Advertisement

ಭಾರತ ಮಾನವತೆಗೆ ತಗುಲಿರುವ ಕ್ಯಾನ್ಸರ್‌: ಕಿಡಿ ಕಾರಿದ ಲಷ್ಕರ್‌

11:13 AM Jun 17, 2017 | udayavani editorial |

ಜಮ್ಮು ಕಾಶ್ಮೀರ :  ತೀವ್ರವಾಗಿ ನಂಜು ಕಾರುವ ಹೊಸ ಹೇಳಿಕೆಯೊಂದರಲ್ಲಿ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆ ಭಾರತವನ್ನು  ಕಟುವಾಗಿ ದೂಷಿಸಿದ್ದು “ಭಾರತವು ಮಾನವತೆಗೆ ತಗುಲಿರುವ ಕ್ಯಾನ್ಸರ್‌’ ಎಂದು ಹೇಳಿದೆ. ಭಾರತವು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ  ಅಗ್ರಗಣ್ಯ ದೇಶವಾಗಿದೆ ಎಂದೂ ಅದು ಜರೆದಿದೆ.

Advertisement

ಲಷ್ಕರ್‌ ಎ ತಯ್ಯಬ ಇದರ ಈ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಉಗ್ರ ಸಂಘಟನೆಯ ವಕ್ತಾರ  ಡಾ. ಅಬ್ದುಲ್ಲ ಘಜ್‌ನವಿ, ಭಾರತೀಯ ಮಾಧ್ಯಮದ ಬಗ್ಗೆಯೂ ಕಿಡಿ ಕಾರಿದ್ದು “ಭಾರತೀಯ ಮಾಧ್ಯಮ ನಿರಾಧಾರ ಅಪಪ್ರಚಾರದಲ್ಲಿ ತೊಡಗಿಕೊಂಡು ದೇಶವನ್ನು ತಪ್ಪುದಾರಿಗೆ ಕೊಂಡೊಯ್ಯತ್ತಿದೆ’ ಎಂದು ಹೇಳಿದೆ. 

ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ಲ್ಲಿ ಲಷ್ಕರ್‌ ಕಮಾಂಡರ್‌ ಜುನೇದ್‌ ಮತ್ತೂ ಹತನಾಗಿರುವುದನ್ನು ದೃಢೀಕರಿಸಲು ಹೊರಡಿಸಲಾಗಿರುವ ಈ ಹೇಳಿಕೆಯಲ್ಲಿ ಲಷ್ಕರ್‌ ಸಂಘಟನೆ, ಭಾರತವನ್ನು  ಕಟುವಾಗಿ ಹೀಯಾಳಿಸಿದೆ. 

ಲಷ್ಕರ ಎ ತಯ್ಯಬ ಸಂಘಟನೆಯ ಮುಖ್ಯಸ್ಥನಾಗಿರುವ ಮೊಹಮ್ಮದ್‌ ಶಾ ಹತ ಜುನೇದ್‌ ಮತ್ತೂ ಗೆ ಶ್ರದ್ಧಾಂಜಲಿ ಅರ್ಪಿಸಿರುವುದಾಗಿ ಲಷ್ಕರ್‌ನ ಈ ಹೇಳಿಕೆ ತಿಳಿಸಿದೆ. 

“ಜುನೇದ್‌ ನಂತಹ ಜೆಹಾದಿ ಹೋರಾಟಗಾರರ ಬಲಿದಾನ ವ್ಯರ್ಥವಾಗುವುದಿಲ್ಲ; ಬಲಿದಾನಗೈದಿರುವ ಜೆಹಾದಿಗಳ ಪರಿಶುದ್ಧ ಮತ್ತು ಗೌರವದ ರಕ್ತ ಮುಂದೆ ಭಾರತದ ವಿನಾಶಕ್ಕೆ ಕಾರಣವಾಗಲಿದೆ’ ಎಂದು  ಲಷ್ಕರ್‌ ಹೇಳಿಕೆ ತಿಳಿಸಿದೆ. “ಭಾರತಕ್ಕೆ  ತಾನೇ ಹಚ್ಚಿರುವ ಬೆಂಕಿಯ ಬಗ್ಗೆ ಎಚ್ಚರವಿರಲಿ; ಅದು ಭಾರತದ ಪ್ರತಿಯೊಂದು ಇಟ್ಟಿಗೆ ಮತ್ತು ಕಲ್ಲುಗಳನ್ನು ಪುಡಿಗುಟ್ಟಲಿದೆ’ ಎಂದು ಹೇಳಿಕೆಯಲ್ಲಿ ಲಷ್ಕರ್‌ ಅಬ್ಬರಿಸಿದೆ. 

Advertisement

ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಆರು ಮಂದಿ ಪೊಲೀಸರನ್ನು ಹೊಂಚು ದಾಳಿಯಲ್ಲಿ ಕೊಂದ ಬಳಿಕ ನಡೆದ ಎನ್‌ಕೌಂಟರ್‌ಗೆ ಲಷ್ಕರ್‌ ಕಮಾಂಡರ್‌ ಜುನೇದ್‌ ಮತ್ತೂ ಹಾಗೂ ಇನ್ನೊಬ್ಬ ಬಲಿಯಾದುದನ್ನು ಅನುಸರಿಸಿ ಲಷ್ಕರ್‌ ಎ ತಯ್ಯಬ ಈ ಹೇಳಿಕೆಯನ್ನು ಹೊರಡಿಸಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next