Advertisement
ಉಳಿದ 3 ಪಂದ್ಯಗಳು ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ, ಇಂಗ್ಲೆಂಡ್-ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ-ಬಾಂಗ್ಲಾದೇಶ ನಡುವೆ ನಡೆಯಲಿವೆ. ಪ್ರತಿಯೊಂದು ತಂಡವೂ 2 ಅಭ್ಯಾಸ ಪಂದ್ಯಗಳನ್ನು ಆಡ ಲಿದೆ. ಭಾರತ ಬುಧ ವಾರ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.
2007ರ ಚೊಚ್ಚಲ ವಿಶ್ವಕಪ್ ಬಳಿಕ ಮತ್ತೆಂದೂ ಚಾಂಪಿಯನ್ ಆಗದ ಟೀಮ್ ಇಂಡಿಯಾ ಕಾಂಗರೂ ನಾಡಿನಲ್ಲಿ ಕಮಾಲ್ ಮಾಡೀತೇ ಎಂಬುದೊಂದು ಕುತೂಹಲ. ಕೂಟದ ಮೊದಲ ಪಂದ್ಯದಲ್ಲೇ ಪಾಕಿಸ್ಥಾನ ವನ್ನು ಎದುರಿಸಬೇಕಾದ ಕಾರಣ ಚಾಂಪಿಯನ್ ಆಸ್ಟ್ರೇಲಿಯವನ್ನು ಮಣಿಸಿ ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವುದು ರೋಹಿತ್ ಪಡೆಯ ಯೋಜನೆ. ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಸೋಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮ ಆಡಿರಲಿಲ್ಲ. ಕೆ.ಎಲ್. ರಾಹುಲ್ ಕಪ್ತಾನನ ಆಟವಾಡಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ಆಸೀಸ್ ವಿರುದ್ಧ ಪೂರ್ಣ ಸಾಮರ್ಥ್ಯದ ತಂಡ ಕಣಕ್ಕಿಳಿಯುವುದು ಬಹುತೇಕ ಖಚಿತ. ಇಲ್ಲಿ ಅವಕಾಶ ಪಡೆಯದವರು ನ್ಯೂಜಿಲ್ಯಾಂಡ್ ವಿರುದ್ಧ ಆಡಬಹುದು.
Related Articles
ಇನ್ನೊಂದೆಡೆ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಗಿರುವ ಕಾರಣ ಆಸ್ಟ್ರೇಲಿಯದ ಮೇಲೆ ಜಾಸ್ತಿ ಒತ್ತಡ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವಿಶ್ವಕಪ್ ಹೀರೋ, ಎಡಗೈ ಆರಂಭ ಕಾರ ಡೇವಿಡ್ ವಾರ್ನರ್ ಕುತ್ತಿಗೆ ನೋವಿ ನಿಂದಾಗಿ ಭಾರತದೆದುರು ಆಡುವ ಸಾಧ್ಯತೆ ಇಲ್ಲ. ಆಸೀಸ್‌ಗೆ ಇದೊಂದು ಹಿನ್ನಡೆ ಆಗಿ ಪರಿಣಮಿಸಬಹುದು. ಆದರೆ ವಾರ್ನರ್ ನ್ಯೂಜಿಲ್ಯಾಂಡ್ ಎದುರಿನ ಆರಂಭಿಕ ಪಂದ್ಯಕ್ಕೆ ಲಭಿಸುವುದರಲ್ಲಿ ಅನು ಮಾನ ವಿಲ್ಲ ಎಂದಿದ್ದಾರೆ ನಾಯಕ ಆರನ್ ಫಿಂಚ್.
Advertisement
ಆರಂಭ: ಬೆಳಗ್ಗೆ 9.30ಪ್ರಸಾರ: ಸ್ಟಾರ್ ಸ್ಪೋರ್ಟ್ಸ್