Advertisement
ದೇಶದ ಕೃತಕ ಬುದ್ಧಿಮತ್ತೆ (ಎ.ಐ.) ಕಂಪ್ಯೂಟಿಂಗ್ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರವನ್ನು ವಿಸ್ತರಿಸಲು ಉದ್ದೇಶಿಸಿದೆ ಎಂದಿದ್ದಾರೆ.
Related Articles
ಇದಲ್ಲದೆ ದತ್ತಾಂಶಗಳ ಗುಣಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ದತ್ತಾಂಶ ನಿರ್ವಹಣ ಅಧಿಕಾರಿಯೂ ಇರಲಿದ್ದಾರೆ.
Advertisement
300 ರೂ. ಉಜ್ವಲ ಸಬ್ಸಿಡಿ 2025ರ ಎಪ್ರಿಲ್ ವರೆಗೆ ವಿಸ್ತರಣೆ
ಉಜ್ವಲ ಯೋಜನೆ ಅನ್ವಯ ಬಡ ಮಹಿಳೆಯರಿಗೆ ನೀಡಲಾಗುತ್ತಿರುವ ಎಲ್‌ಪಿಜಿ ಸಿಲಿಂಡರ್‌ಗಳ ಮೇ ಲಿನ 300 ರೂ.ಸಬ್ಸಿಡಿಯನ್ನು 2025ರ ಎ.1ರ ವರೆಗೆ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ. ಕಳೆ ದ ಅಕ್ಟೋಬರ್‌ನಲ್ಲಿ ಸಬ್ಸಿಡಿ ಮೊತ್ತವನ್ನು 200 ರೂ.ಗಳಿಂದ 300 ರೂ.ಗಳಿಗೆ ಸರಕಾರ ಏರಿಕೆ ಮಾಡಿತ್ತು.
ಸೆಣಬಿನ ಬೆಂಬಲ ಬೆಲೆ ಏರಿಕೆ2024-25ನೇ ಸಾಲಿಗೆ ಕಚ್ಚಾ ಸೆಣಬಿನ ಬೆಂಬಲ ಬೆಲೆಯನ್ನು 285 ರೂ.ಗಳಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಪ್ರತೀ ಕ್ವಿಂಟಾಲ್ ಕಚ್ಚಾ ಸೆಣಬಿಗೆ ನೀಡಲಿರುವ ಬೆಂಬಲ ಬೆಲೆ 5,335ರೂ.ಗಳಿಗೆ ತಲುಪಿದೆ. ಇದು ಪೂರ್ವ ರಾಜ್ಯಗಳಿಗೆ ಲಾಭ ತರಲಿದೆ. ಈಶಾನ್ಯ ರಾಜ್ಯಗಳಿಗೆ “ಉನ್ನತಿ’
ಈಶಾನ್ಯ ರಾಜ್ಯಗಳಲ್ಲಿ ಹೊಸ ಕೈಗಾರಿಕೆ ಅಭಿವೃದ್ಧಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 10,037 ಕೋಟಿ ರೂ.ಗಳ ಉತ್ತರ-ಪೂರ್ವ ಪರಿವರ್ತನ ಕೈಗಾರೀಕರಣ ಯೋಜನೆ (ಉನ್ನತಿ )ಗೆ ಅನುಮೋದನೆ ನೀಡಿದೆ. ಲಾಭದಾಯಕ ಉದ್ಯೋಗ ಸೃಷ್ಟಿ ಇದರ ಉದ್ದೇಶ. ಏನಿದು ಯೋಜನೆ? ದೇಶದಲ್ಲಿ ಕೃತಕ ಬುದ್ಧಿಮತ್ತೆ
ಕ್ಷೇತ್ರಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಪ್ರಯತ್ನ
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಯೋಜನೆ ಅನುಕೂಲವೇನು?
ಆರೋಗ್ಯ, ಕೃಷಿ ಸೇರಿದಂತೆ ಹಲವು ಆದ್ಯತೆಯ ಕ್ಷೇತ್ರಗಳಿಗಾಗಿ ಡೇಟಾ ಸೆಟ್‌ಗಳ ಅಭಿವೃದ್ಧಿ
10,000ಕ್ಕೂ ಹೆಚ್ಚು ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್(ಜಿಪಿಯು)ಗಳ ಸ್ಥಾಪನೆ
50 ಸಚಿವಾಲಯಗಳಲ್ಲಿ ಎಐ ಕ್ಯೂರೇಶನ್ ಯುನಿಟ್
(ಎಸಿಯು)ಗಳ ಅಭಿವೃದ್ಧಿ
ಎ.ಐ. ಆ್ಯಪ್ಲಿಕೇಶನ್ ಕ್ಷೇತ್ರದಲ್ಲಿ ಕೆಲಸ ಮಾಡುವವರ ಅನುಕೂಲಕ್ಕೆ ಮಾರುಕಟ್ಟೆ ಸ್ಥಾಪನೆ
ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಡೇಟಾ ಸೆಟ್‌ಗಳ ಅಭಿವೃದ್ಧಿ