆ.ಎಲ್‌. ರಾಹುಲ್‌, ಅಡಿಲೇಡ್‌ ಟೆಸ್ಟ್‌ನಲ್ಲಿ ಯಾವ ಕ್ರಮಾಂಕದಲ್ಲಿ ಆಡಬಹುದೆಂಬ ಕುತೂಹಲ ತೀವ್ರಗೊಂಡಿದೆ. ಆರಂಭಕಾರ ರೋಹಿತ್‌ ಶರ್ಮ ಮತ್ತು ವನ್‌ಡೌನ್‌ ಆಟಗಾರ ಶುಭಮನ್‌ ಗಿಲ್‌ ಮರಳುವುದೇ ಇದಕ್ಕೆ ಕಾರಣ.

Advertisement

ಈ ಕುರಿತು ಮಾಧ್ಯಮದವರಿಂದ ಎದುರಾದ ಪ್ರಶ್ನೆಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ರಾಹುಲ್‌, “ನನ್ನ ಬ್ಯಾಟಿಂಗ್‌ ಕ್ರಮಾಂಕ ಯಾವುದು ಎಂಬುದನ್ನು ಈಗಾಗಲೇ ಸೂಚಿಸಲಾಗಿದೆ. ಆದರೆ ನಿಮಗೆ ತಿಳಿಸುವುದಿಲ್ಲ. ಕಾದು ನೋಡಿ…’ ಎಂದರು.

“ನನಗೆ ಬ್ಯಾಟಿಂಗ್‌ ಕ್ರಮಾಂಕ ಮುಖ್ಯವಲ್ಲ, ಅದು ಯಾವುದಾ ದರೂ ನಡೆಯುತ್ತದೆ. ಆದರೆ ಆಡುವ ಬಳಗದಲ್ಲಿ ಸ್ಥಾನ ಲಭಿಸುವುದು ಮುಖ್ಯ. ಸೂಚಿಸಿದ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸುವುದು, ತಂಡಕ್ಕಾಗಿ ಆಡುವುದು ಅಗತ್ಯ’ ಎಂದರು.

“ನಾನು ಬಹಳಷ್ಟು ಕ್ರಮಾಂಕಗಳಲ್ಲಿ ಆಡಿದ್ದೇನೆ. ಆರಂಭದಲ್ಲಿ, ಮಾನಸಿಕವಾಗಿ ಇದೊಂದು ದೊಡ್ಡ ಸವಾಲಾಗಿತ್ತು. ಮೊದಲ 20-25 ಎಸೆತಗಳನ್ನು ಹೇಗಪ್ಪ ಆಡುವುದು ಎಂಬ ಚಿಂತೆ ಕಾಡುತ್ತಿತ್ತು. ಆದರೀಗ ಟೆಸ್ಟ್‌ ಹಾಗೂ ಏಕದಿನಗಳೆರಡರಲ್ಲೂ ಬೇರೆ ಬೇರೆ ಕ್ರಮಾಂಕದಲ್ಲಿ ಆಡಿ ಅಭ್ಯಾಸ ಆಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next