Advertisement

I.N.D.I.A.;ಹೆಸರು ಬದಲಾದರೆ ಮೈತ್ರಿ ಕೂಟದ ಭ್ರಷ್ಟಾಚಾರ ಬದಲಾಗುವುದಿಲ್ಲ: ಪ್ರಧಾನಿ ಮೋದಿ

06:33 PM Nov 25, 2023 | Team Udayavani |

ಕಾಮರೆಡ್ಡಿ: ಟಿಆರ್‌ಎಸ್ ತನ್ನ ಹೆಸರನ್ನು ಬಿಆರ್‌ಎಸ್ ಮತ್ತು ಯುಪಿಎ ಮೈತ್ರಿ ಕೂಟ ಇಂಡಿಯಾ ಎಂದು ಮರುನಾಮಕರಣ ಮಾಡಿದರೂ, ಅವರ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

Advertisement

ತೆಲಂಗಾಣದ ಕಾಮರೆಡ್ಡಿಯಲ್ಲಿ ಚುನಾವಣ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ನಡುವಿನ ಸಾಮಾನ್ಯತೆ ಏನೆಂದರೆ, ಅವರು ಜನರಿಗೆ ದ್ರೋಹ ಮಾಡಲು ಎಲ್ಲಾ ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ.ಇದ್ದಕ್ಕಿದ್ದಂತೆ, ಟಿಆರ್‌ಎಸ್ ಅನ್ನು ಬಿಆರ್‌ಎಸ್ ಮಾಡಲಾಗಿದೆ. ಈ ವರ್ಷವೇ ಯುಪಿಎ ಕೂಡ ಇಂಡಿಯಾ ಮೈತ್ರಿ ಕೂಟ ಎಂದು ಬದಲು ಮಾಡಿಕೊಂಡಿದೆ. ದೇಶದ ಜನರು ಈ ತಂತ್ರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ, ”ಎಂದರು.

ಮುಸ್ಲಿಂ ಮೀಸಲಾತಿ ಅಸಂವಿಧಾನಿಕ
ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಚುನಾವಣ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತೆಲಂಗಾಣದಲ್ಲಿ ಮುಸ್ಲಿಂ ಮೀಸಲಾತಿ ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಶನಿವಾರ ಆರೋಪಿಸಿದ್ದಾರೆ.

ಮುಸ್ಲಿಮರಿಗೆ ಮೀಸಲಾತಿ ಅಸಂವಿಧಾನಿಕ ಮತ್ತು ಅದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಬಾರದು ಎಂದರು. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡೂ ದೇಶವನ್ನು ಹೊಸ ವಿಭಜನೆಯತ್ತ ಕೊಂಡೊಯ್ಯಲು ಬಯಸುತ್ತವೆ” ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next