Advertisement
ಗಾಂಧಿ ಪುತ್ಥಳಿಗೆ ಮಾಲಾರ್ಪಣೆ: ಮೈಸೂರಿನ ನಗರ ಮತ್ತು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ(ಸುಬ್ಬರಾಯನ ಕೆರೆ)ದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಗಾಂಧೀಜಿ ಪುತ್ಥಳಿಗೆ ಮಾರ್ಲಾಪಣೆ ಮಾಡಿದರು. ನಂತರ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಸಭೆ ನಡೆಸಿ ತಮ್ಮ ಹೋರಾಟದ ನೆನಪುಗಳನ್ನು ಸ್ಮರಿಸಿದರು.
Related Articles
Advertisement
ಗಂಗೋತ್ರಿ ಶಾಲೆ, ಪಿಯು ಕಾಲೇಜು: ನಗರದ ಭೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಪಿ. ವೆಂಕಟರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಪಾಲಿಕೆ ಸದಸ್ಯೆ ವೇದಾವತಿ, ಕಾಲೇಜಿನ ಪ್ರಾಂಶುಪಾಲ ಸುನೀಲ್ ಕುಮಾರ್, ಮುಖ್ಯಶಿಕ್ಷಕಿ ಝರೀನಾ ಇದ್ದರು.
ತ್ರಿವೇಣಿ ವೃತ್ತ: ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ನಗರದ ತ್ರಿವೇಣಿ ವೃತ್ತದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬಿಜೆಪಿ ಮುಖಂಡ ಸಂದೆಶ ಸ್ವಾಮಿ, ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್ ಸ್ವಾಮಿ, ಬಿ. ಆನಂದ್, ನಾಗೇಶ್ ಮತ್ತಿತರರು ಧ್ವಜಾರೋಹಣ ಮಾಡಿದರು. ಈ ಸಂದರ್ಭ ನಿವೃತ್ತ ಸೈನಿಕರಾದ ರವಿಂದ್ರಕುಮಾರ್ ಜಟ್ಟಿ, ಕಿರಣ್, ಶಿವು, ಧನರಾಜ್ ಇದ್ದರು.
ಎನ್‌ಆರ್ ಫೌಂಡೇಷನ್‌ನ ರಂಗರಾವ್ ಸ್ಮಾರಕ ವಿಕಲಚೇತನರ (ಆರ್‌ಎಂಎಸ್‌ಡಿ) ಶಾಲೆಯ ಆವರಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ದೃಷ್ಟಿ ವಿಶೇಷಚೇತನ ವಿದ್ಯಾರ್ಥಿನಿಯರು ಪೆರೇಡ್ ನಡೆಸಿ, ತ್ರಿವರ್ಣ ಧ್ವಜ ಹಿಡಿದು ನೃತ್ಯ ಪ್ರದರ್ಶಿಸಿದರು. ಬಕಾರ್ಡಿ ಇಂಡಿಯಾ ಸಂಸ್ಥೆಯ ಸುಶೀಲ್ ಕುಂದರ್, ಸಂಸ್ಥೆಯ ಆರ್.ಗುರು, ನರ ವಿಜ್ಞಾನಿ ಡಾ.ರತ್ನವಳ್ಳಿು ಧ್ವಜಾರೋಹಣ ನೆರವೇರಿಸಿದರು.
73 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಡಿಕೆ ಕನ್‌ಸ್ಟ್ರಕ್ಷನ್ ಸಂಸ್ಥೆಯಿಂದ ಬೆಳಗ್ಗೆ ಧ್ವಜಾರೋಹಣ ಹಾಗೂ ನ್ಯೂ ಕಾಂತರಾಜ ಅರಸ್ ರಸ್ತೆಯ ಸ್ವತ್ಛತಾ ಕಾರ್ಯಕ್ರಮ ನಡೆಸಲಾಯಿತು. ಸ್ವರೂಪ, ಆನಂದ್, ಗೋಪಾಲ್ ರಾಜೇ ಅರಸ್, ಪಾಲಿಕೆ ಸದದ್ಯರಾದ ಸೌಮ್ಯಾ ಉಮೇಶ್ ಕುಮಾರ್ ಲೋಕೇಶ್, ಇತಿಹಾಸ ತಜ್ಞ ಡಾ.ಎನ್.ಎಸ್.ರಂಗನಾಥ, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ದಶರಥ ಇತರರಿದ್ದರು.
ಕೆಎಸ್‌ಒಯುನಲ್ಲಿ ಆಚರಣೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿವೃತ್ತ ಬ್ರಿಗೇಡಿಯರ್ ವಿನೋದ್ ಕುಮಾರ್ ಅಡಪ್ಪ ಅವರು ಧ್ವಜಾರೋಹಣ ಮಾಡಿದರು. ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿದರು.ಶ್ರೀ ನಟರಾಜ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕರ್ನಲ್ ಶ್ರೀಕರಪ್ರಭು ಧ್ವಜಾರೋಹಣ ನೆರವೇರಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಹಾಜನ ಎಜುಕೇಷನ್ ಸೊಸೈಟಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಧ್ವಜಾರೋಹಣ ನೆರವೇರಿಸಿದರು.
