Advertisement

Indi; ನಾಲ್ವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹ*ತ್ಯೆ

09:20 PM Sep 14, 2024 | Vishnudas Patil |

ಇಂಡಿ: ಪಟ್ಟಣದ ಅಗರಖೇಡ ರಸ್ತೆಯ ಇಂಡಿ ಬ್ರಾಂಚ್ ಕಾಲುವೆಯ ಹತ್ತಿರ ಯುವಕನೋರ್ವನನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ 7 ಗಂಟೆಯ ವೇಳೆಗೆ ನಡೆದಿದೆ.

Advertisement

ಮೃತ ಯುವಕ ಸಂಕೇತ ದಾಮು ಜಾದವ್ (17) ಎಂದು ಗುರುತಿಸಲಾಗಿದೆ. ಹತ್ಯೆಗೀಡಾದವ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಇಂಡಿ ಶಹರ ಸಿಪಿಐ ರತನಸಿಂಗ ಜೀರಗ್ಯಾಳ ಸೇರಿದಂತೆ ಪೊಲೀಸ್ ಇಲಾಖೆಯ ಹಲವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next