Advertisement
ಮೊದಲು ಬ್ಯಾಟ್ ಮಾಡಿದ್ದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ನ್ಯೂಜಿಲೆಂಡ್ 49.2 ಓವರ್‌ಗಳಲ್ಲಿ 337 ರನ್ ಗಳಿಸಿ ಆಲೌಟಾಯಿತು. ಕಿವೀಸ್ ಪರ ಮೈಕೆಲ್ ಬ್ರೇಸ್‌ವೆಲ್ ಎಂತಹ ಪ್ರತಿಹೋರಾಟ ಸಂಘಟಿಸಿದರೆಂದರೆ, ಭಾರತೀಯ ತಂಡ ಬೆಚ್ಚಿ ಬೀಳುವಂತಾಗಿತ್ತು. ಏಕಾಂಗಿಯಾಗಿ ಸಿಡಿದೆದ್ದ ಅವರು ಬಹುತೇಕ ಕಿವೀಸನ್ನು ಗೆಲುವಿನ ಹಂತಕ್ಕೆ ಒಯ್ದಿದ್ದರು. 78 ಎಸೆತ ಎದುರಿಸಿದ ಅವರು 12 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ 140 ರನ್ ಸಿಡಿಸಿದರು. ಕೊನೆಯಲ್ಲಿ ಅವರು ಔಟಾಗುವವರೆಗೂ ಗೆಲುವು ಕಿವೀಸ್ ಕೈಯಲ್ಲೇ ಇತ್ತು. ಒಂದು ವೇಳೆ ಅವರು ಕ್ರೀಸ್‌ನಲ್ಲಿ ಇದ್ದಿದ್ದರೆ ಕಿವೀಸ್ ಗೆಲ್ಲುವುದು ದೊಡ್ಡ ಮಾತೇ ಆಗಿರಲಿಲ್ಲ.
Related Articles
Advertisement
ಒಟ್ಟು 149 ಎಸೆತಗಳನ್ನು ನಿಭಾಯಿಸಿದ ಗಿಲ್ 208 ರನ್ನುಗಳ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಇದು 19 ಬೌಂಡರಿ ಹಾಗೂ 9 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು. ಇದರಲ್ಲಿ 6 ಸಿಕ್ಸರ್ ನೂರೈವತ್ತರ ಗಡಿ ದಾಟಿದ ಬಳಿಕ ಸಿಡಿದಿತ್ತೆಂಬುದು ಗಿಲ್ ಅವರ ಆಟದ ರೀತಿಗೆ ಸಾಕ್ಷಿ. ಆರಂಭದಲ್ಲಿ ಬಹಳ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಗಿಲ್, ಕ್ರೀಸ್ ಆಕ್ರಮಿಸಿಕೊಂಡಂತೆಲ್ಲ ಬ್ಯಾಟಿಂಗ್ ವೇಗವನ್ನು ಹೆಚ್ಚಿಸುತ್ತ ಹೋದರು. ಸಿಂಗಲ್ ರನ್ ಮೂಲಕ ಶತಕ ಪೂರೈಸಿದ ಗಿಲ್, ಬ್ರೇಸ್‌ವೆಲ್ ಅವರ ಎಸೆತವನ್ನು ಡೀಪ್ ಮಿಡ್‌ವಿಕೆಟ್ ಮಾರ್ಗದಲ್ಲಿ ಸಿಕ್ಸರ್‌ಗೆ ಬಡಿದಟ್ಟಿ 150 ರನ್ ಪೂರ್ತಿಗೊಳಿಸಿದರು.
ದ್ವಿಶತಕದ ಗಡಿಯಲ್ಲಂತೂ ತಡೆರಹಿತ ಓಟ. ಲಾಕೀ ಫರ್ಗ್ಯುಸನ್ ಎಸೆದ 49ನೇ ಓವರ್‌ನ ಮೊದಲ 3 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ದ್ವಿಶತಕದ ಸಂಭ್ರಮದಲ್ಲಿ ಮಿಂದೆದ್ದರು. ಗಿಲ್ ಪೆವಿಲಿಯನ್ ಸೇರುವಾಗ ಕೇವಲ 4 ಎಸೆತಗಳು ಬಾಕಿ ಇದ್ದವು.
