Advertisement
ಅವರಲ್ಲಿ ಮಹಾತ್ಮಾ ಗಾಂಧೀಜಿ ಅವರ ಕಟ್ಟಾ ಅನುಯಾಯಿಗಳಲ್ಲಿ ಅಗ್ರಪಂಕ್ತಿಯಲ್ಲಿ ಬರುವ ಉಕ್ಕಿನ ಪುರುಷ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕೊಡುಗೆ ಅಪೂರ್ವವಾದದ್ದು. ಛಿದ್ರವಾಗಿದ್ದ ಭಾರತವೆಲ್ಲ ಅಖಂಡ ಸ್ವರೂಪವಾಗಿ ನೆಲೆಗೊಳ್ಳುವುದರಲ್ಲಿ ಪಟೇಲರ ಮುತ್ಸದ್ದಿತನದ ಸಾಹಸವು ಐತಿಹಾಸಿಕವಾದ ಆತ್ಮಗೌರವದ ಚರಿತ್ರೆ. ಮಹಾತ್ಮಾ ಗಾಂಧೀಜಿ ರಾಷ್ಟ್ರಪಿತರಾದರೆ, ಪಟೇಲರು ರಾಷ್ಟ್ರ ನಿರ್ಮಾತೃ.
Related Articles
Advertisement
ಯಥಾಸ್ಥಿತಿ ಒಪ್ಪಂದ ಸೂತ್ರ ಮುಕ್ತಾಯ: ದೇಶಕ್ಕೆ ಏಕತೆಯ ಸ್ವರೂಪವನ್ನು ಪಡೆಯಲು ಸ್ವಾತಂತ್ರ್ಯ ಅನಂತರ ಒಂದು ವರ್ಷ, ಒಂದು ತಿಂಗಳು, ಎರಡು ದಿವಸ ಕಾಯಬೇಕಾಯಿತು. ಹೈದರಾಬಾದ್ ನಿಜಾಮ್ ಸಂಸ್ಥಾನದ ಸುಲ್ತಾನ ಮೀರ್ ಉಸ್ಮಾನ್ ಅಲಿಖಾನ್ 1934ರವರೆಗೆ ಸಾರ್ವಜನಿಕರ ಹಿತದೃಷ್ಟಿ ಯಿಂದಲೇ ಆಡಳಿತ ನೀಡಿದವರು. ಆದರೆ ಯಥಾಸ್ಥಿತಿ ಒಪ್ಪಂದ ಸೂತ್ರದಲ್ಲಿದ್ದ ದೇಶೀ ಸಂಸ್ಥಾ ನಗಳು ಬೇಕಾದರೆ ಸರ್ವಾಧಿಕಾರಿ ಸ್ವತಂತ್ರ ಸಾರ್ವ ಭೌಮ ರಾಗಬಹುದೆಂಬ ಸೂಚನೆಯು ನಿಜಾಮನ ಕನಸಿಗೆ ಉತ್ತೇಜನ ನೀಡಿತು. ಅದನ್ನು ಜಾತಿ-ಧರ್ಮ ಪಕ್ಷಪಾತಕ್ಕೆ ತಿರುಗಿಸಿ ದಳ್ಳುರಿ ಏಳಿಸಲು ಕಾಶೀಂ ರಜ್ವಿಯ ಪ್ರಚೋದನೆಯು ನಿಜಾಂ ಸುಲ್ತಾನರ ಕಣ್ಣುಗಳ ಬಣ್ಣಗೆಡಿಸಿದವು. ಆಗ ಹೈದರಾಬಾದ್ ಸಂಸ್ಥಾನವು ಹದಗೆಟ್ಟು ಸಾಮರಸ್ಯವನ್ನು ಕಳೆದು ಕೊಂಡಿತು. ಸಾರ್ವಜ ನಿಕರ ಸ್ಥಿತಿ ದಾರುಣಗೊಂಡಿತು. ಅಷ್ಟೇ ಅಲ್ಲ 1948ರ ಸೆಪ್ಟೆಂಬರ್‌ನಲ್ಲಿ ಸಂಸ್ಥಾನೀ ವಿರೋಧಿ ಗಳಿಂದ ಮೃತ್ಯು ದಿನ (ಡೈಯಿಂಗ್ ಡೇ) ಸಹ ನಿಶ್ಚಿತಗೊಂಡಿತು!
