Advertisement

ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಚಾಚಾರ ಸಲ್ಲ: ಕತ್ನಳ್ಳಿ

11:15 AM Jan 03, 2022 | Team Udayavani |

ಸೇಡಂ: 12ನೇ ಶತಮಾನದಲ್ಲಿನ ಕೆಲ ಶರಣರು ಕೀಳಾದರೂ ಆತ್ಮೋದ್ಧಾರ ಮಾಡಿಸಿದ್ದರು. ಆದರೆ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ನಡೆಯುತ್ತಿದೆ ಎಂದು ಹಿರಿಯ ಲೇಖಕಿ, ನಿವೃತ್ತ ಪ್ರಾಚಾರ್ಯರಾದ ಡಾ| ನೀಲಮ್ಮ ಕತ್ನಳ್ಳಿ ಹೇಳಿದರು.

Advertisement

ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಚಂದ್ರಶೆಟ್ಟಿ ಬಂಗಾರ ಅವರ ಮನೆಯಲ್ಲಿ ತಾಲೂಕು ಬಸವ ಕೇಂದ್ರ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಅನುಭಾವ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿನ ಜನರ ಬದುಕಿಗೂ ಈಗಿನ ಜೀವನಕ್ಕೂ ಬಹಳ ವ್ಯತ್ಯಾಸವಿದ್ದು, ತದ್ವಿರುದ್ಧ ವಾತಾವರಣ ನಿರ್ಮಾಣವಾಗಿದೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಕಡಿಮೆಯಾಗಿದೆ. ಕೆಲವರ ವರ್ತನೆಯಿಂದ ಮಹಿಳೆಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಶತಮಾನದ ಶಿವಶರಣೆಯರು ತಮ್ಮ ಬದುಕು ಸಾರ್ಥಕವಾಗಿಸಿಕೊಂಡಿದ್ದರು ಎಂದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಹಾಗೂ ಇತರರು ಮಾತನಾಡಿದರು.

ಚಿತ್ರಾ ಚಂದ್ರಶೇಟ್ಟಿ ಬಂಗಾರ ಬಸವ ಜ್ಯೋತಿ ಪ್ರಜ್ವಲಿಸಿದರು. ಮಂಗಲಗಿಯ ಶಾಂತೇಶ್ವರ ಮಠದ ಡಾ| ಶಾಂತಸೋಮನಾಥ ಸ್ವಾಮೀಜಿ, ತೊಟ್ನಳ್ಳಿ ಮಹಾಂತೇಶ್ವರ ಮಠದ ಡಾ| ತ್ರಿಮೂರ್ತಿ ಸ್ವಾಮೀಜಿ, ಪುರಸಭೆ ಆಧ್ಯಕ್ಷೆ ಚನ್ನಮ್ಮ ಪಾಟೀಲ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ತಾಲೂಕು ಅಧ್ಯಕ್ಷ ಚಂದ್ರಶೆಟ್ಟಿ ಬಂಗಾರ, ಬಸವ ಕೇಂದ್ರದ ಅಧ್ಯಕ್ಷ ಮುರಗೆಪ್ಪ ಕೊಳಕೂರ ವೇದಿಕೆಯಲ್ಲಿದ್ದರು. ಉಪನ್ಯಾಸಕ ಜಗದೀಶ ಕಡಬಗಾಂವ ನಿರೂಪಿಸಿದರು. ಶಿವಮೂರ್ತಿ ಕಾಚೂರ ಪ್ರಾರ್ಥಿಸಿದರು.

Advertisement

ಇದೇ ವೇಳೆ ಸಮಾಜ ಸುಧಾರಣೆಗೆ ಸೇವೆ ಸಲ್ಲಿಸಿದ ಮಾತೆ ಕಲಾವತಿ ಅಕ್ಕ, ಡಾ| ಗೀತಾ ಶ್ರೀನಿವಾಸರೆಡ್ಡಿ ಪಾಟೀಲ, ಡಾ| ಶೋಭಾದೇವಿ ಚೆಕ್ಕಿ, ಅಕ್ಕನಾಗಮ್ಮ ಸೋಮಶೇಖರ ಆಡಕಿ, ಆರತಿ ಕಡಗಂಚಿ, ರುಕ್ಮಿಣಿ ಕಾಳಗಿ, ಅಂಜನಾ ಭೋವಿ, ಪುನ್ನಮ್ಮಗೌಡತಿ, ಶಾಂತಾಬಾಯಿ ಮೀನಹಾಬಾಳ, ಚನ್ನಮ್ಮ ಬಸಲಿಂಗಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next