ಮೈಸೂರು ವಿವಿ: ಮೈಸೂರು ವಿಶ್ವವಿದ್ಯಾಲಯದಿಂದ ಕ್ರಾಫರ್ಡ್ ಭವನದ ಎದುರ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕುಲಸಚಿವ ಪ್ರೊ.ಲಿಂಗರಾಜ, ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್, ವಿದ್ಯಾರ್ಥಿ ಕ್ಷೇಮಪಾಲನ ನಿಧಿ ನಿರ್ದೇಶಕ ಸೇರಿದಂತೆ ಮತ್ತಿತರಿದ್ದರು.
ಶಾರದಾ ಸಂಸ್ಥೆ: ಶಾರದಾ ವಿಲಾಸ ವಿದ್ಯಾಸಂಸ್ಥೆಗಳಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಧ್ವಜಾರೋಹಣ ನೆರವೇರಿಸಿದರು. ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಹಟ್ಟಿ ಚಿನ್ನದ ಗಣಿಯ ನಿವೃತ ಕಾರ್ಯನಿರ್ವಾಹಕ ನಿರ್ದೇಶಕ ವೈ.ವೆಂಕಟೇಶ್ ಧ್ವಜಾರೋಹಣ ಮಾಡಿದರು.
ಹಾಡ್ವಿìಕ್ ಶಿಕ್ಷಣ ಸಂಸ್ಥೆ, ತರಳಬಾಳು ವಿದ್ಯಾಸಂಸ್ಥೆ, ಮರಿಮಲ್ಲಪ್ಪನವರ ಪ್ರೌಢಶಾಲೆ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಲಯನ್ ಕ್ಲಬ್ ಜೆ.ಪಿ. ನಗರ, ಜೆಎಸ್‌ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಜೆಎಸ್‌ಎಸ್ ಪದವಿ ಪೂರ್ವ ಕಾಲೇಜು, ಗೋಪಾಲಸ್ವಾಮಿ ಶಿಶು ವಿಹಾರ ಸಂಸ್ಥೆಗಳು, ಶಕ್ತಿ ನಗರ ನಿವಾಸಿಗಳ ಹಿತರಕ್ಷಣಾ ಸಮಿತಿ, ಆರ್ಯ ಈಡಿಗರ ವಿದ್ಯಾರ್ಥಿ ನಿಲಯ, ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಎಂಜಿನಿಯರ್‌ಗಳ ಸಂಸ್ಥೆ, ಮೈಸೂರು ನಗರ ಪಾತ್ರೆ ವ್ಯಾಪಾರಿಗಳ ಸಂಘ, ಉದಯ ಗಿರಿ ಕನ್ನಡ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಸ್ವಾತಂತ್ರ್ಯ ದಿನದ ಪ್ರಯುಕ್ತ ರೋಟರಿ ಹರಿಟೇಜ್, ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಅವರು ಸೈನಿಕರಿಗೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ಮೂದ್ರವಳ್ಳಿ ಬೈರಾಚಾರ್ಯ ದೇವಮ್ಮ ಸ್ಮಾರಕ ಸ್ವಾತಂತ್ರ್ಯ ದಿನಾಚರಣೆ ಕವಿ ಗೋಷ್ಠಿ ನಡೆಯಿತು.
ಗಾಂಧಿ ವೃತ್ತದಲ್ಲಿ ರಾರಾಜಿಸಿದ ಧ್ವಜ: ಗಾಂಧಿ ವೃತ್ತದ ಫುಟ್ ಪಾತ್ ವ್ಯಾಪಾರಿಗಳು ಸ್ವಾತಂತ್ರ್ಯ ದಿನ ಅಂಗವಾಗಿ ಗಾಂಧಿ ವೃತ್ತದ ಸುತ್ತಲೂ ತ್ರಿವರ್ಣ ಧ್ವಜ ಹೊದಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. 150 ಅಡಿ ಉದ್ದದ ತ್ರಿವರ್ಣ ಧ್ವಜ ದೊಡ್ಡ ಗಡಿಯಾರದಿಂದ ಹೊದಿಸಿದ್ದು, ಗಾಂಧಿ ವೃತ್ತದ ಬಳಿ ಪ್ರತ್ಯೇಕವಾಗಿ 120 ಅಡಿಯ ತ್ರಿವರ್ಣ ಧ್ವಜ ಹೊದಿಸಿ ಸಂಭ್ರಮಾಚರಣೆ ಮಾಡಿದರು. ಗಾಂಧಿ ವೃತ್ತದ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವ ಎಲ್ಲಾ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಯನ್ನು ತೆರೆಯದೆ ಒಟ್ಟಾಗಿ ಸೇರಿ 73ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡಿದ್ದು ವಿಶೇಷವಾಗಿತ್ತು.