ಬೈಂದೂರು: ತಾಲೂಕು ಆಡಳಿತ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ನಡೆಸಲಾಯಿತು.
ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಧ್ವಜಾ ರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯದ ಹಿಂದೆ ಸಾವಿರಾರು ಜನರ ತ್ಯಾಗ, ಬಲಿದಾನ ಇದೆ. ಪರಸ್ಪರ ಪ್ರೀತಿ, ವಿಶ್ವಾಸ, ಅನುಕಂಪ, ಸಹಕಾರ, ಸಹಾನುಭೂತಿಯಿಂದ ಮುನ್ನಡೆಬೇಕಿದೆ. ನಮ್ಮ ಚಿಂತನೆ ವಿಶಾಲವಾಗಿರಲಿ, ಕ್ರಿಯೆಗಳು ಸ್ಥಳೀಯವಾಗಿರಲಿ. ನೆಲದ ಕಾನೂನಿಗೆ ಗೌರವ ಕೊಟ್ಟು ಪರಸ್ಪರ ಸಾಮರಸ್ಯದ ಬದುಕು ನಮ್ಮದಾಗಿಸೋಣ ಎಂದರು.
ಈ ಸಂದರ್ಭದಲ್ಲಿ ಆರಕ್ಷಕ ಇಲಾಖೆ ಮತ್ತು ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಪಥ ಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಮಾನ್ಯಾ, ಅಕ್ಷತಾ, ಸುಧೀನ್, ಸುಮನ್, ಶ್ರೀಕೃತಿ ಶೆಟ್ಟಿ, ಸಂಜನಾ, ಅಕ್ಷಯ ಗಾಣಿಗ ಹಾಗೂ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಚೇತನಕುಮಾರ್ ಅವರನ್ನು ಗೌರವಿಸಲಾಯಿತು.
ಇದನ್ನೂ ಓದಿ:ಸಿದ್ದರಾಮಯ್ಯಗೆ ಮಧ್ಯಂತರ ಚುನಾವಣೆಯ ಕನಸಿದೆ : ಸಚಿವ ಶಿವರಾಮ ಹೆಬ್ಬಾರ
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ನವೀನ್, ದೈಹಿಕ ಶಿಕ್ಷಣ ಶಿಕ್ಷಕ ಸಂಯೋಜಕ ಬಾಬು ಪೂಜಾರಿ, ಪ್ರಭಾಕರ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಕರುಣಾಕರ ಶೆಟ್ಟಿ ನಿರೂ ಪಿಸಿದರು. ಪಟ್ಟಣ ಪಂ. ಮುಖ್ಯಾಧಿಕಾರಿ ನವೀನ್ ವಂದಿಸಿದರು.