Advertisement

ಟೆಸ್ಟ್: ಭಾರತದ ಬಿಗು ದಾಳಿಗೆ ಬಾಂಗ್ಲಾ ಹುಲಿಗಳ ಪರದಾಟ

09:47 AM Nov 15, 2019 | Team Udayavani |

ಇಂಧೋರ್: ಟಿ – ಟ್ವೆಂಟಿ ಸರಣಿಯ ನಂತರ ಟೆಸ್ಟ್ ಸರಣಿಗೆ ಅಣಿಯಾದ ಭಾರತ ಮತ್ತು ಬಾಂಗ್ಲಾ ದೇಶ ತಂಡಗಳು ಇಂದು ಇಂಧೋರ್ ನ ಹೋಳ್ಕರ್ ಮೈದಾನದಲ್ಲಿ ಮುಖಾಮುಖಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾ ಭಾರತದ ವೇಗಿಗಳ ದಾಳಿಗೆ ನಲುಗಿದೆ.

Advertisement

ವೇಗಿಗಳಿಗೆ ನೆರವು ನೀಡುವ ಹಸಿರು ಪಿಚ್ ನಲ್ಲಿ ಭಾರತ ಐವರು ಬೌಲರ್ ಗಳೊಂದಿಗೆ ಕಣಕ್ಕಿಳಿಯಿತು. ಬಾಂಗ್ಲಾದ ರನ್ 12 ಆಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಯಾಗಿತ್ತು. ಮೊಹಮ್ಮದ್ ಮಿಥುನ್ 13 ರನ್ ಗಳಿಸಿ ಔಟಾದರು. ಮುಶ್ಫಿಕರ್ ರಹೀಂ ಜೊತೆ 65 ರನ್ ಜೊತೆಯಾಟ ನಡೆಸಿದ ನೂತನ ನಾಯಕ ಮೊಮಿನುಲ್ ಹಕ್ 37 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು.

40 ಓವರ್ ಅಂತ್ಯಕ್ಕೆ ಬಾಂಗ್ಲಾ 100 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ರಹೀಂ 34 ರನ್ ಗಳಿಸಿ ಆಟವಡುತ್ತಿದ್ದಾರೆ.

ಭಾರತದ ಪರ ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರವಿ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next