ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಮಾಡಿದ ತಮ್ಮ ಚೊಚ್ಚಲ ಭಾಷಣದಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲನ್ನು ಹೇಳುವ ಮೂಲಕ ಕನ್ನಡ ಹಿರಿಮೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ಕವನದ ಸಾಲುಗಳನ್ನು ಕನ್ನಡದಲ್ಲೇ ಹೇಳುವುದರ ಜೊತೆಗೆ ಅದರ ಅರ್ಥವನ್ನು ತಿಳಿಸಿದ್ದಾರೆ. ಕನ್ನಡ ಭಾಷೆಯ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ರಾಷ್ಟ್ರವಾದಿ ಕವಿ ಕುವೆಂಪು ಅವರು ಒಂದು ಕವಿತೆಯಲ್ಲಿ ನಾನು ಅಳಿವೇ, ನೀನು ಅಳುವೆ, ನಮ್ಮ ಏಲುಬುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಎಂದು ಹೇಳಿದ್ದಾರೆ.
ಇದು ರಾಷ್ಟ್ರಕವಿ ಕುವೆಂಪು ಅವರು ಸ್ವಾತಂತ್ರ್ಯ ಹೊರಾಟದ ಕುರಿತು ರಚಿಸಿದ ಕವನವಾಗಿದೆ. ದೇಶಕ್ಕಾಗಿ ಕೊಡುಗೆ ನೀಡುವುದು, ದೇಶಕ್ಕಾಗಿ ಜೀವವನ್ನೇ ಮುಡುಪಾಗಿಡುವುದು ನಮ್ಮ ಆದರ್ಶವಾಗಬೇಕೆಂಬುದು ಈ ಕವಿತೆಯ ಅರ್ಥವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |
2047ರ ವೇಳೆಗೆ ದೇಶವನ್ನು ಕಟ್ಟಲು ಯುವಜನರಿಗೆ ಕರೆ ನೀಡಿದ ಅವರು, ಮಾತೃಭೂಮಿಯ ಉನ್ನತಿಗಾಗಿ ತ್ಯಾಗ ಮಾಡುವಂತೆ ಮನವಿ ಮಾಡಿದರು. ಇದೇ ವೇಳೆ ಭಾರತ ನದಿ, ಬೆಟ್ಟ ಗಡ್ಡ, ಬಯಲು, ಕಾಡು, ಕೃಷಿ ಸೇರಿದಂತೆ ಪ್ರಕೃತಿ ಸೌಂದರ್ಯದಿಂದ ಕೂಡಿದ ದೇಶವಾಗಿದೆ. ಈ ಸಂಪತ್‍ಭರಿತ ದೇಶವನ್ನು ಮುಂದಿನ ಪೀಳಿಗೆ ನೀಡುವ ಅತೀ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಹೇಳಿದರು.