Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ “ಎ’ 7 ವಿಕೆಟಿಗೆ 267 ರನ್ ಪೇರಿಸಿ ಸವಾ ಲೊಡ್ಡಿದರೆ, ಭಾರತ “ಎ’ 46.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 270 ರನ್ ಬಾರಿಸಿ ವಿಜಯಿಯಾಯಿತು. ಅಯ್ಯರ್ ಅಜೇಯ 140 ರನ್ ಬಾರಿಸಿದರೆ (131 ಎಸೆತ, 11 ಬೌಂಡರಿ, 4 ಸಿಕ್ಸರ್), ವಿಜಯ್ ಶಂಕರ್ 86 ಎಸೆತಗಳಿಂದ 72 ರನ್ ಬಾರಿಸಿದರು (9 ಬೌಂಡರಿ). ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 141 ರನ್ ಒಟ್ಟುಗೂಡಿತು. ಸಂಜು ಸ್ಯಾಮ್ಸನ್ (12) ಮತ್ತು ಕರುಣ್ ನಾಯರ್ (4) ಭಾರತ 20 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತ್ತು. ನಾಯಕ ಮನೀಷ್ ಪಾಂಡೆ 32 ರನ್ ಹೊಡೆದು ಅಜೇಯರಾಗಿ ಉಳಿದರು.
32ಕ್ಕೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತಕ್ಕೊಳಗಾಗಿದ್ದ ದಕ್ಷಿಣ ಆಫ್ರಿಕಾವನ್ನು ದೊಡ್ಡ ಮೊತ್ತದೆಡೆಗೆ ಮುನ್ನಡೆಸಿದವರು ಸೀನಿಯರ್ ತಂಡದ ಬ್ಯಾಟಿಂಗ್ ಆಲ್‌ರೌಂಡರ್ ಫರ್ಹಾನ್ ಬೆಹದೀìನ್ ಮತ್ತು ಡಿವಾಲ್ಡ್ ಪ್ರಿಟೋರಿಯಸ್. ಬೆಹದೀìನ್ ಅಮೋಘ 101 ರನ್ ಬಾರಿಸಿದರೆ, 4 ಟೆಸ್ಟ್ ಪಂದ್ಯಗಳ ಅನುಭವಿ ಪ್ರಿಟೋರಿಯಸ್ 58 ರನ್ ಹೊಡೆದರು. 28ನೇ ಓವರಿನಲ್ಲಿ 115ಕ್ಕೆ 5 ವಿಕೆಟ್ ಉರುಳಿದಾಗ ಒಟ್ಟುಗೂಡಿದ ಇವರು 101 ರನ್ ಜತೆಯಾಟ ನಿಭಾಯಿ ಸಿದರು. ಆತಿಥೇಯರನ್ನು ಅಲ್ಪ ಮೊತ್ತಕ್ಕೆ ಹಿಡಿದಿಡುವ ಭಾರತದ ಯೋಜನೆಯನ್ನು ವಿಫಲಗೊಳಿಸಿದರು. ಬೆಹದೀನ್ ಅವರದು ಅಜೇಯ 101 ರನ್ ಕೊಡುಗೆ. 114 ಎಸೆತಗಳ ಈ ಬ್ಯಾಟಿಂಗ್ ವೇಳೆ 4 ಬೌಂಡರಿ, 3 ಸಿಕ್ಸರ್ ಸಿಡಿಯಲ್ಪಟ್ಟಿತು. ಪ್ರಿಟೋರಿಯಸ್ ಕೂಡ ಆಕ್ರಮಣಕಾರಿ ಆಟವಾಡಿ 61 ಎಸೆತಗಳಿಂದ 58 ರನ್ ಹೊಡೆದರು (5 ಬೌಂಡರಿ, 2 ಸಿಕ್ಸರ್). ಇವರಿಬ್ಬರನ್ನು ಹೊರತುಪಡಿಸಿದರೆ 39 ರನ್ ಮಾಡಿದ ನಾಯಕ ಖಾಯ ಝೊಂಡೊ ಅವರದೇ ಹೆಚ್ಚಿನ ಗಳಿಕೆ.
Related Articles
Advertisement