ಫಲ ಕೊಟ್ಟ ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ದುಕೊಳ್ಳಲು ನಿರ್ಧರಿಸಿದರು. ಆದರೆ ಆರಂಭವೇನೂ ಅಬ್ಬರದಿಂದ ಕೂಡಿರಲಿಲ್ಲ. ರೋಹಿತ್-ಗಿಲ್ ಮೊದಲ ವಿಕೆಟಿಗೆ 60 ರನ್ ಪೇರಿಸಲು 12.1 ಓವರ್ ತೆಗೆದುಕೊಂಡರು. 20ನೇ ಓವರ್ ವೇಳೆ 110 ರನ್ ಆಗುವಾಗ 3 ವಿಕೆಟ್ ಪತನಗೊಂಡಿತು. ರೋಹಿತ್, ಕೊಹ್ಲಿ ಮತ್ತು ಇಶಾನ್ ಪೆವಿಲಿಯನ್ ಸೇರಿಕೊಂಡಿದ್ದರು. ಗಿಲ್-ಸೂರ್ಯಕುಮಾರ್ 4ನೇ ವಿಕೆಟಿಗೆ 65 ರನ್, ಗಿಲ್-ಪಾಂಡ್ಯ 5ನೇ ವಿಕೆಟಿಗೆ 74 ರನ್ ಒಟ್ಟುಗೂಡಿಸಿದರು.
ಶುಭಮನ್ ಗಿಲ್ ಅವರ ಪವರ್ ಹಿಟ್ಟಿಂಗ್ ಪರಾಕ್ರಮದಿಂದಾಗಿ ಭಾರತ ಕೊನೆಯ 5 ಓವರ್‌ಗಳಲ್ಲಿ 57 ರನ್ ರಾಶಿ ಹಾಕಿತು. ಅಂತಿಮ 10 ಓವರ್‌ಗಳಲ್ಲಿ 98 ರನ್ ಹರಿದು ಬಂತು. ಇದರಲ್ಲಿ ಗಿಲ್ ಕೊಡುಗೆಯೇ 74 ರನ್ ಆಗಿತ್ತು. ವಿಶ್ವಕಪ್ ವರ್ಷದಲ್ಲಿ ಭಾರತದ ಬ್ಯಾಟರ್ ಬೃಹತ್ ಇನಿಂಗ್ಸ್ ಕಟ್ಟುತ್ತಿರುವುದೊಂದು ಶುಭ ಸೂಚನೆ.
ಸ್ಕೋರ್ಪಟ್ಟಿಭಾರತ 50 ಓವರ್, 349/8
ರೋಹಿತ್ ಶರ್ಮ ಸಿ ಮಿಚೆಲ್ ಬಿ ಟಿಕ್ನರ್ 34
ಶುಭಮನ್ ಗಿಲ್ ಸಿ ಫಿಲಿಪ್ಸ್ ಬಿ ಶಿಪ್ಲೆ 208
ವಿರಾಟ್ ಕೊಹ್ಲಿ ಬಿ ಸ್ಯಾಂಟ್ನರ್ 8
ಇಶಾನ್ ಕಿಶನ್ ಸಿ ಲ್ಯಾಥಂ ಬಿ ಫರ್ಗ್ಯುಸನ್ 5
ಸೂರ್ಯಕುಮಾರ್ ಸಿ ಸ್ಯಾಂಟ್ನರ್ ಬಿ ಮಿಚೆಲ್ 31
ಹಾರ್ದಿಕ್ ಪಾಂಡ್ಯ ಬಿ ಮಿಚೆಲ್ 28
ವಾಷಿಂಗ್ಟನ್ ಸುಂದರ್ ಎಲ್‌ಬಿಡಬ್ಲ್ಯು ಶಿಪ್ಲೆ 12
ಶಾದೂìಲ್ ಠಾಕೂರ್ ರನೌಟ್ 3
