Advertisement

ಭಾರತದಲ್ಲಿ ಇಂಗಾಲದ ಪ್ರಮಾಣ ಶೇ.35ರಷ್ಟು ತಗ್ಗಿಸುವ ಗುರಿಯಿದೆ: ಮೋದಿ

12:10 AM Nov 22, 2020 | sudhir |

ಗಾಂಧೀನಗರ: ಭಾರತದಲ್ಲಿ ಇಂಗಾ­ಲದ ಹೊರಸೂಸುವಿಕೆ ಪ್ರಮಾಣ­ವನ್ನು ಶೇ.30-­35­ರಷ್ಟು ತಗ್ಗಿಸುವ ಉದ್ದೇಶ­ವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಅವರು ಪಂಡಿತ್‌ ದೀನದಯಾಳ್‌ ಉಪಾ­ಧ್ಯಾಯ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ­ದಲ್ಲಿ ಆನ್‌ಲೈನ್‌ ಮೂಲಕ ಮಾಡಿದ ಭಾಷಣದಲ್ಲಿ ಈ ವಿಷಯ ಪ್ರಸ್ತಾವಿಸಿದರು.

ಈ ದಶಕದಲ್ಲಿ ಜೈವಿಕ ಅನಿಲ ಬಳಕೆ­ಯನ್ನು 4 ಪಟ್ಟು ಹೆಚ್ಚಿಸುವ, ಹಾಗೆಯೇ ತೈಲಸಂಸ್ಕರಣೆ ಪ್ರಮಾಣವನ್ನು ಮುಂದಿನ ಐದು ವರ್ಷಗಳಲ್ಲಿ ದುಪ್ಪಟ್ಟು ಮಾಡುವ ಗುರಿಯಿದೆ. ಪ್ರಸ್ತುತ ಸೌರವಿದ್ಯುತ್‌ನ ಒಂದು ಘಟಕದ ಖರ್ಚು 2 ರೂ.ಗಳಾಗಿದೆ. ಹಿಂದೆ ಅದು 12ರಿಂದ 13 ರೂ.ಗಳಾಗಿತ್ತು. ಈಗ ಸೌರವಿದ್ಯುತ್‌ ದೇಶದ ಆದ್ಯತೆಯಾಗಿ ಬದಲಾಗಿದೆ. 2022ರೊಳಗೆ 175 ಗಿಗಾವ್ಯಾಟ್‌ ಸೌರ­ವಿದ್ಯುತ್‌ ಉತ್ಪಾದಿ­ಸುವ ಗುರಿಯಿದೆ. ಈ ಪ್ರಮಾಣ 2030ಕ್ಕೆ 450 ಗಿಗಾವ್ಯಾಟ್‌ ಆಗಲಿದೆ ಎಂಬ ಖಚಿತ ಭರವಸೆಯಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ಸ್ವಾತಂತ್ರ್ಯ ಹೋರಾಟದ ವೇಳೆ ಜನರ ತ್ಯಾಗ, ಬಲಿದಾನಗಳನ್ನು ಈಗಿನ ವಿದ್ಯಾರ್ಥಿಗಳು ಸ್ಮರಿಸಿಕೊಳ್ಳಬೇಕು. ಆತ್ಮನಿರ್ಭರ ಭಾರತಕ್ಕಾಗಿಯೂ ಅಂತಹದ್ದೇ ತ್ಯಾಗಬಲಿದಾನಗಳು ಬೇಕಾಗಿದೆ. ಏನೂ ಬದಲಾಗಲ್ಲ ಎಂಬ ನಿರಾಶಾವಾದ ಮೊದಲು ತೊಲಗಬೇಕು ಎಂದು ಪ್ರಧಾನಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next