ಹದಗೆಟ್ಟ ನಿಜಾಮ್ ಸಂಸ್ಥಾನದ ಶ್ವೇತ ಪತ್ರವನ್ನು ಹೈದರಾಬಾದ್ ಸಂಸ್ಥಾನದ ಗಾಂಧೀಜಿ ಎನ್ನಿಸಿಕೊಂಡಿದ್ದ, ಸ್ಟೇಟ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸ್ವಾಮಿ ರಮಾನಂದ ತೀರ್ಥರು ಭಾರತ ಸರಕಾರಕ್ಕೆ ಸಲ್ಲಿಸಿದರು. ಅಲ್ಲದೆ ಕೇಂದ್ರ ಗೃಹ ಮಂತ್ರಿಗಳಾಗಿದ್ದ ಸರ್ದಾರ್ ಪಟೇಲರಿಗೂ ಪ್ರತ್ಯೇಕವಾಗಿ ನಿವೇದನೆ ಸಲ್ಲಿಸಿದ್ದರು. ಪರಿಣಾಮವಾಗಿ ಪಟೇಲರು ಪೊಲೀಸ್-ಸೇನಾ ಕಾರ್ಯಾಚರಣೆಗೆ ಆದೇಶ ನೀಡಿ, ನಿಜಾಮ್, ದೇಶೀಯ ಹೋರಾಟಗಾರರಿಗೆ ನಿಶ್ಚ ಯಿಸಿದ ಡೈಯಿಂಗೆ ಡೇ ಗಂಡಾಂತರವನ್ನು ತಪ್ಪಿಸಿದರು. ಪರಿಣಾಮವಾಗಿ 1948ರ ಸೆಪ್ಟಂಬರ್ 17ರಂದು ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡು, ಸ್ವತಂತ್ರ ಭಾರತದ ಹೈದರಾಬಾದ್ ರಾಜ್ಯವಾಗಿ ರೂಪ ತಳೆಯಿತು.
ಏಕತಾ ಭಾರತ ರಾಷ್ಟ್ರ ನಿರ್ಮಾಪಕರಾಷ್ಟ್ರಪಿತನ ಕನಸು ಅಖಂಡ ಭಾರತವಾಗಿತ್ತು. ಬ್ರಿಟಿಷರ ಕಪಟದಿಂದ ಅದು ಒಡೆದು ಇಬ್ಭಾಗವಾಗಿ ಒಂದು ಹೋಳು ಪಾಕಿಸ್ಥಾನವಾಯಿತು. ಅದರಿಂದ ಹಬ್ಬಿದ ಕೋಮು ದಳ್ಳುರಿಯನ್ನು ನಂದಿಸಲು ಗಾಂಧೀಜಿಯವರಿಗೂ ಕಷ್ಟ ವಾಯಿತು. ಹೈದರಾಬಾದ್, ಜುನಾಗಢ, ಭವಾಲ್ಪುರ, ಜಮ್ಮು-ಕಾಶ್ಮೀರ ಸಂಸ್ಥಾನಗಳು ಸ್ವತಂತ್ರ ರಾಷ್ಟ್ರಗಳಾಗಿ ಎದ್ದೇಳುತ್ತವೆಂಬ ಅಪಾಯವನ್ನರಿತ ಪಟೇಲರು ರಕ್ತದೋಕುಳಿಗೆ ಅವಕಾಶ ಕೊಡದೆ, ಅವೆಲ್ಲವೂ ಭಾರತ ಒಕ್ಕೂಟದ ರಾಜ್ಯಗಳಾಗುವಂತೆ ಮಾಡಿದರು. ಹೀಗಾಗಿ ಭಾರತ ಒಕ್ಕೂಟವು ಏಕತೆಯಲ್ಲಿ ಐಕ್ಯತೆಯ ಮಂತ್ರದ ಅರ್ಥವಾಗಿ ಏಕೋ ರಾಷ್ಟ್ರವಾಗಿ ರೂಪುಗೊಂಡಿದೆ. ಅಂತೆಯೇ ಪಟೇಲರನ್ನು ಏಕತಾ ಭಾರತದ ನಿರ್ಮಾಪಕ – ಏಕತಾ ಭಾವೈಕ್ಯದ ಹರಿಕಾನೆಂದು ಬಣ್ಣಿಸಲಾಗಿದೆ ಮತ್ತು ಅವರ ಜನ್ಮದಿನ ಅಕ್ಟೋಬರ್ 31ನ್ನು ರಾಷ್ಟ್ರದ ಏಕತಾ ದಿನವೆಂದು ಸ್ಮರಿಸಲಾಗುತ್ತದೆ. ಪ್ರೊ.ವಸಂತ ಕುಷ್ಟಗಿ