Advertisement

ನಮ್ಮಿಂದ ಭಾರತಕ್ಕೆ ಯಾವುದೇ ಅಪಾಯವಾಗುವುದಿಲ್ಲ : ತಾಲಿಬಾನ್ ವಕ್ತಾರ ಜಬಿಹುಲ್ಲಾ

05:51 PM Aug 30, 2021 | Team Udayavani |

ಕಾಬೂಲ್ : ಭಾರತವು ಒಂದು ಪ್ರಮುಖ ದೇಶವಾಗಿದ್ದು, ಅಫ್ಘಾನಿಸ್ತಾನದ ಹೊಸ ಆಡಳಿತವು (ತಾಲಿಬಾನ್ ಆಡಳಿತ) ಅವರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ.

Advertisement

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ ಮಾತನಾಡಿರುವ ಅವರು, ತಾಲಿಬಾನ್ ನೇತೃತ್ವದಲ್ಲಿ ರಚನೆಯಾಗಿರುವ ಸರ್ಕಾರ ಭಾರತದ ಜೊತೆ ಉತ್ತಮ ಸಂಬಂಧ ಹೊಂದಲಿದೆ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಪಿತೂರಿ ನಡೆಸಲು ಪಾಕಿಸ್ತಾನದ ಜೊತೆ ತಾಲಿಬಾನ್ ಕೈಜೋಡಿಸಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಜಬಿಹುಲ್ಲಾ, ಅಂತಹ ವರದಿಗಳು ಆಧಾರರಹಿತ ಎಂದು ಹೇಳಿದರು. ” ಬೇರೆ ಯಾವುದೇ ದೇಶವನ್ನು ನಮ್ಮಿಂದ ಅಪಾಯಕ್ಕೆ ಸಿಲುಕಿಸಲು ತಾಲಿಬಾನ್ ಬಿಡುವುದಿಲ್ಲ. ನಮ್ಮ ಕಡೆಯವರು ಅವರಿಗೆ ಅಪಾಯವಾಗುವುದಿಲ್ಲ ಎಂದು ನಾವು ಭಾರತಕ್ಕೆ ಭರವಸೆ ನೀಡುತ್ತೇವೆ” ಎಂದು ಅವರು ಹೇಳಿದರು.

ಬೇರೆ ರಾಷ್ಟ್ರಗಳು ತಮ್ಮ ರಾಯಭಾರ ಕಚೇರಿಯನ್ನು ಅಫ್ಘಾನಿಸ್ತಾನದಲ್ಲಿ ಹೊಂದಬೇಕೆಂದು ತಾಲಿಬಾನ್ ಬಯಸುತ್ತದೆ ಎಂದಿರುವ ಜಬಿಹುಲ್ಲಾ, “ಅಫ್ಘಾನಿಸ್ತಾನದಲ್ಲಿ ರಾಯಭಾರಿಗಳ ಉಪಸ್ಥಿತಿಯು ಪ್ರಯೋಜನಕಾರಿಯಾಗಲಿದೆ. ಎಲ್ಲಾ ದೇಶಗಳು ನಮ್ಮೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ” ಎಂದು ನುಡಿದಿದ್ದಾರೆ.

ಪಾಕಿಸ್ತಾನ ಎರಡನೇ ಮನೆ ಎಂದಿದ್ದ ಜಬಿಹುಲ್ಲಾ :

Advertisement

ಇನ್ನು ಆಗಸ್ಟ್ 26 ರಂದು ಪಾಕ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಜಬಿಹುಲ್ಲಾ, ಪಾಕಿಸ್ತಾನ್ ನಮ್ಮ ಎರಡನೇ ಮನೆ ಎಂದಿದ್ದರು. ಪಾಕಿಸ್ತಾನದ ಜೊತೆ ಅಫ್ಘಾನಿಸ್ತಾನ ತನ್ನ ಗಡಿಯನ್ನು ಹಂಚಿಕೊಂಡಿದೆ. ಧರ್ಮದ ವಿಚಾರದಲ್ಲಿ ನಾವು ಸಾಂಪ್ರದಾಯಿಕವಾಗಿ ಹೊಂದಿಕೊಂಡಿದ್ದೇವೆ; ಎರಡೂ ದೇಶಗಳ ಜನರು ಪರಸ್ಪರ ಬೆರೆಯುತ್ತಾರೆ. ಹಾಗಾಗಿ ನಾವು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next