Advertisement

ಇಂಡಿ ಪುರಸಭೆ ಸದಸ್ಯನ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು

09:13 PM Mar 25, 2022 | Team Udayavani |

ಇಂಡಿ : ವಿಜಯಪುರ ಜಿಲ್ಲೆಯ ಇಂಡಿ ಪುರಸಭೆಯ ಓರ್ವ ಸದಸ್ಯನ ಮೇಲೆ ತೀವ್ರ ಹಲ್ಲೆ ನಡೆದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಇಂಡಿ ಪುರಸಭೆ 15ನೇ ವಾರ್ಡ್ ಸದಸ್ಯ ಶಬ್ಬೀರ ಖಾಜಿ ಹಲ್ಲೆಗೊಳಗಾದ ವ್ಯಕ್ತಿ. 15ನೇ ವಾರ್ಡಿನಲ್ಲಿ ಖಾಲಿ ನಿವೇಶನದ ವಿಷಯವಾಗಿ ಎಂ.ಬಿ.ಮಾಣಿಕ್ ಎಂಬವರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ಹೋಗಿ ಹಲ್ಲೆಯ ಹಂತಕ್ಕೆ ತಲುಪಿದೆ.

ಈ ಹಂತದಲ್ಲಿ ಬಿದಿರಿನಿಂದ ಹಲ್ಲೆ ನಡೆಸಿದ್ದರಿಂದ ಪುರಸಭೆ ಸದಸ್ಯ ಶಬ್ಬೀರ್ ಖಾಜಿ ತೀವ್ರ ಗಾಯಗೊಂಡಿದ್ದು, ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ :ಯೋಗಿ ಸಂಪುಟ 2.0 ರಲ್ಲಿ ಐವರು ಮಹಿಳೆಯರಿಗೆ ಸಚಿವ ಪದವಿ

ಎಂ.ಬಿ. ಮಾಣಿಕ್ ಸೇರಿದಂತೆ ಆರು ಜನರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಪುರಸಭೆ ಸದಸ್ಯ ಖಾಜಿ ದೂರಿದ್ದಾರೆ. ಈ ಕುರಿತು ಇಂಡಿ ನಗರ ಪೊಲೀಸ್ ಠಾಣೆಗೆ ಖಾಜಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next