Advertisement
ಕೆಲವರು ನಕಾರಾತ್ಮಕ ಯೋಚನೆಗಳನ್ನೇ ಹೊಂದಿದ್ದು ಅವರು ದೇಶದ ಏಳಿಗೆ ಸಹಿಸುತ್ತಿಲ್ಲ. ಭಾರತವನ್ನು ಅರಾಜಕತೆ ಹಾಗೂ ವಿನಾಶದೆಡೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿರುವವರಿಗೆ ದೇಶವನ್ನು ರಕ್ಷಿಸಬೇಕು ಎಂದಿದ್ದಾರೆ. ನಾವು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೆಲವರು ಯಾವುದೇ ಲಾಭವಿಲ್ಲದಿದ್ದರೆ ದೇಶದ ಪ್ರಗತಿ ಬಗ್ಗೆ, ಒಳಿತಿನ ಬಗ್ಗೆ ಚಿಂತಿಸುವುದಿಲ್ಲ. ಇಂತಹ ನಿರಾಶಾವಾದಿಗಳಿಂದ ನಾವು ಜಾಗೃತ ರಾಗಿರಬೇಕು.
ಹೊಸದಿಲ್ಲಿ: ಉತ್ತಮ ಜನಪ್ರತಿನಿಧಿಗಳನ್ನು ರೂಪಿಸುವ ನಿಟ್ಟಿನಲ್ಲಿ ರಾಜಕೀಯ ಹಿನ್ನೆಲೆ ಇಲ್ಲದೇ ಇರುವ 1 ಲಕ್ಷ ಯುವಕರು ರಾಜಕೀಯ ಪ್ರವೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಜಾತಿ ಆಧಾರಿತ ಮತ್ತು ಕುಟುಂಬ ರಾಜಕಾರಣವನ್ನು ದೇಶದ ರಾಜಕೀಯ ವ್ಯವಸ್ಥೆಯಿಂದ ಕಿತ್ತು ಹಾಕಲು ಸಾಧ್ಯವಾಗಲಿದೆ ಎಂದರು.
Related Articles
Advertisement
98 ನಿಮಿಷ ಪ್ರಧಾನಿ ದೀರ್ಘ ಭಾಷಣ: ತಮ್ಮದೇ ದಾಖಲೆ ಮುರಿದ ಮೋದಿಇದು ದೇಶದ ಪ್ರಧಾನಿ ಮಾಡಿದ ಇದುವರೆಗಿನ ಸುದೀರ್ಘ ಭಾಷಣವೂ ಹೌದು
ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ 98 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಬೆಳಗ್ಗೆ 7.33ರಿಂದ ಬೆಳಗ್ಗೆ 9.12ರ ವರೆಗೆ ಅವರು ಮಾತನಾಡಿದ್ದಾರೆ. ದೇಶದ ಸ್ವಾತಂತ್ರೊéàತ್ಸವದಲ್ಲಿ ದೇಶದ ಪ್ರಧಾನಿಯೊಬ್ಬರು ಮಾಡಿದ ದೀರ್ಘ ಭಾಷಣ ಎಂಬ ಖ್ಯಾತಿಗೂ ಅದು ಪಾತ್ರವಾಗಿದೆ. 2016ರಲ್ಲಿ ಮೋದಿ 96 ನಿಮಿಷಗಳ ಭಾಷಣ ಮಾಡಿದ್ದರು. ಅದೇ ಅತೀ ದೀರ್ಘಾವಧಿಯ ಭಾಷಣವಾಗಿತ್ತು. ಇದೀಗ ಆ ದಾಖಲೆಯನ್ನೂ ಪ್ರಧಾನಿ ಮೀರಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು, ಈ ವೇಳೆ 65 ನಿಮಿಷ ಭಾಷಣ ಮಾಡಿದ್ದರು. 1947ರಲ್ಲಿ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ 72 ನಿಮಿಷ, 1997ರಲ್ಲಿ ಐ.ಕೆ. ಗುಜ್ರಾಲ್ 71 ನಿಮಿಷ, 1954ರಲ್ಲಿ ನೆಹರೂ ಮತ್ತು 1966ರಲ್ಲಿ ಇಂದಿರಾ ಗಾಂಧಿಯವರು ತಲಾ 14 ನಿಮಿಷ ಮಾತನಾಡಿದ್ದರು.