ಕಾರ್ಕಳ: ಶಾಲಾ ಸಂಸತ್ತಿನ ರಚನೆಯೊಂದಿಗೆ ಮಕ್ಕಳಲ್ಲಿ ನಾಯಕತ್ವ ಗುಣ ಮೈಗೂಡಲಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ, ನಾಯಕತ್ವ ಗುಣ ಬೆಳೆಸುವಲ್ಲಿ ಜೇಸಿಸ್ ವಿದ್ಯಾಸಂಸ್ಥೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ ಎಂದು ಜಿ.ಪಂ. ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ ಅಭಿಪ್ರಾಯಪಟ್ಟರು.
ಜು. 1ರಂದು ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಸಂಸತ್ತು ಉದ್ಘಾಟಿಸಿ ಅವರು ಮಾತನಾಡಿದರು.
ಶಿಸ್ತು, ಸಹನೆ, ಮಾನವೀಯತೆ, ಪರೋಪಕಾರ ಮೊದಲಾದ ನೈತಿಕ ಗುಣಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದರು.
ಕುಂದಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಬಿ. ಹೆಗ್ಡೆ, ಉಮೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೆ. ಸಂತೋಷ್, ಮನೋಹರ್ ಕಾಮತ್, ಶಾಲಾ ಆಡಳಿತಾಧಿಕಾರಿ ಪೂನಂ ಕಾಮತ್, ಶಾಲಾ ಸಂಸತ್ತಿನ ಮಾರ್ಗದರ್ಶಿ ಶಿಕ್ಷಕರಾದ ಮಾಧವಿ, ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಾ ಸ್ವಾಗತಿಸಿ, ಅಲ್ಮಾಜ್ ಕಾರ್ಯಕ್ರಮ ನಿರೂಪಿಸಿದರು. ಧನುಶ್ರೀ ವಂದಿಸಿದರು.