Advertisement

ಪಾಂಚಾಲ್‌ ದ್ವಿಶತಕ; ಭಾರತ “ಎ’ಮೇಲುಗೈ

12:30 AM Feb 10, 2019 | |

ವಯನಾಡ್‌: ಪ್ರಿಯಾಂಕ್‌ ಪಾಂಚಾಲ್‌ ಅವರ ಅಮೋಘ ದ್ವಿಶತಕ ಹಾಗೂ ಕೀಪರ್‌ ಶ್ರೀಕರ್‌ ಭರತ್‌ ಬಾರಿಸಿದ 142 ರನ್‌ ಸಾಹಸದಿಂದ ಪ್ರವಾಸಿ ಇಂಗ್ಲೆಂಡ್‌ ಲಯನ್ಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ “ಎ’ ಬೃಹತ್‌ ಮೊತ್ತ ಪೇರಿಸಿದೆ. 

Advertisement

ಪ್ರವಾಸಿ ತಂಡದ 340ಕ್ಕೆ ಉತ್ತರವಾಗಿ 3ನೇ ದಿನವಾದ ಶನಿವಾರ 6 ವಿಕೆಟಿಗೆ 540 ರನ್‌ ಗಳಿಸಿ ಡಿಕ್ಲೇರ್‌ ಮಾಡಿದೆ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ಲಯನ್ಸ್‌ ವಿಕೆಟ್‌ ನಷ್ಟವಿಲ್ಲದೆ 20 ರನ್‌ ಗಳಿಸಿದೆ. ರವಿವಾರ ಪಂದ್ಯದ ಅಂತಿಮ ದಿನವಾಗಿದ್ದು, ಕ್ಷಿಪ್ರಗತಿಯಲ್ಲಿ ವಿಕೆಟ್‌ ಉರುಳಿಸಿದರೆ ಆತಿಥೇಯ ತಂಡ ಗೆಲುವು ಸಾಧಿಸಬಹುದು.

ಒಂದಕ್ಕೆ 219 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಭಾರತ “ಎ’ ತಂಡ ಆರಂಭಕಾರ ಕೆ.ಎಲ್‌. ರಾಹುಲ್‌ ಅವರನ್ನು ಬೇಗನೇ ಕಳೆದುಕೊಂಡಿತು. ಹಿಂದಿನ ದಿನದ ಮೊತ್ತಕ್ಕೆ ಒಂದೇ ರನ್‌ ಸೇರಿಸಿದ ಅವರು 89 ರನ್ನಿಗೆ ಔಟಾದರು (192 ಎಸೆತ, 11 ಬೌಂಡರಿ). ಈ ವಿಕೆಟ್‌ ಡ್ಯಾನಿ ಬ್ರಿಗ್ಸ್‌ ಪಾಲಾಯಿತು. ಅದೇ ಓವರಿನಲ್ಲಿ ಅವರು ನಾಯಕ ಅಂಕಿತ್‌ ಬವೆ°ಗೂ (0) ಪೆವಿಲಿಯನ್‌ ಹಾದಿ ತೋರಿಸಿದರು. ರಿಕಿ ಭುಯಿ (16) ಕೂಡ ಬೇಗನೇ ಔಟಾದರು.

196 ರನ್‌ ಜತೆಯಾಟ
ಆದರೆ 88 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದ ಪ್ರಿಯಾಂಕ್‌ ಪಾಂಚಾಲ್‌ 206ರ ತನಕ ಬೆಳೆ ದರು. ಇವರಿಗೆ ಶ್ರೀಕರ್‌ ಭರತ್‌ ಉತ್ತಮ ಬೆಂಬಲ ವಿತ್ತರು. 5ನೇ ವಿಕೆಟಿಗೆ 196 ರನ್‌ ಹರಿದು ಬಂತು.
ಪ್ರವಾಸಿಗರ ಮೇಲೆ ಸವಾರಿ ಮಾಡಿದ ಗುಜರಾತ್‌ ಆರಂಭಕಾರ ಪಾಂಚಾಲ್‌ 313 ಎಸೆತಗಳನ್ನು ನಿಭಾಯಿಸಿ ಸ್ಮರಣೀಯ ಇನ್ನಿಂಗ್ಸ್‌ ಒಂದನ್ನು ಕಟ್ಟಿದರು. ಇದರಲ್ಲಿ 26 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಸ್ಫೋಟಕ ಆಟವಾಡಿದ ಭರತ್‌ ಕೇವಲ 139 ಎಸೆತಗಳಲ್ಲಿ 8 ಸಿಕ್ಸರ್‌, 11 ಬೌಂಡರಿ ನೆರವಿನಿಂದ 142 ರನ್‌ ಬಾರಿಸಿದರು.

ಇಂಗ್ಲೆಂಡ್‌ ಲಯನ್ಸ್‌-
340; ಭಾರತ “ಎ’-540/6 ಡಿಕ್ಲೇರ್‌
 ಪಾಂಚಾಲ್‌ 206, ಭರತ್‌ 142, ಕೆ.ಎಲ್‌. ರಾಹುಲ್‌ 89

Advertisement
Advertisement

Udayavani is now on Telegram. Click here to join our channel and stay updated with the latest news.

Next