Advertisement

ಸುಲಭ ಗೆಲುವಿನತ್ತ ಭಾರತ ‘ಎ’

01:54 AM Aug 04, 2019 | Sriram |

ಪೋರ್ಟ್‌ ಆಫ್ ಸ್ಪೇನ್‌: ಆಫ್ ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ ಮತ್ತು ಮಯಾಂಕ್‌ ಅಗರ್ವಾಲ್ ಅವರ ಉತ್ತಮ ನಿರ್ವಹಣೆ ಯಿಂದಾಗಿ ಭಾರತ ‘ಎ’ ತಂಡವು ವೆಸ್ಟ್‌ಇಂಡೀಸ್‌ ‘ಎ’ ತಂಡದೆದುರು ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಸುಲಭ ಗೆಲುವಿನತ್ತ ಹೊರಟಿದೆ.

Advertisement

ಗೆಲ್ಲಲು 278 ರನ್‌ ಗಳಿಸುವ ಗುರಿ ಪಡೆದ ಭಾರತ ‘ಎ’ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದು 185 ರನ್‌ ಗಳಿಸಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು ಇನ್ನುಳಿದ 7 ವಿಕೆಟ್ ನೆರವಿನಿಂದ ತಂಡ 93 ರನ್‌ ಗಳಿಸಬೇಕಾಗಿದೆ.

ಪ್ರವಾಸಿ ಭಾರತೀಯ ತಂಡ ಉತ್ತಮ ರೀತಿಯಲ್ಲಿ ದಿನದಾಟ ವನ್ನು ಅಂತ್ಯಗೊಳಿಸಬಹುದಿತ್ತು. ಆದರೆ ದಿನದಾಟದ ಅಂತಿಮ ಅವಧಿಯಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡಿದ್ದರಿಂದ ವೆಸ್ಟ್‌ ಇಂಡೀಸ್‌ ಸ್ವಲ್ಪಮಟ್ಟಿಗೆ ಮೇಲುಗೈ ಸಾಧಿಸುವಂತಾಯಿತು.

ಆರಂಭಿಕರಾದ ಮಯಾಂಕ್‌ ಅಗರ್ವಾಲ್ ಮತ್ತು ಪ್ರಿಯಾಂಕ್‌ ಪಾಂಚಾಲ್ ಮೊದಲ ವಿಕೆಟ್‌ಗೆ 150 ರನ್ನುಗಳ ಜತೆಯಾಟ ನಡೆಸಿದ್ದರಿಂದ ತಂಡ ಸುಲಭವಾಗಿ ಗೆಲ್ಲುವ ಸೂಚನೆ ನೀಡಿತ್ತು. ಆದರೆ ಅವರಿಬ್ಬರು 7 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ತಂಡ ಆಘಾತಕ್ಕೆ ಒಳಗಾಯಿತು. ಸ್ವಲ್ಪ ಹೊತ್ತಿನಲ್ಲಿ ನಾಯಕ ಹನುಮ ವಿಹಾರಿ ಕೂಡ ಔಟಾದರು. ಹೀಗಾಗಿ ಭಾರತ ‘ಎ’ ಮೂರನೇ ದಿನದಾಟದ ಅಂತ್ಯಕ್ಕೆ 185 ರನ್ನಿಗೆ 3 ವಿಕೆಟ್ ಕಳೆದುಕೊಳ್ಳುವಂತಾಯಿತು.

ಸುನಿಲ್ ಆಂಬ್ರಿಸ್‌ ಅರ್ಧಶತಕ
4 ವಿಕೆಟಿಗೆ 12 ರನ್ನುಗಳಿಂದ ದಿನದಾಟ ಆರಂಭಿಸಿದ ವಿಂಡೀಸ್‌ ‘ಎ’ ತಂಡಕ್ಕೆ ಸುನಿಲ್ ಆಂಬ್ರಿಸ್‌ ಆಸರೆಯಾದರು. ಅವರು ಜರ್ಮೈನ್‌ ಬ್ಲ್ಯಾಕ್‌ವುಡ್‌ ಮತ್ತು ಶೆಫ‌ರ್ಡ್‌ ಅವರ ಬೆಂಬಲದಿಂದ ತಂಡದ ಮೊತ್ತವನ್ನು 149 ರನ್‌ವರೆಗೆ ವಿಸ್ತರಿಸಲು ನೆರವಾದರು. ಆಂಬ್ರಿಸ್‌ 71 ರನ್‌ ಹೊಡೆದರು. 93 ಎಸೆತ ಎದುರಿಸಿದ ಅವರು 10 ಬೌಂಡರಿ ಬಾರಿಸಿದ್ದರು.

Advertisement

ಸಂಕ್ಷಿಪ್ತ ಸ್ಕೋರು:
ವೆಸ್ಟ್‌ಇಂಡೀಸ್‌ ‘ಎ’ 318 ಮತ್ತು 149 (ಸುನಿಲ್ ಆಂಬ್ರಿಸ್‌ 71, ಕೃಷ್ಣಪ್ಪ ಗೌತಮ್‌ 17ಕ್ಕೆ 5); ಭಾರತ ‘ಎ’ 190 ಮತ್ತು 3 ವಿಕೆಟಿಗೆ 185 (ಪಾಂಚಾಲ್ 68, ಮಯಾಂಕ್‌ಅಗರ್ವಾಲ್ 81).

Advertisement

Udayavani is now on Telegram. Click here to join our channel and stay updated with the latest news.

Next