Advertisement
ಬೇಕಾಗುವ ಸಾಮಗ್ರಿಗಳುಬೊಂಬೈ ರವೆ 2 ಕಪ್ ,ಮೊಸರು 1/4 ಕಪ್ ,ಸಕ್ಕರೆ 1 ಚಮಚ ,ಎಣ್ಣೆ 4 ಚಮಚ ,ಕ್ಯಾರೆಟ್ 1 ,ಪಾಲಕ್ 1 ಕಟ್ಟು ,ಬೇಕಿಂಗ್ ಸೋಡಾ (ಅಡುಗೆ ಸೋಡಾ)1/4 ಟೀ . ಚಮಚ ,ರುಚ್ಚಿಗೆ ತಕ್ಕಷ್ಟು .
ಕ್ಯಾರೆಟ್ ಜ್ಯೂಸ್ : ಒಂದು ಕ್ಯಾರೆಟ್ ನ್ನು ತೊಳೆದು ಸಣ್ಣಗೆ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಜ್ಯೂಸ್ ಮಾಡಿ ಇಟ್ಟುಕೊಳ್ಳಿ.
Related Articles
Advertisement
ಮೊದಲಿಗೆ ದೊಡ್ಡ ಮಿಶ್ರಣ ಬೌಲ್ ನಲ್ಲಿ ರವೆ ಮತ್ತು ಮೊಸರಿನ ಜೊತೆಗೆ ನೀರನ್ನು ಬೆರಸದೇ ಚೆನ್ನಾಗಿ ಹದಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ,ಸಕ್ಕರೆ ,2 ಚಮಚ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 15 ನಿಮಿಷಗಳ ಕಾಲ ಹಾಗೇ ಬಿಡಿ . 15 ನಿಮಿಷಗಳ ಬಳಿಕ ಒಂದು ಕಪ್ ನೀರನ್ನು ಹಾಕಿ ಮಿಕ್ಸ್ ಮಾಡಿ 3 ಸಣ್ಣ ಬೌಲ್ ಗೆ ಸಮನಾಗಿ ಪಾಲು ಮಾಡಿಕೊಳ್ಳಿ . ನಂತರ ವಿಂಗಡಿಸಿದ 3 ಬೌಲ್ ನಲ್ಲಿ 1 ಬೌಲ್ ನ್ನು ತೆಗೆದುಕೊಂಡು ಅದಕ್ಕೆ ಮಾಡಿದ ಕ್ಯಾರೆಟ್ ಜ್ಯೂಸ್ ಹಾಕಿ ಬೇಕಿಂಗ್ ಸೋಡಾವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ . ತದನಂತರ ಒಂದು ಕಂಟೇನರ್ ಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಸುತ್ತ ಸವರಿಕೊಳ್ಳಬೇಕು . ನಂತರ ಮಿಕ್ಸ್ ಮಾಡಿದ ಕ್ಯಾರೆಟ್ ಮಿಶ್ರಣ ವನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಸ್ಟೀಮ್ (ಬೇಯಿಸುವುದು)ಮಾಡಿಕೊಳ್ಳಿ.
ಉಳಿದ ಎರಡು ಬೌಲ್ ಗಳಲ್ಲಿ ಒಂದನ್ನು ತೆಗೆದುಕೊಂಡು ಅದಕ್ಕೆ ಬೇಕಿಂಗ್ ಸೋಡಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಯಿಸಿಟ್ಟ ಕ್ಯಾರೆಟ್ ಮಿಶ್ರಣದ ಮೇಲೆಯೇ ಇದನ್ನು ಹಾಕಿ ಪುನಃ ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿರಿ. ನಂತರ ಉಳಿದ ಒಂದು ಪ್ರಮಾಣದ ಬೌಲ್ ನ ಮಿಶ್ರಣಕ್ಕೆ ಪಾಲಕ್ ಜ್ಯೂಸ್ ಅನ್ನು ಹಾಕಿ ಅದಕ್ಕೆ ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿಟ್ಟ ಎರಡು ಮಿಶ್ರಣಗಳ ಮೇಲೆಯೇ ಪಾಲಕ್ ಮಿಶ್ರಣವನ್ನು ಹಾಕಿ ಪುನಃ ಕಡಿಮೆ ಉರಿ ಅಲ್ಲಿ 10 ನಿಮಿಷ ಗಳ ಕಾಲ ಬೇಯಿಸಿರಿ. ನಂತರ ಧೋಕ್ಲಾವನ್ನು ತಣ್ಣಗಾಗಿಸಿದ ನಂತರ ತೆಗೆಯಿರಿ. ಅದಕ್ಕೆ ಎಣ್ಣೆ ಸಾಸಿವೆ, ಕರಿಬೇವು ಮತ್ತು ಹಸಿಮೆಣಸನ್ನು ಹಾಕಿ ಒಗ್ಗರಣೆ ಹಾಕಿ ಅಲಂಕರಿಸಿರಿ .ನಂತರ ಧೋಕ್ಲಾ ವನ್ನು ನಿಮಗೆ ಬೇಕಾಗುವ ಆಕಾರಕ್ಕೆ ಕತ್ತರಿಸಿ. ಇದನ್ನು ಹಸಿರು ಚಟ್ನಿಯೊಂದಿಗೆ ಸವಿಯಲು ರುಚಿಕರ.
*ಶ್ರೀರಾಮ್ ನಾಯಕ್