Advertisement
ಪುಣೆಯಲ್ಲಾದ ತಪ್ಪುಗಳಿಂದ ತಿದ್ದಿಕೊಳ್ಳದ ಕೊಹ್ಲಿ ಪಡೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಅದೇ ತಪ್ಪುಗಳ ಪುನರಾವರ್ತನೆ ಮಾಡಿದೆ. ಇಲ್ಲಿಯೂ ಭಾರತಕ್ಕೆ ಮತ್ತೆ ಕಂಟಕವಾಗಿದ್ದು ಸ್ಪಿನ್ ದಾಳಿ. ಈ ಬಾರಿ ಕೀಫ್ ಅಲ್ಲ.. ನಥನ್ ಲಿಯೋನ್!. ಹೌದು, ಇವರು ಇನ್ನಿಲ್ಲದಂತೆ ಕೊಹ್ಲಿ ಪಡೆಯನ್ನು ಕಾಡಿದರು. ಆರಂಭದಲ್ಲಿ ವೇಗಕ್ಕೆ 1 ವಿಕೆಟ್ ಬಿದ್ದರೂ ನಂತರ ನಡೆದದ್ದೆಲ್ಲ ಲಿಯೋನ್ ಮ್ಯಾಜಿಕ್. ಹೀಗಾಗಿ 1ನೇ ಇನಿಂಗ್ಸ್‌ನಲ್ಲಿ ಕೇವಲ 189 ರನ್‌ಗೆ ಆತಿಥೇಯ ತಂಡ ಸರ್ವಪತನ ಕಂಡಿತು.
Related Articles
Advertisement
ಮತ್ತೆ ಕೊಹ್ಲಿ ವೈಫಲ್ಯ: 3ನೇ ವಿಕೆಟ್‌ಗೆ ಬಂದ ವಿರಾಟ್ ಕೊಹ್ಲಿ (12 ರನ್) ನಿರಾಸೆ ಮೂಡಿಸಿದರು. ತಂಡದ ಒಟ್ಟು ರನ್ 88 ರನ್ ಆಗಿದ್ದಾಗ ಲಿಯೋನ್ ಜಾದೂ ಸ್ಪಿನ್‌ನ ಒಳಸುಳಿ ಅರಿಯದೆ ಅಚ್ಚರಿಯ ಎಲ್‌ಬಿ ಆಗಿ ಔಟಾದರು. ಅಲ್ಲಿಗೆ ತಂಡ 88 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಕೊಹ್ಲಿ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್‌ನ 1ನೇ ಇನಿಂಗ್ಸ್‌ನಲ್ಲಿ ಶೂನ್ಯ, 2ನೇ ಇನಿಂಗ್ಸ್‌ನಲ್ಲಿ 13 ರನ್ ಸಂಪಾದಿಸಲಷ್ಟೇ ಶಕ್ತರಾಗಿದ್ದರು.ಲಿಯೋನ್ ಸ್ಪಿನ್‌ಗೆ ಮಧ್ಯಮ ಕ್ರಮಾಂಕ ಚಿತ್: ಕೊಹ್ಲಿ ಔಟಾದ ಬಳಿಕ ಭಾರತ ತಂಡವನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಧರಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಂತಹ ಯಾವುದೇ ಪವಾಡಗಳು ನಡೆಯಲಿಲ್ಲ. ಲಿಯೋನ್ ಚುರುಕಿನ ದಾಳಿಯಿಂದ ರಹಾನೆ (17 ರನ್), ಅಶ್ವಿನ್ (7 ರನ್), ಸಹಾ (1 ರನ್) ಹಾಗೂ ಜಡೇಜ (3 ರನ್) ಪೆವಿಲಿಯನ್‌ಗೆ ಅಟ್ಟಿದರು. ಕರುಣ್ ನಾಯರ್ ವಿಕೆಟ್ ಅನ್ನು ಕೀಫ್ ಕಿತ್ತರು. ಅಲ್ಲಿಗೆ ಭಾರತದ ದೊಡ್ಡ ಮೊತ್ತದ ಕನಸು ಭಗ್ನಗೊಂಡಿತು. ಸ್ಕೋರ್ ವಿವರ
ಭಾರತ 1ನೇ ಇನಿಂಗ್ಸ್ 189/10
ಕೆ.ಎಲ್. ರಾಹುಲ್ ಸಿ ರೆನ್‌ಶಾ ಬಿ ಲಿಯೋನ್ 90
ಅಭಿನವ್ ಮುಕುಂದ್ ಎಲ್‌ಬಿ ಸ್ಟಾರ್ಕ್ 0
ಚೇàತೇಶ್ವರ ಸಿ ಹ್ಯಾಂಡ್ಸ್‌ಕಾಂಬ್ ಬಿ ಲಿಯೋನ್ 17
ವಿರಾಟ್ ಕೊಹ್ಲಿ ಎಲ್‌ಬಿ ಲಿಯೋನ್ 12
ಅಜಿಂಕ್ಯ ರಹಾನೆ ಸ್ಟಂಪ್ ವೇಡ್ ಬಿ ಲಿಯೋನ್ 17
ಕರುಣ್ ನಾಯರ್ ಸ್ಟಂಪ್ ವೇಡ್ ಬಿ ಕೀಫ್ 26
ಅಶ್ವಿನ್ ಸಿ ವಾರ್ನರ್ ಬಿ ಲಿಯೋನ್ 7
ವೃದ್ದಿಮಾನ್ ಸಹಾ ಸಿ ಸ್ಮಿತ್ ಬಿ ಲಿಯೋನ್ 1
ರವೀಂದ್ರ ಜಡೇಜ ಸಿ ಸ್ಮಿತ್ ಬಿ ಲಿಯೋನ್ 3
ರಮೇಶ್ ಯಾದವ್ ಅಜೇಯ 0
ಇಶಾಂತ್ ಶರ್ಮಾ ಸಿ ಹ್ಯಾಂಡ್ಸ್‌ಕಾಂಬ್ ಬಿ ಲಿಯೋನ್ 0
ಇತರೆ: 16
ವಿಕೆಟ್ ಪತನ: 1-11, 2-72, 3-88, 4-118, 5-156, 6-174, 7-178, 8-188, 9-189, 10-189
ಬೌಲಿಂಗ್
ಮಿಚೆಲ್ ಸ್ಟಾರ್ಕ್ 15 5 39 1
ಹೇಜಲ್‌ವುಡ್ 11 2 42 0
ಕೀಫ್ 21 5 40 1
ಮಾರ್ಶ್ 2 0 2 0
ಲಿಯೋನ್ 22.2 4 50 8 ಆಸ್ಟ್ರೇಲಿಯಾ 1ನೇ ಇನಿಂಗ್ಸ್ 40/0 (1ನೇ ದಿನದ ಅಂತ್ಯಕ್ಕೆ)
ಡೇವಿಡ್ ವಾರ್ನರ್ ಅಜೇಯ 23
ರೆನ್‌ಶಾ ಅಜೇಯ 15
ಇತರೆ: 2
ಬೌಲಿಂಗ್
ಇಶಾಂತ್ ಶರ್ಮಾ 5 0 8 0
ಉಮೇಶ್ ಯಾದವ್ 4 1 16 0
ಆರ್. ಅಶ್ವಿನ್ 6 0 11 0
ರವೀಂದ್ರ ಜಡೇಜ 1 0 5 0 – ಹೇಮಂತ್ ಸಂಪಾಜೆ