Advertisement

IND-W vs SA-W: ಇಂದಿನಿಂದ ಭಾರತ-ದ.ಆಫ್ರಿಕಾ ಮಹಿಳಾ ಟೆಸ್ಟ್‌ ಆರಂಭ

09:42 PM Jun 27, 2024 | Team Udayavani |

ಚೆನ್ನೈ: ಭಾರತಕ್ಕೆ ಪ್ರವಾಸ ಬಂದಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ, ಆತಿಥೇಯರ ವಿರುದ್ಧ ಶುಕ್ರವಾರದಿಂದ ಏಕಮಾತ್ರ ಟೆಸ್ಟ್‌ ಪಂದ್ಯವನ್ನಾಡಲಿದೆ.

Advertisement

5 ದಿನಗಳ ಈ ಟೆಸ್ಟ್‌ ಪಂದ್ಯ ಚೆನ್ನೈನ ಎಂ.ಎ.ಚಿದಂಬರಂ ಮೈದಾನದಲ್ಲಿ ನಡೆಯಲಿದ್ದು, ಜು.2ಕ್ಕೆ ಮುಕ್ತಾಯಗೊಳ್ಳಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು 10 ವರ್ಷಗಳಿಗೆ ಹಿಂದೆ ಅಂದರೆ 2014ರಲ್ಲಿ ಕೊನೇ ಬಾರಿಗೆ 5 ದಿನಗಳ ಟೆಸ್ಟ್‌ ಪಂದ್ಯದಲ್ಲಿ ಪಾಲ್ಗೊಂಡಿದ್ದವು. ಆ ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಗೆದ್ದಿತ್ತು. ಇದೇ ಪ್ರವಾಸ ಭಾಗವಾಗಿ ನಡೆದಿದ್ದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ 3-0ಯಿಂದ ಕ್ಲೀನ್‌ಸ್ವೀಪ್ ಸಾಧನೆ ಮಾಡಿದೆ. 1 ಟೆಸ್ಟ್‌ ಪಂದ್ಯದ ಬಳಿಕ ಚೆನ್ನೈಯಲ್ಲೇ ಇತ್ತಂಡಗಳು 3 ಪಂದ್ಯಗಳ ಟಿ20 ಸರಣಿಯನ್ನಾಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next