Advertisement

ಹಠಾತ್ತನೆ ಕುಸಿದು ಹೋದ ಭಾರತ ಎ ಬ್ಯಾಟಿಂಗ್‌

06:05 AM Aug 12, 2018 | |

ಆಲೂರು (ಬೆಂಗಳೂರು): ಇಲ್ಲಿ ನಡೆಯುತ್ತಿರುವ ಭಾರತ ಮತ್ತು ದ.ಆಫ್ರಿಕಾ “ಎ’ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ “ಎ’ ತಂಡ 345 ರನ್ನಿಗೆ ಆಲೌಟಾಗಿದೆ. ಆರಂಭಿಕ ದಿನದ ಅಂತ್ಯಕ್ಕೆ ಕೇವಲ 4 ವಿಕೆಟ್‌ ಕಳೆದುಕೊಂಡು 322 ರನ್‌ ಗಳಿಸಿ ಭಾರತ ಉತ್ತಮ ಸ್ಥಿತಿಯಲ್ಲೇ ಇತ್ತು. ಆದರೆ 2ನೇ ದಿನ ಕೇವಲ 23 ರನ್ನಿಗೆ ಉಳಿದ 6 ವಿಕೆಟ್‌ ಕಳೆದುಕೊಂಡಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ “ಎ’ ತಂಡ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡು 219 ರನ್‌ ಗಳಿಸಿದೆ.

Advertisement

ಮೊದಲ ದಿನ ಹನುಮ ವಿಹಾರಿ ಶತಕ (148)ದೊಂದಿಗೆ ಉತ್ತಮ ಸ್ಥಿತಿಯಲ್ಲೇ ಇದ್ದ ಭಾರತ “ಎ’ ತಂಡ 2ನೇ ದಿನ ಕೇವಲ 23 ರನ್ನಿಗೆ 6 ವಿಕೆಟ್‌ ಕಳೆದುಕೊಂಡಿದ್ದು ಅಚ್ಚರಿ ಹುಟ್ಟಿಸಿದೆ. ಆಫ್ರಿಕಾ ವೇಗಿ ಡುವಾನ್‌ ಒಲಿವರ್‌ 63 ರನ್‌ಗೆ 6 ವಿಕೆಟ್‌ ಉರುಳಿಸಿದ್ದು ಭಾರತದ ಪತನಕ್ಕೆ ಕಾರಣವಾಯಿತು.

ಆಫ್ರಿಕಾ “ಎ’ ಉತ್ತಮ ಬ್ಯಾಟಿಂಗ್‌:
ಭಾರತ 345 ರನ್ನಿಗೆ ತನ್ನ ಇನ್ನಿಂಗ್ಸ್‌ ಮುಗಿಸಿದ ಅನಂತರ ದಕ್ಷಿಣ ಆಫ್ರಿಕಾ ತನ್ನ ಬ್ಯಾಟಿಂಗ್‌ ಆರಂಭಿಸಿತು. ಆರಂಭಿಕ ಮಾಲನ್‌ ಸೊನ್ನೆಗೆ ಮೊಹಮ್ಮದ್‌ ಸಿರಾಜ್‌ಗೆ ಬಲಿಯಾದರು. ಇನ್ನೊಬ್ಬ ಆರಂಭಿಕ ಸರೆಲ್‌ ಎರಿÌ ಹಾಗೂ ದ್ವಿತೀಯ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಜುಬೇರ್‌ ಹಮ್ಜಾ ಉತ್ತಮ ಜೊತೆಯಾಟವಾಡಿದರು. ಎರಿÌ 118 ಎಸೆತಗಳಲ್ಲಿ 58 ರನ್‌ ಗಳಿಸಿದರೆ, ಹಮ್ಜಾ 125 ಎಸೆತಗಳಲ್ಲಿ 93 ರನ್‌ ಗಳಿಸಿದರು. ಇವರಿಬ್ಬರ ಪೈಕಿ ಹಮ್ಜಾ ವೇಗವಾಗಿ ಬ್ಯಾಟ್‌ ಬೀಸಿದರು. ಈ ಇಬ್ಬರು ಔಟಾಗಿರುವುದು ಭಾರತದ ಪಾಳೆಯದಲ್ಲಿ ಭರವಸೆ ಮೂಡಿಸಿದೆ. ಆದರೆ ಇನ್ನೊಂದು ಕಡೆ ವ್ಯಾನ್‌ ಡರ್‌ ಡಸೆನ್‌ (18), ಆರ್‌.ಸೆಕೆಂಡ್‌ (35) ರನ್‌ ಗಳಿಸಿ ಕ್ರೀಸ್‌ಗೆ ಕಚ್ಚಿಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಭಾರತ “ಎ ‘345ಕ್ಕೆ ಆಲೌಟ್‌ (ಹನುಮ ವಿಹಾರಿ 148, ಅಂಕಿತ್‌ ಭಾವೆ° 80, ಡುಯಾನ್‌ ಒಲಿವರ್‌ 63ಕ್ಕೆ 6). ದಕ್ಷಿಣ ಆಫ್ರಿಕಾ “ಎ’ 219ಕ್ಕೆ 3 ವಿಕೆಟ್‌ (ಸರೆಲ್‌ ಎರಿÌ 58, ಜುಬೇರ್‌ ಹಮ್ಜಾ 93, ಚಹಲ್‌ 62ಕ್ಕೆ 2)

Advertisement

Udayavani is now on Telegram. Click here to join our channel and stay updated with the latest news.

Next