Advertisement

ಆಸೀಸ್ ವಿರುದ್ಧ ಟಿ20 ಸರಣಿ: ತಂಡದಿಂದ ಹೊರಗುಳಿದ ಇಬ್ಬರು ಪ್ರಮುಖ ಆಲ್ ರೌಂಡರ್ ಗಳು

01:40 PM Dec 02, 2022 | Team Udayavani |

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಯಿಂದ ಪೂಜಾ ವಸ್ತ್ರಾಕರ್ ಹೊರಗುಳಿದಿದ್ದಾರೆ. ಬಿಸಿಸಿಐ ಶುಕ್ರವಾರ (ಡಿಸೆಂಬರ್ 2) ತಂಡವನ್ನು ಪ್ರಕಟಿಸಿದ್ದು, ಆಲ್ ರೌಂಡರ್ ಸ್ನೇಹ ರಾಣಾ ಅವರನ್ನು ಕೈಬಿಡಲಾಗಿದೆ.

Advertisement

ಇದೇ ವೇಳೆ ಇಂಗ್ಲೆಂಡ್ ಮತ್ತು ಏಷ್ಯಾ ಕಪ್‌ ನಲ್ಲಿ ಸ್ಥಾನ ಪಡೆದಿರದ ಹರ್ಲೀನ್ ಡಿಯೋಲ್ ಮತ್ತು ಯಾಸ್ತಿಕಾ ಭಾಟಿಯಾ ಅವರು ಟಿ20 ಸೆಟಪ್‌ ಗೆ ಮರಳಿದ್ದಾರೆ.

ಸ್ನೇಹ್ ರಾಣಾ ಜೊತೆಗೆ ಆಯ್ಕೆ ಸಮಿತಿಯು ಕಿರಣ್ ನವ್ಗಿರೆ ಮತ್ತು ದಯಾಲನ್ ಹೇಮಲತಾ ಅವರನ್ನೂ ಕೈಬಿಟ್ಟಿದೆ. ಇದೇ ವೇಳೆ ಹೊಸ ಮುಖ ಅಂಜಲಿ ಸರ್ವಾಣಿ ಅವಕಾಶ ಪಡೆದಿದ್ದಾರೆ. ಅಲ್ಲದೆ ದೇವಿಕಾ ವೈದ್ಯ ಅವರು ನಾಲ್ಕು ವರ್ಷಗಳ ನಂತರ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ;ಶೀಘ್ರದಲ್ಲೇ ಕೇರಳದಲ್ಲಿ ಕಮ್ಯೂನಿಸಮ್, ಕಮ್ಯೂನಿಸ್ಟ್ ಪಕ್ಷ ಕಸದ ಬುಟ್ಟಿಗೆ ಸೇರಲಿದೆ: ತೇಜಸ್ವಿ

ದೇವಿಕಾ ವೈದ್ಯ ಅವರು ಭಾರತಕ್ಕಾಗಿ ಕೊನೆಯ ಬಾರಿಗೆ ಏಪ್ರಿಲ್ 2018 ರಲ್ಲಿ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡರು. 2014ರಲ್ಲಿ ಅವರು ಏಕೈಕ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

Advertisement

ಮೋನಿಕಾ ಪಟೇಲ್, ಅರುಂಧತಿ ರೆಡ್ಡಿ, ಎಸ್.ಬಿ.ಪೋಖಾರ್ಕರ್ ಮತ್ತು ಸಿಮ್ರನ್ ಬಹದ್ದೂರ್ ಅವರು ನೆಟ್ ಬೌಲರ್ ಗಳಾಗಿ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಡಿಸೆಂಬರ್ 9ರಿಂದ ಈ ಸರಣಿ ನಡೆಯಲಿದೆ.

ತಂಡ: ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ (ಉ.ನಾ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ದೇವಿಕಾ ವೈದ್ಯ, ಎಸ್ ಮೇಘನಾ, ರಿಚಾ ಘೋಷ್, ಹರ್ಲೀನ್ ಡಿಯೋಲ್

Advertisement

Udayavani is now on Telegram. Click here to join our channel and stay updated with the latest news.

Next