ಕುಲದೀಪ್ ಯಾದವ್ ಔಟಾಗದೆ 5
ಮೊಹಮ್ಮದ್ ಶಮಿ ಔಟಾಗದೆ 2
ಇತರೆ 13 ವಿಕೆಟ್ ಪತನ: 1-60, 2-88, 3-110, 4-175, 5-249, 6-292, 7-302, 8-345. ಬೌಲಿಂಗ್
ಹೆನ್ರಿ ಶಿಪ್ಲೆ 9-0-74-2
ಲಾಕೀ ಫರ್ಗ್ಯುಸನ್ 10-0-77-1
ಬ್ಲೇರ್ ಟಿಕ್ನರ್ 10-0-69-1
ಮಿಚೆಲ್ ಸ್ಯಾಂಟ್ನರ್ 10-0-56-1
ಮೈಕಲ್ ಬ್ರೇಸ್‌ವೆಲ್ 6-0-43-0
ಡೆರಿಲ್ ಮಿಚೆಲ್ 5-0-30-2 ನ್ಯೂಜಿಲೆಂಡ್ 49.2 ಓವರ್, 337
ಫಿನ್ ಅಲೆನ್ ಸಿ ಶಹಬಾಜ್ ಬಿ ಠಾಕೂರ್ 40
ಡೆವೋನ್ ಕಾನ್ವೆ ಸಿ ಕುಲದೀಪ್ ಬಿ ಸಿರಾಜ್ 10
ಹೆನ್ರಿ ನಿಕೋಲ್ಸ್ ಬಿ ಕುಲದೀಪ್ ಯಾದವ್ 18
ಡೆರಿಲ್ ಮಿಚೆಲ್ ಎಲ್ಬಿಡಬ್ಲೂé ಬಿ ಕುಲದೀಪ್ 9
ಟಾಮ್ ಲ್ಯಾಥಮ್ ಸಿ ಸುಂದರ್ ಬಿ ಸಿರಾಜ್ 24
ಗ್ಲೆನ್ ಫಿಲಿಪ್ಸ್ ಬಿ ಮೊಹಮ್ಮದ್ ಶಮಿ 11
ಮೈಕೇಲ್ ಬ್ರೇಸ್‌ವೆಲ್ ಎಲ್ಬಿಡಬ್ಲ್ಯೂ 140
ಸ್ಯಾಂಟ್ನರ್ ಸಿ ಕುಲದೀಪ್ ಬಿ ಸಿರಾಜ್ 57
ಹೆನ್ರಿ ಶಿಪ್ಲೆ ಬಿ ಮೊಹಮ್ಮದ್ ಸಿರಾಜ್ 0
ಫರ್ಗ್ಯುಸನ್ ಸಿ ಶುಭಮನ್ ಬಿ ಪಾಂಡ್ಯ 8
ಬ್ಲೇರ್ ಟಿಕ್ನರ್ ಅಜೇಯ 1
ಇತರೆ 19
ವಿಕೆಟ್ ಪತನ: 1-28, 2-70, 3-78, 4-89, 5-110, 6-131, 7-293, 8-294, 9-328, 10-337. ಬೌಲಿಂಗ್
ಮೊಹಮ್ಮದ್ ಶಮಿ 10-1-69-1
ಮೊಹಮ್ಮದ್ ಸಿರಾಜ್ 10-2-46-4
ಹಾರ್ದಿಕ್ ಪಾಂಡ್ಯ 7-0-70-1
ಕುಲದೀಪ್ ಯಾದವ್ 8-1-43-2
ಶಾದೂìಲ್ ಠಾಕೂರ್ 7.2-0-54-2
ವಾಷಿಂಗ್ಟನ್ ಸುಂದರ್ 7-0-50-0