Advertisement
ಮೊದಲ ಪಂದ್ಯದಲ್ಲಿ ಅಚ್ಚರಿಯ ಸೋಲು ಕಂಡದ್ದರಿಂದ ಶುಭಮನ್ ಗಿಲ್ ನೇತೃತ್ವದ ಬಳಗ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಕಳೆದುಕೊಂಡಿತು. ಆ ಬಳಿಕ ಭಾರತ ತಂಡ ಸತತ ಗೆಲುವು ಸಾಧಿಸಿ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿದೆ. ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟಾಸ್ ಸೋತ ಜಿಂಬಾಬ್ವೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ 18.3 ಓವರ್ಗಳಲ್ಲಿ 125 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 12 ರನ್ಗಳಿಗೆ ಯಶಸ್ವಿ ಜೈಸ್ವಾಲ್ ಔಟಾಗುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಜತೆಗೆ ಶುಭ್ಮನ್ ಗಿಲ್ ಕೂಡ 13 ರನ್ಗೆ ಸೀಮಿತಗೊಂಡರು. ನಂತರದಲ್ಲಿ ಅಭಿಷೇಕ್ ಶರ್ಮಾ 14 ರನ್ಗೆ ಔಟಾಗುವ ಮೂಲಕ 40 ರನ್ಗಳಿಗೆ 3 ವಿಕೆಟ್ ನಷ್ಟ ಮಾಡಿಕೊಂಡಿತು. ಆದರೆ ಆ ಬಳಿಕ ಆಡಲು ಬಂದ ಸಂಜು ಸ್ಯಾಮ್ಸನ್ (58) ಹಾಗೂ ರಿಯಾನ್ ಪರಾಗ್ (22) ತಂಡವನ್ನು ಆರಂಭಿಕ ಆಘಾತದಿಂದ ಕಾಪಾಡಿದರು. ಇವರಿಬ್ಬರೂ ಸೇರಿ ತಂಡದ ಮೊತ್ತವನ್ನು 105 ರನ್ಗಳಿಗೆ ಕೊಂಡೊಯ್ದರು. ಬಳಿಕ ಶಿವಂ ದುಬೆ 12 ಎಸೆತಕ್ಕೆ 26 ರನ್ ಬಾರಿಸಿ ಮಿಂಚಿದರು. ಅವರು ಅಮೋಘ ಎರಡು ಸಿಕ್ಸರ್ ಹಾಗೂ ಅಷ್ಟೇ ಬೌಂಡರಿ ಬಾರಿಸಿದರು. ಸಂಕಷ್ಟದಲ್ಲಿದ್ದ ವೇಳೆ ಬ್ಯಾಟ್ ಮಾಡಲು ಬಂದ ಸಂಜು ಸ್ಯಾಮ್ಸನ್ ನಿಧಾನವಾಗಿ ಇನಿಂಗ್ಸ್ ಕಟ್ಟಿದರು. 39 ಎಸೆತಕ್ಕೆ ಅರ್ಧ ಶತಕ ಬಾರಿಸಿದ ಅವರು 45ಎಸೆತಕ್ಕೆ 58 ರನ್ ಬಾರಿಸಿ ಔಟಾದರು. ಅವರ ಇನಿಂಗ್ಸ್ನಲ್ಲಿ 4 ಸಿಕ್ಸರ್ ಹಾಗೂ ಒಂದು ಫೋರ್ ಸೇರಿದ್ದವು. ರಿಂಕು ಸಿಂಗ್ 9 ಎಸೆತಕ್ಕೆ 11 ರನ್ ಬಾರಿಸಿದ್ದಾರೆ.
Related Articles
Advertisement
ಬೌಲರ್ಗಳ ಅಬ್ಬರಭಾರತ ನೀಡಿದ ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಜಿಂಬಾಬ್ವೆ 15 ರನ್ಗೆ 2 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಬಿತ್ತು. ಬಳಿಕ ಡಿಯೋನ್ ಮೈರ್ಸ್ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಬಾರಿಸಿದ್ದು ಹೊರತುಪಡಿಸಿದರೆ ಜಿಂಬಾಬ್ವೆ ತಂಡದಿಂದ ಹೆಚ್ಚು ಪ್ರತಿರೋಧ ಬರಲಿಲ್ಲ. ಇನ್ನೂ 9 ಎಸೆತಗಳು ಇರುವಂತೆಯೇ ಆಲ್ಔಟ್ ಆಯಿತು. ಭಾರತ ಪರ ಬೌಲಿಂಗ್ನಲ್ಲಿ ಮುಕೇಶ್ ಕುಮಾರ್ 22 ರನ್ಗಳಿಎ 4 ವಿಕೆಟ್ ಉರುಳಿಸಿದರೆ ಶಿವಂ ದುಬೆ 2 ವಿಕೆಟ್ ತಮ್ಮದಾಗಿಸಿಕೊಂಡರು. ಪಂದ್ಯಶ್ರೇಷ್ಠ: ಶಿವಂ ದುಬೆ ಸರಣಿ ಶ್ರೇಷ್ಠ: ವಾಷಿಂಗ್ಟನ್ ಸುಂದರ್