Advertisement

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಉಗ್ರರ ಕರಿನೆರಳು

02:04 PM Aug 05, 2021 | Team Udayavani |

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಉಗ್ರರ ಕರಿನೆರಳು ಬಿದ್ದಿದ್ದು, ಐಸಿಸ್‌ ಸಂಘಟನೆಗೆ ಯುವಕರು ‌ ನೇಮಕಾತಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಕೃತ್ಯದಲ್ಲಿ ತೊಡಗಿದ್ದ ಆರೋಪದ ಮೇಲೆ ಕಾಶ್ಮೀರ, ಬೆಂಗಳೂರು, ಮಂಗಳೂರಿನ ಐದು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತು ರಾಜ್ಯದ ಪೊಲೀಸ್‌ ಘಟಕಗಳೊಂದಿಗೆ ಬುಧವಾರ ದಾಳಿ ನಡೆಸಿದ್ದು, ರಾಜ್ಯ ಇಬ್ಬರು ಸೇರಿ ನಾಲ್ವರು ಶಂಕಿತರನ್ನು ಬಂಧಿಸಿದ್ದಾರೆ.

Advertisement

ಬೆಂಗಳೂರಿನ ಹೂಡಿ ನಿವಾಸಿ ಶಂಕರ್‌ ವೆಂಕಟೇಶ್‌ ಪೆರುಮಾಳ್‌, ಮಂಗಳೂರಿನ ಉಳ್ಳಾಲ ‌ಅಮರ್‌ ಅಬ್ದುಲ್‌ ರೆಹಮಾನ್‌, ಕಾಶ್ಮೀರ ‌ ಮುಜಾಮಿಲ್‌ ಹಸನ್‌ ಭಟ್‌, ಶ್ರೀನಗರ ಒಬಿದ್‌ ಹಮ್ಮದ್‌ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಲ್ಯಾಪ್‌ಟಾಪ್‌, ಮೊಬೈಲ್‌, ಹಾರ್ಡ್‌
ಡಿಸ್ಕ್, ಪೆನ್‌ಡ್ರೈವ್‌, ವಿವಿಧ ಕಂಪೆನಿಯ ಸಿಮ್‌ ಕಾರ್ಡ್‌ಗಳು ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಜಿಹಾದಿ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಆರೋಪಿಗಳು ಐಸಿಸ್‌ ಸಂಘಟನೆ ಮುಖಂಡ ಕೇರಳ ಮೂಲದ ಮೊಹಮ್ಮದ್‌ ಅಮಿನ್‌ ಅಲಿಯಾಸ್‌ ಅಬು ಯಹಾಯ್‌ ಮತ್ತು ಆತನ ಸಹಚರರ ಜತೆ ನಿರಂತರ ‌ ಸಂಪರ್ಕದಲ್ಲಿದ್ದರು. ಅಲ್ಲದೆ,ಅವರ ಆನ್‌ಲೈನ್‌ ಚಾನೆಲ್‌ಗ‌ಳು ಮತ್ತು ವಿವಿಧ ಗ್ರೂಪ್‌ ಗಳಲ್ಲಿ ನಿರಂತರ ಚಾಟ್‌ ಮಾಡುತ್ತಿದ್ದರು. ಈ ಮೂಲಕ ‌ ರಾಜ್ಯದಲ್ಲಿ ಐಸಿಸ್‌ ಸಂಘಟನೆಗೆ ಹಣ ಸಂಗ್ರಹಿಸುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.

