ಬೆಂಗಳೂರು: ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅವರು ಶನಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಿ ಕೆಲ ಹೊತ್ತು ಕಳೆದರು .
ಕಚೇರಿಗೆ ಆಗಮಿಸಿದ ಸುಮಲತಾ ಅವರಿಗೆ ಬಿಜೆಪಿ ನಾಯಕಿಯರಾದ ಭಾರತಿ ಶೆಟ್ಟಿ ಮತ್ತಿತರರು ಸ್ವಾಗತಿಸಿದರು.
ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಅವರು ಕಚೇರಿಯಲ್ಲಿ ಹಾಜರಿದ್ದು ಕೆಲ ಹೊತ್ತು ಮಾತುಕತೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ , ನನಗೆ ಕ್ಷೇತ್ರದ ಕೆಲಸ ಮಾಡಲು ಕೇಂದ್ರದ ಸಹಕಾರ ಬೇಕಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಹಾಕದೆ ಬಹಳಷ್ಟು ಸಹಕಾರವನ್ನು ಬಿಜೆಪಿ ನಾಯಕರು ನೀಡಿದ್ದರು,ನಾನು ಕೃತಜ್ಞತೆಗಳನ್ನು ಹೇಳಲು ಬಂದಿದ್ದೇನೆ ಎಂದರು.
ನನ್ನ ಬೆಂಬಲದ ಅಗತ್ಯ ಬಿಜೆಪಿಗೆ ಈಗ ಇಲ್ಲ. ಅಂಥಹ ಸಂಧರ್ಭವೇ ಇಲ್ಲ. ಬಿಜೆಪಿ ನಾಯಕರು ಕರೆದರೆ ಜನರನ್ನು ಕೇಳಿ ನಿರ್ಧರಿಸುತ್ತೆನೆ ಎಂದರು.