Advertisement

Kohli mask: ಭಾರತ-ದ.ಆಫ್ರಿಕಾ ಪಂದ್ಯ: 70,000 ಕೊಹ್ಲಿ ಮಾಸ್ಕ್

11:33 PM Oct 31, 2023 | Team Udayavani |

ಕೋಲ್ಕತಾ: ಮುಂದಿನ ನ. 5ರಂದು ಭಾರತ ಕ್ರಿಕೆಟ್‌ ತಂಡ ಪ್ರಬಲ ದಕ್ಷಿಣ ಆಫ್ರಿಕಾವನ್ನು ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ಎದುರಿಸಲಿದೆ. ವಿಶೇಷವೆಂದರೆ ಅಂದು ವಿರಾಟ್‌ ಕೊಹ್ಲಿ ಅವರ 35ನೇ ಜನ್ಮದಿನಾಚರಣೆ. ಈ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಕಾರಣ ಪ್ರಚಂಡ ಲಯದಲ್ಲಿರುವ ಕೊಹ್ಲಿ ಅವರಿಗೆ ಅಂದು ವಿಶೇಷ ದಿನವಾಗಿರಲಿದೆ. ಇದನ್ನು ಇನ್ನಷ್ಟು ವಿಶೇಷವಾಗಿಸಲು ಬಂಗಾಳ ಕ್ರಿಕೆಟ್‌ ಮಂಡಳಿ ಯೋಚಿಸಿದೆ.

Advertisement

ಪಂದ್ಯದ ದಿನ 70,000 ಕೊಹ್ಲಿ ಮಾಸ್ಕ್ಗಳನ್ನು ಅಭಿಮಾನಿಗಳಿಗೆ ವಿತರಿಸಲಿದೆ. ಬರುವ ಅಭಿಮಾನಿಗಳೆಲ್ಲ ಕೊಹ್ಲಿ ಅವರನ್ನು ಪ್ರೋತ್ಸಾಹಿಸಬೇಕೆನ್ನುವುದು ಇದರ ಉದ್ದೇಶ. ಹಾಗೆಯೇ ಕೇಕ್‌ ಕತ್ತರಿಸುವ ಯೋಜನೆಯನ್ನೂ ಬಂಗಾಳ ಸಂಸ್ಥೆ ಮಾಡಿದೆ. ಪ್ರಸ್ತುತ ಕೊಹ್ಲಿ ಏಕದಿನದಲ್ಲಿ 48 ಶತಕ ಬಾರಿಸಿದ್ದಾರೆ, ಇನ್ನೊಂದು ಶತಕ ಬಾರಿಸಿದರೆ ಸಚಿನ್‌ ತೆಂಡುಲ್ಕರ್‌ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next