ಕಳೆದ ಮಾರ್ಚ್‌ನಲ್ಲಿ ಮೊಹಮ್ಮದ್‌ ಅಮಿನ್‌ ಮತ್ತು ಡಾ.ರಹಿಸ್‌ ರಶೀದ್‌ ಮತ್ತು ಮುಸ್‌ ಹಬ್‌ ಅನ್ವರ್‌ ಮನೆಗೆ ‌ ಮೇಲೆ ದಾಳಿ ನಡೆಸಿ ಬಂಧಿಸಿತ್ತು.
ಅವರ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪೈಕಿ ಮೊಹಮ್ಮದ್‌ ಅಮಿನ್‌ 2020ರಲ್ಲಿ ಕಾಶ್ಮೀರಕ್ಕೆ ಧಾರ್ಮಿಕ ಕಾರ್ಯಕ್ರಮ(ವಲಸೆ)(ಹಿಜ್ರಾ) ಹಾಗೂ ಭಯೋತ್ಪಾದನ ಕೃತ್ಯಗಳ ನೇತೃತ್ವ ವಹಿಸಲು ಬಂದಿದ್ದ. ಅಲ್ಲದೆ, ಕಾಶ್ಮೀರ ಮೂಲ ಮೊಹಮ್ಮದ್‌ ವಕಾರ್‌ ಲೋನ್‌ ಅಲಿಯಾಸ್‌ ವಿಲ್ಸನ್‌ ಕಾಶ್ಮೀರಿ ಮತ್ತು ಅವರ ಸಹಚರರ ಜತೆ ಸೇರಿಕೊಂಡು ಸಂಘಟನೆಗಾಗಿ ಹಣ ಸಂಗ್ರಹಿಸಿದ್ದರು. ಬಳಿಕ ಅದನ್ನು ಮೊಹಮ್ಮದ್‌ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ಮೊಹಮ್ಮದ್‌ ನಿರ್ದೇಶನದ ಮೇರೆಗೆ ಆನ್‌ಲೈನ್‌ ಬ್ಯಾಂಕಿಂಗ್‌ ಮತ್ತು ಡಿಜಿಟಲ್‌ ಪಾವತಿ ವಿಧಾನಗಳ ಮೂಲಕ ಪ್ರಕರಣ¨ ‌ಆರೋಪಿಗಳಿಂದ ವಕಾರ್‌ ಲೋನ್‌, ಮೊಹಮ್ಮದ್‌ ಅಮೀನ್‌ ಮತ್ತು ಆತನ ಸಹಚರರು ಜಿಹಾದ್‌ ಮತ್ತು ವಿಧ್ವಂಸಕ ಚ ‌ಟುವಟಿಕೆಗಳಿಗೆ ಮುಸ್ಲಿಂ ಯುವಕರನ್ನು ಸಂಘಟನೆಗೆ ನೇಮಕ ಮಾಡುತ್ತಿದ್ದರು.

ಅಲ್ಲದೆ, ಕಾಶ್ಮೀರ ಮತ್ತು ಕೇರಳ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಜಾಲವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು ಎಂದು
ಎನ್‌ಐಎ ತಿಳಿಸಿದೆ.

Advertisement

ಇದನ್ನೂ ಓದಿ:ಕಿಚ್ಚನ ಜೊತೆ ಕಿರಂಗದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

ಡಿಜಿಟಲ್‌ ಫ್ಲಾಟ್‌ಫಾರ್ಮ್ ಬಳಕೆ
ಮುಖ್ಯವಾಗಿ ಮೊಹಮ್ಮದ್‌ ಅಮಿನ್‌ ಹಾಗೂ ಈತನ ಸಹಚರರ ಸೇರಿಕೊಂಡು ಜಿಹಾದಿ ಕೃತ್ಯ ಎಸಗಲು, ಐಸಿಸ್‌ ಸಂಘಟನೆ ಬಲಪಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದರು. ಟೆಲಿಗ್ರಾಂ, ಒಪ್‌ ಮತ್ತು ಇನ್‌ಸ್ಟ್ರಾಗ್ರಾಂ ಇತರೆ ತಾಣಗಳ ಮೂಲಕ ಜಿಹಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಈ ಮೂಲಕ ಯುವಕರನ್ನು ಸೆಳೆದು ಸಂಘಟಿಸುತ್ತಿದ್ದರು. ಮೊಹಮ್ಮದ್‌ ಅಮಿನ್‌ ಪ್ರೇರಣೆಯಿಂದ ಶಂಕರ್‌
ವೆಂಕಟೇಶ್‌ ಪೆರುಮಾಳ್‌ ಮತ್ತು ಮುಜಾಮಿಲ್‌ ಹಸನ್‌ ಭಟ್‌ ಐಸಿಸ್‌ ಸಂಘಟನೆ ಮತ್ತು ಮೊಹಮ್ಮದ್‌ ಅಮೀನ್‌ ಮತ್ತು ಆತನ ಸಹಚರರ ಸಿದ್ಧಪಡಿಸಿದ್ದ ಸಾಮಾಜಿಕ ಜಾಲತಾಣಗಳಿಗೆ ಚಂದದಾರರಾಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next