Advertisement

ಭಾರತ “ಎ’ತಂಡ ಪ್ರಕಟ:ಅಜಿಂಕ್ಯ ರಹಾನೆ ನಾಯಕ

12:30 AM Jan 20, 2019 | Team Udayavani |

ಹೊಸದಿಲ್ಲಿ: ಮುಂದಿನ ವಾರ ಆರಂಭವಾಗಲಿರುವ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಸರಣಿಗೆ ಬಿಸಿಸಿಐ ಭಾರತ “ಎ’ ತಂಡವನ್ನು ಪ್ರಕಟಿಸಿದ್ದು, ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಮೊದಲ 3 ಏಕದಿನ ಪಂದ್ಯಗಳಿಗೆ ನಾಯಕನ್ನಾಗಿ ಆಯ್ಕೆ ಮಾಡಲಾಗಿದೆ.

Advertisement

ಭಾರತ “ಎ” ವಿರುದ್ಧದ ಸರಣಿಗಾಗಿ ಇಂಗ್ಲೆಂಡ್‌ ಲಯನ್ಸ್‌ ಆಗಮಿಸಲಿದ್ದು, 5 ಏಕದಿನ ಪಂದ್ಯ ಹಾಗೂ 3 ಚತುರ್ದಿನ ಪಂದ್ಯಗಳನ್ನು ಆಡಲಿದೆ. ಮೊದಲ 3 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದರೆ, ಅನಂತರದ 2 ಪಂದ್ಯಗಳಲ್ಲಿ ಅಂಕಿತ್‌ ಬವೆ° ನಾಯಕನಾಗಿರಲಿದ್ದಾರೆ.

ಈ ಸರಣಿಯ ಮೊದಲ ಏಕದಿನ ಪಂದ್ಯ ಜ. 23ರಂದು ತಿರುವನಂತಪುರದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ಎರಡು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಇದಕ್ಕಾಗಿ ಬೋರ್ಡ್‌ ಪ್ರಸಿಡೆಂಟ್‌ ಇಲೆವನ್‌ ತಂಡವನ್ನು  ಪ್ರಕಟಿಸಲಾಗಿದೆ. ಮೊದಲ ಚತುರ್ದಿನ ಪಂದ್ಯ ಫೆ. 3ರಿಂದ ವಯನಾಡ್‌ನ‌ಲ್ಲಿ ನಡೆಯಲಿದೆ.

ತಂಡಗಳ ಆಯ್ಕೆಯ ವೇಳೆ ರಣಜಿ ಟ್ರೋಫಿ ಸೆಮಿಫೈನಲ್‌ ಪ್ರವೇಶಿಸಿರುವ 4 ತಂಡಗಳ ಯಾವುದೇ ಆಟಗಾರರನ್ನು ಭಾರತ “ಎ’ ತಂಡಕ್ಕೆ ಆಯ್ಕೆ ಮಾಡಿಲ್ಲ.

ಭಾರತ “ಎ’ ತಂಡ
ಮೊದಲ 3 ಏಕದಿನ ಪಂದ್ಯಗಳಿಗೆ:
ಅಜಿಂಕ್ಯ ರಹಾನೆ (ನಾಯಕ), ಅನ್ಮೋಲ್‌ಪ್ರೀತ್‌ ಸಿಂಗ್‌, ರಿತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ಅಂಕಿತ್‌ ಬವೆ°, ಇಶಾನ್‌ ಕಿಶನ್‌ (ಕೀಪರ್‌), ಕೃಣಾಲ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಮಯಾಂಕ್‌ ಮಾರ್ಕಂಡೆ, ಜಯಂತ್‌ ಯಾದವ್‌, ಸಿದ್ಧಾರ್ಥ್ ಕೌಲ್‌, ಶಾದೂìಲ್‌ ಠಾಕೂರ್‌, ದೀಪಕ್‌ ಚಹರ್‌, ನವದೀಪ್‌ ಸೈನಿ.

Advertisement

4ನೇ ಹಾಗೂ 5ನೇ ಪಂದ್ಯಗಳಿಗೆ: ಅಂಕಿತ್‌ ಬವೆ° (ನಾಯಕ), ರಿತುರಾಜ್‌ ಗಾಯಕ್ವಾಡ್‌, ಅನ್ಮೋಲ್‌ಪ್ರೀತ್‌ ಸಿಂಗ್‌, ರಿಕ್ಕಿ ಭುಯಿ, ಸಿದ್ದೇಶ್‌ ಲಾಡ್‌, ಹಿಮ್ಮತ್‌ ಸಿಂಗ್‌, ರಿಷಬ್‌ ಪಂತ್‌ (ಕೀಪರ್‌), ದೀಪಕ್‌ ಹೂಡಾ, ಅಕ್ಷರ್‌ ಪಟೇಲ್‌, ರಾಹುಲ್‌ ಚಹರ್‌, ಜಯಂತ್‌ ಯಾದವ್‌, ನವದೀಪ್‌ ಸೈನಿ, ಅವೇಶ್‌ ಖಾನ್‌, ದೀಪಕ್‌ ಚಹರ್‌, ಶಾದೂìಲ್‌ ಠಾಕೂರ್‌.

Advertisement

Udayavani is now on Telegram. Click here to join our channel and stay updated with the latest news.

Next