ಹೊಸದಿಲ್ಲಿ: ದೇಶದಲ್ಲೆಡೆ ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಕೋವಿಡ್-19 ಎಚ್ಚರಿಕೆಯ ನಡುವೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಕೆಂಪುಕೋಟೆಯಲ್ಲಿ ನಡೆಯುವ ಸ್ವಾಂತಂತ್ರ್ಯ ಸಂಭ್ರಮದ ಕ್ಷಣಕ್ಷಣದ ಸುದ್ದಿಗಳು ಇಲ್ಲಿದೆ.
ಭಾರತ ವಸ್ತುಗಳನ್ನು ಉತ್ಪಾದಿಸುವಂತಾಗಬೇಕು. ಆತ್ಮನಿರ್ಭರ ಭಾರತದ ಕನಸಾಗಿದೆ. ಕೋವಿಡ್ ನಂತಹ ಸಂಕಷ್ಟ ಕಾಲದಲ್ಲಿ ಭಾರತ ಸ್ವಾವಲಂಬಿಯಾಗಬೇಕು. ಕೋವಿಡ್ ಜತೆಗೆ ಪ್ರವಾಹ, ಸಿಡಿಲು, ಪ್ರಕೃತಿ ವಿಕೋಪಕ್ಕೂ ಜನರು ಬಲಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ಭಾರತದ ಆತ್ಮವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಕೇವಲ ಮೇಕ್ ಇನ್ ಇಂಡಿಯಾ ಅಲ್ಲ, ಮೇಡ್ ಫಾರ್ ವರ್ಲ್ಡ್ ಎಂಬಂತೆ ಭಾರತ ಬೆಳೆಯಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರೀಯ ಮೂಲ ಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಲಿದೆ. ಭೂ, ರೈಲು, ಒಳನಾಡು, ಸಮುದ್ರ, ಸಾರಿಗೆಯನ್ನು ಜೋಡಿಸಬೇಕಿದೆ. ನಾವು ಏಳು ಸಾವಿರ ಯೋಜನೆಗಳನ್ನು ಪರಿಚಯಿಸಿದ್ದೇವೆ. 110 ಲಕ್ಷ ಕೋಟಿ ಮೂಲ ಸೌಕರ್ಯ ವೃದ್ದಿಗೆ ಮೀಸಲಿಡಲಾಗಿದೆ. ವಿಶ್ವದ ದೊಡ್ಡ, ದೊಡ್ಡ ಕಂಪನಿಗಳು ಭಾರತದತ್ತ ಮುಖಮಾಡಿವೆ ಎಂದು 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.