ನವ ದೆಹಲಿ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 46,759 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 509 ಮಂದಿ ಸೋಂಕಿನಿಂದ ಮೃತ ಪಟ್ಟಿರುವುದಾಗಿ ಇಂದು (ಆಗಸ್ಟ್ 28, ಶನಿವಾರ) ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.
ದೇಶದಾದ್ಯಂತ ಈವರೆಗೂ ಪತ್ತೆಯಾದ ಒಟ್ಟು ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 3,26,49,947ಕ್ಕೆ ತಲುಪಿದ್ದು, 4,37,370 ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಕೂಡ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ಟೆಸ್ಟ್ ಪಂದ್ಯದಲ್ಲಿ ಹೈಡ್ರಾಮಾ: ಮತ್ತೆ ಭಾರತ ತಂಡದ ಪರ ಆಡಲು ಮೈದಾನಕ್ಕೆ ನುಗ್ಗಿದ ಜಾರ್ವೋ!
ಇಲ್ಲಿಯವರೆಗೂ 3,18,52,802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,59,775 ಸಕ್ರಿಯ ಪ್ರಕರಣಗಳಿವೆ. ಇನ್ನು, ವಾರದ ಪಾಸಿಟಿವಿಟಿ ರೇಟ್ ಶೇಕಡಾ 2.19 ಇದ್ದರೇ, ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 2.66 ರಷ್ಟಿದೆ ಎಂದು ಹೇಳಿದೆ.
ಇನ್ನು, ನಿನ್ನೆ ಒಂದೇ ದಿನ ದೇಶದಾದ್ಯಂತ 1,03,35,290 ಲಸಿಕೆಯನ್ನು ನೀಡಲಾಗಿದ್ದು, ಒಟ್ಟು ಈವರೆಗೆ ದೇಶದಾದ್ಯಂತ 62,29,89,134 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿರುವುದಾಗಿ ಹೇಳಿದೆ.
ಕಳೆದೊಂದು ದಿನದಲ್ಲಿ ಕೇರಳದಲ್ಲಿ ಒಟ್ಟು 32,801 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 179 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೇರಳವೊಂದರಲ್ಲೇ ಒಟ್ಟು ದೇಶದ ಮುಕ್ಕಾಲು ಪ್ರಮಾಣದಷ್ಟು ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : ಮೀನು ಖರೀದಿಸದ ತೇಜಸ್ವಿಗೆ ಕೆರೆಯಲ್ಲೂ ಮೀನು ಸಿಗಲಿಲ್ಲ; ತೇಜಸ್ವಿ ಬದುಕು ಕುತೂಹಲ…